ಸೋಮವಾರ ಬೆಳಗಿನಜಾವ 5 ಗಂಟೆಯ ಹೊತ್ತಿಗೆ ಗ್ರಾಮದ ವಾಸು ರಾಯಪ್ಪ ಕೊರವರ ಅವರ ಮನೆಯಲ್ಲಿ ಸ್ಪೋಟ ಸಂಭವಿಸಿತ್ತು.ಇಡೀ ಊರು ಭಯಭೀತವಾಗಿತ್ತು. ಸ್ಫೋಟದ ರಭಸಕ್ಕೆ ವಸಂತ ಕೊರವರ ಅವರ ಮನೆಯ ಮೇಲ್ಛಾವಣಿ ಸಂಪೂರ್ಣ ಹಾನಿಯಾಗಿ ಗೋಡೆಗಳು ಬಿದ್ದಿವೆ ಅಲ್ಲದೆ ಸ್ಫೋಟದ ರಭಸಕ್ಕೆ ಪಕ್ಕದ ಮನೆಯಾದ ಮಾರುತಿ ಅಪ್ಪಯ್ಯ ಬಿಡದೋಳಕರ ಹಾಗೂ ಪಕ್ಕದವರ ಮನೆಯ ಹಂಚು, ಅಡುಗೆ ಮನೆಯ ಕಿಟಕಿ, ಸುತ್ತಮುತ್ತಲಿನ ಮನೆಗಳ ಬಾಗಿಲು-ಕಿಟಕಿಗಳು ಒಡೆದು ಲಕ್ಷಾಂತರ ರೂ. ಹಾನಿ ಸಂಭವಿಸಿದ್ದವು. ಆ ಮನೆ ಸುತ್ತಲಿನ ಮನೆಗಳಿಗೂ ಭಾರಿ ಹಾನಿಯಾಗಿತ್ತು. ಮನೆಯ ಮಾಲೀಕ ವಾಸು ರಾಯಪ್ಪ ಕೊರವರ್ ಹಾಗೂ ಮಗ ಮುನೇಶ್ವರ ಕೊರವರ ಓಡಿ ಹೋಗುವಾಗ ಬಾಂಬ್‌ಗಳನ್ನು ಊರಿನ ಕೆರೆಯ ಸಮೀಪ ಎಸೆದು ಹೋಗಿದ್ದರು ಎನ್ನಲಾಗಿದೆ. ಅದನ್ನು ಸೋಮವಾರವೇ ಪೊಲೀಸರು ವಶಕ್ಕೆ ಪಡೆದಿದ್ದರು.