ಮನೆಯಲ್ಲಿ ಬಾಂಬ್‌ ಸ್ಫೋಟ ಪ್ರಕರಣ ಇಬ್ಬರೂ ಆರೋಪಿಗಳ ಬಂಧನ

ಮುನೇಶ್ವರ
ಮುನೇಶ್ವರ
Published on

ಪ್ರಮುಖ ಮುಖ್ಯಾಂಶಗಳು

  • ಮನೆಯಲ್ಲೇ ಇಟ್ಟುಕೊಂಡಿದ್ದರು ನಾಡ ಬಾಂಬ್‌
  • ಅಕಸ್ಮಾತ್‌ ಸ್ಫೋಟ, ಇಬ್ಬರ ಬಂಧನ
ಹಳಿಯಾಳ: ನಾಡ ಬಾಂಬ್ ಸೋಟದ ಎರಡನೇ ಆರೋಪಿ ಮುನೇಶ್ವರ ವಾಸುದೇವ ಕೊರವರನನ್ನು ಬಂಧಿಸಲಾಗಿದೆ.
ಜೂನ್ 22 ರ ಬೆಳಗಿನಜಾವ ಕಾಳಗಿನಕೊಪ್ಪ ಗ್ರಾಮದಲ್ಲಿ ಬೆಳಗಿನಜಾವ ಭಾರೀ ಸೋಟ ಸಂಭವಿಸಿತ್ತು. ವಾಸುದೇವ ಕೊರವರ ಮನೆ ಸಂಪೂರ್ಣ ಹಾನಿಯಾಗಿತ್ತು. ಅಲ್ಲದೇ, ಸ್ಫೋಟದ ರಭಸಕ್ಕೆ ಪಕ್ಕದ ಮನೆಯಾದ ಮಾರುತಿ ಅಪ್ಪಯ್ಯ ಬಿಡದೋಳಕರ ಹಾಗೂ ಪಕ್ಕದವರ ಮನೆಯ ಹಂಚು, ಅಡುಗೆ ಮನೆಯ ಕಿಟಕಿ, ಸುತ್ತಮುತ್ತಲಿನ ಮನೆಗಳ ಬಾಗಿಲು-ಕಿಟಕಿಗಳು ಒಡೆದು ಲಕ್ಷಾಂತರ ರೂ. ಹಾನಿ ಸಂಭವಿಸಿತ್ತು. ಸೋಟಕ್ಕೆ ಕಾರಣವಾದ ಮನೆಯ ಮಾಲೀಕ ವಾಸುದೇವ ಕೊರವರ ಹಾಗೂ ಮಗ ಮುನೇಶ್ವರ ಕೊರವರ್ ನಾಪತ್ತೆಯಾಗಿದ್ದರು.
ಪರಿಶೀಲನೆ ನಡೆಸಿದಾಗ ವಾಸುದೇವ ಕೊರವರ ಮನೆಯಲ್ಲಿ ನಾಡ ಬಾಂಬ್ ತಯಾರಿಕೆಗೆ ಬಳಸುವ ರಾಸಾಯನಿಕ ಹಾಗೂ ಕಾಡು ಹಂದಿಯ ಕೋರೆ ಹಲ್ಲು ಪತ್ತೆಯಾಗಿತ್ತು. ಅಲ್ಲದೇ, ಗ್ರಾಮದ ಕೆರೆಯ ಬಳಿ ಇನ್ನೆರಡು ಜೀವಂತ ನಾಡ ಬಾಂಬ್‌ಗಳು ಪತ್ತೆಯಾಗಿದ್ದವು. ಮಂಗಳೂರಿನಿಂದ ಬಾಂಬ್ ನಿಷ್ಟ್ರಿಯ ದಳದ ಸಿಬ್ಬಂದಿ ಆಗಮಿಸಿ ಇಡೀ ಗ್ರಾಮದಲ್ಲಿ ಪರಿಶೀಲಿಸಿದ್ದರು. ಜೀವಂತ ಬಾಂಬ್ ಅನ್ನು ನಿಷ್ಟ್ರಿಯಗೊಳಿಸಿದ್ದರು.

