ನಾಳೆ ಹೈಕೋರ್ಟ್ ಚೀಫ್ ಜಸ್ಟಿಸ್ ಕಾರವಾರಕ್ಕೆ

ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು
ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು
Published on
ಕಾರವಾರ: ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿಭು ಬಾಖ್ರು ಹಾಗೂ ಇತರ‌ ನ್ಯಾಯಮೂರ್ತಿಗಳು
ಡಿ.6 ರಂದು ಜಿಲ್ಲೆಗೆ ಆಗಮಿಸುವರು.
ಅಕೋಲಾ ವಕೀಲರ‌ ಸಂಘದ ಕಟ್ಟಡ ಉದ್ಗಾಟಿಸುವರು.
ಡಿ.7 ರಂದು ಕಾರವಾರ ಪರ್ಯಾಯ ವಿವಾದ ತೀರ್ಪುಗಾರಿಕೆ (ADR) ಕಟ್ಟಡವನ್ನು ಉದ್ಘಾಟಿಸುವರು.
ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಕಾರ್ಯ ನಿರ್ವಾಹಕ ಅಧ್ಯಕ್ಷೆ ನ್ಯಾಯಮೂರ್ತಿ ಅನು ಶಿವರಾಮನ್, ಹೈಕೋರ್ಟ್ ಕಾನೂನು ಸೇವಾ ಸಮಿತಿ ಅಧ್ಯಕ್ಷ ನ್ಯಾಯಮೂರ್ತಿ ಎಸ್.ಜಿ.ಪಂಡಿತ್, ಉತ್ತರ ಕನ್ನಡ ಆಡಳಿತಾತ್ಮಕ ನ್ಯಾಯಮೂರ್ತಿ ಪ್ರದೀಪ ಸಿಂಗ್ ಯೇರೂರ್ ಅವರು ಪಾಲ್ಗೊಳ್ಳುವರು.
ಸಂತೆ ಸ್ಥಳಾಂತರ:
ಉಚ್ಛ ನ್ಯಾಯಾಲಯ ಬೆಂಗಳೂರಿನ ನ್ಯಾಯಮೂರ್ತಿಗಳು ಹಾಗೂ ಇನ್ನಿತರ ನ್ಯಾಯಾಮೂರ್ತಿಗಳು ಕಾರವಾರ ನಗರ ವ್ಯಾಪ್ತಿಯಲ್ಲಿ ಡಿ. 6 ಮತ್ತು 7 ರಂದು ಪ್ರವಾಸ ಕೈಗೊಂಡು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದು, ಅವರ ಪ್ರಯಾಣಕ್ಕೆ ಅಡೆತಡೆಯಾಗದಂತೆ ಎಂ.ಜಿ ರಸ್ತೆಯನ್ನು ಅನವು ಮಾಡಲು ಡಿ.7 ರಂದು ಕಾರವಾರ ಸಂತೆಯನ್ನು ದೋಭಿಘಾಟ ರಸ್ತೆಗೆ ತಾತ್ಕಾಲಿಕವಾಗಿ ಸ್ಥಳಾಂತರ ಮಾಡಲಾಗಿದ್ದು, ವ್ಯಾಪಾರಸ್ಥರು ಹಾಗೂ ಸಾರ್ವಜನಿಕರು ಸಹಕರಿಸುವಂತೆ ಕಾರವಾರ ನಗರಸಭೆ ಪೌರಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net