ಜಿಲ್ಲಾಧಿಕಾರಿ ಅವರಿಗೆ ಮನವಿ ನೀಡಿದ್ದು, ವಿಶೇಷ ಸಭೆ ನಡೆಸಿ, ಕಾಮಗಾರಿ ವಿಳಂಬಕ್ಕೆ ಕಾರಣವೇನು ಎಂಬುದನ್ನು ಕಂಡು ಹಿಡಿದು ಅದಕ್ಕೆ ಪರಿಹಾರ ಹುಡುಕಬೇಕು ಎಂದು ವಿನಂತಿಸಿದ್ದೇವೆ. ಗಡುವು ಮೀರಿದಲ್ಲಿ ಹಳಿಯಾಳದಲ್ಲಿ ತೀವ್ರ ಪ್ರತಿಭಟನೆ ನಡೆಸಲಿದ್ದೇವೆ ಎಂದರು. ಕಬ್ಬು ಬೆಳೆಗಾರರ ಸಂಘದ ಪ್ರಮುಖರಾದ ಅಶೋಕ ಮೇಟಿ, ಮಹೇಶ ಕೋಳೆಕರ್, ಸುರೇಶ ಶಿವಣ್ಣ, ಪುಂಡಲೀಕ ಶಿಂಧೆ ಹಾಗೂ ಇತರರು ಇದ್ದರು.