ಎಸ್ ಪಿ ಭೇಟಿ ಪರಿಶೀಲನೆ

ವಿಷಯ ತಿಳಿಯುತ್ತಿದ್ದಂತೆ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಅವರು
ಕಾಳಿಗಿನಕೊಪ್ಪ ಗ್ರಾಮಕ್ಕೆ ಭೇಟಿ ನೀಡಿ ವಸ್ತು ಸ್ಥಿತಿ ಪರಿಶೀಲಿಸಿದರು. ಅಲ್ಲದೆ ಅನೇಕ ಮಾಹಿತಿಗಳನ್ನು ಕಲೆ ಹಾಕಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ ಈ ಬಗ್ಗೆ ಈಗಾಗಲೇ ಪ್ರಕರಣ ದಾಖಲಾಗಿದೆ. ಪ್ರಾಥಮಿಕ ತನಿಕೆಯಲ್ಲಿ ಅಕ್ರಮವಾಗಿ ಸ್ಪೋಟಕ ವಸ್ತುಗಳನ್ನು ಸಂಗ್ರಹಿಸಿಟ್ಟ ಬಗ್ಗೆ ದೃಢಪಟ್ಟಿದೆ. ಶ್ವಾನ ದಳ ಮತ್ತು ಬಾಂಬ್ ಸ್ಕ್ವಾಡ್ ದಳದವರು ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಸ್ಥಳಕ್ಕೆ ಡಿವೈಎಸ್ಪಿ ಶಿವಾನಂದ್ ಮದರಖಂಡಿ, ಸಿಪಿಐ ಜೈಪಾಲ್ ಪಾಟೀಲ್ , ಪಿಎಸ್‌ಐ ಕೃಷ್ಣಗೌಡ ಅರಕೇರಿ ಭೇಟಿ ನೀಡಿದ್ದರು.

ತಂದೆ ಬಂಧನ

ವಾಸುದೇವ ಕೊರವರ ಮುನೇಶ್ವರ ಬಂಧನಕ್ಕೆ ತಂಡ ರಚಿಸಿದ್ದು, ಜೂನ್‌ 24 ರಂದು ವಾಸುದೇವ ಕೊರವರ್‌ನನ್ನು ಬಂಧಿಸಲಾಗಿತ್ತು. ಆತ ನೀಡಿದ ಮಾಹಿತಿಯಂತೆ ಶನಿವಾರ ಮಗ ಮುನೇಶ್ವರನನ್ನೂ ಬಂಧಿಸಲಾಗಿದೆ. ಹಳಿಯಾಳ ಸಿಪಿಐ ಜಯಪಾಲ ಪಾಟೀಲ, ಪಿಎಸ್‌ಐಗಳಾದ ಕೃಷ್ಣ ಗೌಡ ಅರಕೆರಿ, ಕಿರಣ ಪಾಟೀಲ, ಮಹಾಂತೇಶ ನಾಯಕ, ಸಿಬ್ಬಂದಿ ಮೊಹಮದ್ ಶಫಿ, ಎಂ.ಎ.ಮುಲ್ಲಾ, ಕೃಷ್ಣ ಬಿಳಿವರಿ, ಬಸವರಾಜ ತೇಲಸಂಗ, ಬಸವರಾಜ ತ್ಯಾಪಿ, ಶ್ರೀಶೈಲ, ಬಸವರಾಜ ಹಗರಿ, ಮಲ್ಲಿಕಾರ್ಜುನ ಕುದರಿ, ವಿನೋದ, ಲಕ್ಷ್ಮಣ ಅರವಿಂದ, ಮಂಜುನಾಥ, ನಿಂಗಪ್ಪ, ತಾಂತ್ರಿಕ ಸಿಬ್ಬಂದಿ ಉದಯ ಗುನಗಾ, ಚಂದ್ರ ಪಾಟೀಲ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net