ಕಾರವಾರದಲ್ಲಿ ಉಷ್ಣಾಂಶ ಹೆಚ್ಚಳ: ಯೆಲ್ಲೋ ಅಲರ್ಟ್‌

ಕಾರವಾರದಲ್ಲಿ ರಾತ್ರಿ ಸಂಚರಿಸಿದ ಬೃಹತ್‌ ಕಂಟೇನರ್‌
ಕಾರವಾರದಲ್ಲಿ ರಾತ್ರಿ ಸಂಚರಿಸಿದ ಬೃಹತ್‌ ಕಂಟೇನರ್‌
Published on
ಕಾರವಾರ: ಕರಾವಳಿಯಲ್ಲಿ ಉಷ್ಣಾಂಶ ದ್ವಿಗುಣಗೊಂಡಿದ್ದು, ಇನ್ನೆರಡು ದಿನ ಇದೇ ರೀತಿಯ ವಾತಾವರಣ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮನ್ನೆಚ್ಚರಿಕೆ ನೀಡಿದೆ. ಯೆಲ್ಲೋ ಅಲರ್ಟ್ ಘೋಷಿಸಿದೆ.
ಬುಧವಾರ ಕಾರವಾರದ ಉಷ್ಣಾಂಶದಲ್ಲಿ ಭಾರೀ ಏರಿಕೆ ಕಂಡಿದೆ. ಕಾರವಾರದಲ್ಲಿ 37 ಡಿಗ್ರಿ ಸೆಲ್ಶಿಯಸ್ ಉಷ್ಣಾಂಶ ದಾಖಲಾಗಿತ್ತು. ಮಂಗಳವಾರ 36 ಡಿಗ್ರಿ ಉಷ್ಣಾಂಶ ದಾಖಲಾಗಿತ್ತು. ಶೇ.60 ಕ್ಕಿಂತ ಹೆಚ್ಚು ತೇವಾಂಶವೂ ಇರುವುದರಿಂದ ಜನಕ್ಕೆ ಭಾರಿ ಸೆಕೆಯ ಅನುಭವ ಉಂಟಾಯಿತು.

ಜಾಗರಣೆ:

ಕೈಗಾ ಅಣುವಿದ್ಯುತ್ ಸ್ಥಾವರ ನಿರ್ಮಾನ ಕಾಮಗಾರಿಗಾಗಿ ಬೃಹತ್ ಕಾಂಕ್ರಿಟ್ ಮಿಕ್ಸರ್ ಯಂತ್ರಗಳನ್ನು ಕೊಂಡೊಯ್ಯುವ ಸಲುವಾಗಿ ಮಂಗಳವಾರ ರಾತ್ರಿ ವಿದ್ಯುತ್ ಕಡಿತ ಮಾಡಲಾಗಿತ್ತು. ನಗರ ಪ್ರದೇಶದಲ್ಲಿ ಸುಮಾರು ಒಂದುವರೆ ತಾಸು ವಿದ್ಯುತ್ ಕಡಿತ ಉಂಟಾಯಿತು. ಭಾರಿ ಸೆಕೆ ಇರುವುದರಿಂದ ರಾತ್ರಿ ವಿದ್ಯುತ್ ಇಲ್ಲದೇ ಫ್ಯಾನ್ ಇಲ್ಲದೇ ಜನ ನಿದ್ದೆಗೆಟ್ಟರು. ಇನ್ನು ಯಂತ್ರ ಹೋದಲ್ಲೆಲ್ಲ ವಿದ್ಯುತ್ ಕಡಿತ ಮಾಡಲಾಗಿತ್ತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net