rain ಬಿರುಗಾಳಿ, ಆಲಿಕಲ್ಲು ಸಹಿತ ಭಾರಿ ಮಳೆ

ಹಳಿಯಾಳ ತಾಲೂಕಿನ ಪಾಂಡರವಾಳ ಗ್ರಾಮದಲ್ಲಿ ಮಳೆಗೆ rain ಗ್ರಾಮದ ಕೆರೆ ತುಂಬಿ ಹರಿಯುತ್ತಿರುವುದು.
ಹಳಿಯಾಳ ತಾಲೂಕಿನ ಪಾಂಡರವಾಳ ಗ್ರಾಮದಲ್ಲಿ ಮಳೆಗೆ rain ಗ್ರಾಮದ ಕೆರೆ ತುಂಬಿ ಹರಿಯುತ್ತಿರುವುದು.
Published on
ಹಳಿಯಾಳ: ಪಟ್ಟಣ ಮತ್ತು ಗ್ರಾಮಾಂತರ ಭಾಗದಲ್ಲಿ ಮಂಗಳವಾರ ಸಂಜೆ ಭಾರಿ ಬಿರುಗಾಳಿ ಸಹಿತ rain ಮಳೆಯಾಗಿದ್ದು, ಅಲ್ಲಲ್ಲಿ ಮರಗಳು ಬಿದ್ದು ಹಾನಿ ಸಂಭವಿಸಿದ ಬಗ್ಗೆ ವರದಿಯಾಗಿದೆ.
ಪಟ್ಟಣದ ಬಿಕೆ ಹಳ್ಳಿ ಮಾರ್ಗದಲ್ಲಿ ಹೋಟೆಲ್ವೊಂದರ ಪಕ್ಕದಲ್ಲಿ ಬೃಹತ್ ಮರ ರಸ್ತೆಗೆ ಅಡ್ಡಲಾಗಿ ಬಿದ್ದಿದ್ದರಿಂದ ಹಲವು ಗಂಟೆಗಳ ಕಾಲ ಸಂಚಾರಕ್ಕೆ ವ್ಯತ್ಯಯ ಉಂಟಾಯಿತು. ಮರವು ವಿದ್ಯುತ್ ತಂತಿಯ ಮೇಲೆ ಬಿದ್ದಿದ್ದರಿಂದ ವಿದ್ಯುತ್ ತಂತಿ ಮತ್ತು ವಿದ್ಯುತ್ ಕಂಬಗಳಿಗೂ ಹಾನಿಯಾಗಿದೆ.
ಹಲವಡೆ ಮರದ ಟೊಂಗೆಗಳು ವಿದ್ಯುತ್ ಲೈನ್‌ಗಳ ಮೇಲೆ ಬಿದ್ದಿದ್ದರಿಂದ ಪಟ್ಟಣ ಸೇರಿದಂತೆ ಗ್ರಾಮಾಂತರ ಭಾಗದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿತ್ತು.
ಭಾರಿ ಬಿರುಗಾಳಿ ಮಳೆ ಮತ್ತು ಆಲಿಕಲ್ಲು ಮಳೆಗೆ ಕೋಟ್ಯಂತರ ರೂಪಾಯಿ ಬೆಲೆಬಾಳುವ ಮಾವಿನ ಫಸಲು ಹಾನಿಯಾಗಿದೆ. ಮೊದಲೇ ಮಾವಿನ ಫಸಲು ಈ ಬಾರಿ ಅತಿ ಕಡಿಮೆ ಪ್ರಮಾಣದಲ್ಲಿದೆ.
ಇಂತಹ ಸಂದರ್ಭದಲ್ಲಿ ಬಿರುಗಾಳಿ ಮತ್ತು ಆಲಿಕಲ್ಲು ಮಳೆ ಬಹುತೇಕ ಭಾಗದಲ್ಲಿ ಮಾವಿನ ಕಾಯಿಗಳು ಉದುರಿ ಹಾನಿಗೊಳಗಾದ ಬಗ್ಗೆ ರೈತ ವಲಯ ಮತ್ತು ಮಾವಿನಹಣ್ಣಿನ ವ್ಯಾಪಾರಿಗಳಿಗೂ ನಷ್ಟ ಉಂಟಾಗಿದೆ.

ಪಾಂಡರವಾಳದಲ್ಲಿ ಜಮೀನು ಜಲಾವೃತ

ಹಳಿಯಾಳ: ತಾಲೂಕಿನ ಪಾಂಡರವಾಳ ಗ್ರಾಮದಲ್ಲಿ ಮಂಗಳವಾರ ಸಂಜೆ ಮೇಘ ಸ್ಫೋಟ ಸಂಭವಿಸಿದ್ದು, ಕೇವಲ ಒಂದೇ ತಾಸಿನಲ್ಲಿ ಗ್ರಾಮದ ಕೆರೆ ತುಂಬಿ ಹರಿದಿದೆ.
ಹಳಿಯಾಳ ತಾಲೂಕಿನಲ್ಲಿ ಬಿರುಗಾಳಿಯೊಂದಿಗೆ ವರ್ಷಧಾರೆಯಾಗಿದ್ದು, ಅಲ್ಲಲ್ಲಿ ಆಲಿಕಲ್ಲು ಮಳೆಯಾಗಿದೆ. ಈ ನಡುವೆ ಪಾಂಡರವಾಳ ಗ್ರಾಮದಲ್ಲಿ ಒಂದೇ ತಾಸು ಸುರಿದ ಮಳೆಗೆ ಕೃಷಿ ಜಮೀನುಗಳು ಜಲಾವೃತವಾಗಿವೆ.
ಅಲ್ಲದೆ, ಗ್ರಾಮದ ಕೆರೆ ತುಂಬಿ ಹರಿದಿದ್ದು ಗ್ರಾಮಸ್ಥರನ್ನು ಆಶ್ಚರ್ಯಚಕಿತರನ್ನಾಗಿ ಮಾಡಿದೆ. ಬಿರು ಬೇಸಿಗೆಯ ಈ ಅವಧಿಯಲ್ಲಿ ಬತ್ತುತ್ತಿದ್ದ ಕೆರೆ ಒಂದೇ ತಾಸಿನ ಮಳೆಗೆ ತುಂಬಿ ಹರಿದಿದ್ದಕ್ಕೆ ಮತ್ತು ಕೃಷಿ ಜಮೀನುಗಳು ತಂಪಾಗಿದ್ದಕ್ಕೆ ಗ್ರಾಮಸ್ಥರಲ್ಲಿ ಹರ್ಷದ ವಾತಾವರಣ ಕಂಡುಬಂದಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net