ಆಯೋಜಕರಾದ ಮಂಜುನಾಥ ಎಂ. ಹೆಗಡೆ ದಂಪತಿ ಪೂಜೆ ನೆರವೇರಿಸಿದರು. ಮತ್ತೀಹಳ್ಳಿ, ಕಲ್ಗದ್ದೆ, ತ್ಯಾಗಲಿ ಮತ್ತು ಹಂಗಾರಖಂಡದ ನಾಗಚೌಡೇಶ್ವರಿ ಭಜನಾ ಮಂಡಳಿಯ ಸದಸ್ಯರು ನಡೆಸಿಕೊಟ್ಟ ಭಜನೆ ನೆರೆದಿದ್ದ ಭಕ್ತರ ಮನಸೂರೆಗೊಂಡಿತು. ಪ್ರಸಿದ್ಧ ಭಾಗವತರಾದ ಶ್ರೀನಿವಾಸ ಭಾಗವತ್, ಮದ್ದಲೆಯಲ್ಲಿ ಕುಮಾರ ಮಾಗೋಡುಜಡ್ಡಿ ಹಾಗೂ ಚಂಡೆಯಲ್ಲಿ ವಿಘ್ನೇಶ್ವರ ಗೌಡ ಕೆಸರಕೊಪ್ಪ ಅವರ ನೇತೃತ್ವದಲ್ಲಿ ನಡೆದ ಅಘನಾಶಿನಿ ಆರತಿ ಬೆಳಗಿರೆ... ಎಂಬ ಯಕ್ಷ-ಪದ್ಯ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿತ್ತು.