ಹಿನ್ನೆಲೆ:ಗ್ರೇಟ್ ಬ್ರಿಟನ್‌ನ(ಜಿಬಿಆರ್) ಐರ್ಲ್ಲೆಂಡ್ ದೇಶದ ಯುರೆನೆಕ್ ನಗರದ ನ್ಯಾಶನಲ್ ನ್ಯೂಸ್ ಪೇಪರ್ ಪತ್ರಕರ್ತೆ ವೋನ್ ಮೆರಿ ಮೊರನ್(60) ದೂರು ನೀಡಿದ ವಿದೇಶಿ ಪ್ರವಾಸಿಯಾಗಿದ್ದಾಳೆ.ಕಳೆದ 2023 ಡಿಸೆಂಬರ್ 18 ಮತ್ತು ಈ ವರ್ಷದ ಕಳೆದ ಡಿಸೆಂಬರ್ 3 ರಂದು ತಾನು ಸ್ವತಃ ನೋಡಿದ ನಾಯಿಯ ಮೇಲಿನ ದೌರ್ಜನ್ಯವನ್ನು ಆಕೆ ಪೊಲೀಸ್ ದೂರಿನಲ್ಲಿ ದಾಖಲಿಸಿರುವಳು.ಇಲ್ಲಿನ ಮೇನ್ ಬೀಚ್ ಸಮೀಪದ ರೆಸ್ಟೋರೆಂಟ್ ಒಂದರ ಹಿಂದಿರುವ ಕೆಲವರು ಕಳೆದ ಡಿ.3ರಂದು ಕರಿ ಬಣ್ಣದ ನಾಯಿಯೊಂದಕ್ಕೆ ಅನಾಗರಿಕವಾಗಿ ಮತ್ತು ಕ್ರೂರವಾಗಿ ಹೊಡೆದಿದ್ದಾರೆ.ಇದರಿಂದ ನಾಯಿಯ ಕಾಲು ಮುರಿತಕ್ಕೆ ಒಳಗಾಗಿ ಅದು ತಿರುಗಾಡಲು ಅಸಾಧ್ಯವಾಗಿದೆ.ಇದನ್ನು ಕಂಡ ನಾನು ತೀವ್ರವಾಗಿ ಹಿಂಸೆಗೊಳಗಾದ ನಾಯಿಯನ್ನು ಗೋವಾದ ಕಾಣಕೋಣದಲ್ಲಿರುವ ಪ್ರಾಣಿ ಸಂರಕ್ಷಣಾ ಕೇಂದ್ರ(ಎಆರ್‌ಸಿ)ಕ್ಕೆ ದಾಖಲಿಸಿ ನನ್ನದೇ ಖರ್ಚಿನಲ್ಲಿ ಚಿಕಿತ್ಸೆ ನೀಡಿದ್ದೇನೆ.ನಾಯಿಯ ಮೇಲೆ ಹಿಂಸೆ ಮಾಡುತ್ತಿರುವುದನ್ನು ಯುರೋಪಿನ ಇಬ್ಬರು ಪ್ರವಾಸಿಗರು ಕೂಡ ನೋಡಿದ್ದಾರೆ.ಕಳೆದ ಡಿಸೆಂಬರ್‌ನಲ್ಲಿಯೂ ಇಂತಹದೇ ಜನರ ಗುಂಪು ನಾಯಿಯೊಂದಕ್ಕೆ ಬಲವಾಗಿ ಹೊಡೆದು ಅದರ ಸೊಂಟವನ್ನು ಮುರಿದು ನಂತರ ಅದರ ಸಾವಿಗೆ ಕಾರಣರಾಗಿದ್ದಾರೆ.ತಮ್ಮ ಮನೆಯಲ್ಲಿ ಕೋಳಿಗಳನ್ನು ಸಾಕುವವರು ಬೀಚ್‌ನಲ್ಲಿ ಬಡಿಗೆ ಹಿಡಿದು ಓಡಾಡುತ್ತ ಕೋಳಿಯ ಬಳಿ ನಾಯಿ ಬರುವುದನ್ನು ತಡೆಯಲು ಇಂತಹ ಕ್ರೌರ್ಯಕ್ಕೆ ಮುಂದಾಗುತ್ತಾರೆ.ಕಳೆದ ಡಿ.11 ರಂದು ನಾನು ಕಾಣಕೋಣ ಆಸ್ಪತ್ರೆಗೆ ಸೇರಿಸಿ ಚಿಕಿತ್ಸ ನೀಡಿದ್ದು ಇದರ ಮೇಲೆ ಕ್ರೂರ ದೌರ್ಜನ್ಯ ಎಸಗಿದವರ ವಿರುದ್ಧ ಕಾನೂನಾತ್ಮಕ ಕ್ರಮ ತೆಗೆದುಕೊಳ್ಳುವಂತೆ ದೂರಿನಲ್ಲಿ ತಿಳಿಸಿದ್ದಾಳೆ.ಪಿಎಸ್‌ಐ ಖಾದರ್ ಬಾಷಾ ಪ್ರಕರಣ ದಾಖಲಿಸಿಕೊಂಡು ಪಂಚರ ಸಮಕ್ಷಮ ಸ್ಥಳ ಪರಿಶೀಲನೆ ನಡೆಸಿದರು.ಬ್ರಿಟಿಶ್ ಕಾಲದಿಂದ ಸೇವೆಯಲ್ಲಿರುವ ಗೋಕರ್ಣ ಪೊಲಿಸ್ ಠಾಣೆಯ ಇತಿಹಾಸದಲ್ಲಿ ವಿದೇಶಿಯೋರ್ವಳಿಂದ ಇದೇ ಮೊದಲ ಬಾರಿಗೆ ದಾಖಲಾದ ಅತಿ ಅಪರೂಪದ ದೂರು ಇದಾಗಿದೆ.