ಮುಂಡಗೋಡ: ಜಾತ್ರಾ ಮಂಟಪದಲ್ಲಿ ಪ್ರತಿಷ್ಠಾಪನೆಯಾಗಿದ್ದ ಪಟ್ಟಣದ ಹಳೂರ ಶ್ರೀ ಮಾರಿಕಾಂಬಾದೇವಿಯ (Marikamba) ಜಾತ್ರೆ ಸಂಪನ್ನಗೊಂಡು ದೇವಿಯ ವಿಸರ್ಜನೆ ಮೆರವಣಿಗೆ ಬುಧವಾರ ವಿಧಿ ವಿಧಾನಗಳೊಂದಿಗೆ ಅದ್ದೂರಿಯಾಗಿ ನೆರವೇರಿತು.
ಫೆ. 3ರಂದು ಬೆಳಿಗ್ಗೆ ಅಮ್ಮನವರ ಮಂಗಲ ಕಾರ್ಯದ ನಂತರ ಗಣಹವನ, ನವಚಂಡಿ ಹವನ ಹಾಗೂ ದೈವಿಕ ಕಾರ್ಯಗಳೊಂದಿಗೆ ಆರಂಭವಾಗಿ ಫೆ. 4ರಂದು ಬೆಳಗ್ಗೆ ರಥದಲ್ಲಿ ವಿರಾಜಮಾನಳಾಗಿ ಚೌತಮನೆಯಲ್ಲಿ ಪ್ರತಿಷ್ಠಾಪನೆಯಾಗಿದ್ದಳು.
ಅಮ್ಮನವರ ವಿಸರ್ಜನಾ ಮೆರವಣಿಗೆ ಭಕ್ತರ ಜಯಘೋಷದೊಂದಿಗೆ ಆರಂಭವಾಗಿ ರಾತ್ರಿ 9 ಗಂಟೆಗೆ ಪಟ್ಟಣದ ಶಾಸಕರ ಮಾದರಿ ಶಾಲೆಯ ಆವರಣದಲ್ಲಿರುವ ದೇವಿಯ ಪೀಠದಲ್ಲಿ ವಿಸರ್ಜನೆ ಮುಕ್ತಾಯಗೊಂಡಿತು.
9 ದಿನಗಳಿಂದ ನಡೆದ ಅಮ್ಮನವರ ಜಾತ್ರಾ ಮಹೋತ್ಸವದಲ್ಲಿ ತಾಲೂಕು ಜಿಲ್ಲೆ ಸೇರಿದಂತೆ ವಿವಿಧ ಭಾಗಗಳಿಂದ ಆಗಮಿಸಿದ ಭಕ್ತರು ಅಮ್ಮನವರ ದರ್ಶನ ಪಡೆದು ಪುನಿತರಾದರು.
ಮರು ಪ್ರತಿಷ್ಠಾಪನೆ
ಮಾ. 19ರಂದು ಯುಗಾದಿಯ ಮೂಲ ದಿನ ದೇವಸ್ಥಾನದಲ್ಲಿ ಹೋಮ ಹವನಗಳೊಂದಿಗೆ ಶ್ರೀ ಮಾರಿಕಾಂಬಾ ದೇವಿಯ ಮರು ಪ್ರತಿಷ್ಠಾಪನೆ ನಡೆಯಲಿದೆ.