ಸಂಸ್ಕಾರಯುತ ಶಿಕ್ಷಣಕ್ಕೆ ಗುರುಕುಲವೇ ಮಾರ್ಗ

ಹಳಿಯಾಳದ ಮರಾಠ ಭವನದಲ್ಲಿ ಏರ್ಪಡಿಸಿದ್ದ ಮರಾಠಾ ಸಮಾಜದ ಜಾಗೃತಿ ಚಿಂತನ&ಮಂಥನ ಸಭೆಯಲ್ಲಿ ಮಂಗಲಾ ಕಶೀಲ್ಕರ್​ ಅವರನ್ನು ಸನ್ಮಾನಿಸಲಾಯಿತು. ಮರಾಠಾ ಜಗದ್ಗುರು ಶ್ರೀ ಮಂಜುನಾಥ ಭಾರತೀ ಸ್ವಾಮೀಜಿ ಇತರರಿದ್ದರು.
ಹಳಿಯಾಳದ ಮರಾಠ ಭವನದಲ್ಲಿ ಏರ್ಪಡಿಸಿದ್ದ ಮರಾಠಾ ಸಮಾಜದ ಜಾಗೃತಿ ಚಿಂತನ&ಮಂಥನ ಸಭೆಯಲ್ಲಿ ಮಂಗಲಾ ಕಶೀಲ್ಕರ್​ ಅವರನ್ನು ಸನ್ಮಾನಿಸಲಾಯಿತು. ಮರಾಠಾ ಜಗದ್ಗುರು ಶ್ರೀ ಮಂಜುನಾಥ ಭಾರತೀ ಸ್ವಾಮೀಜಿ ಇತರರಿದ್ದರು.
Published on
ಹಳಿಯಾಳ: ಸಂಸ್ಕಾರಯುತ ಮತ್ತು ಮೌಲ್ಯಾಧಾರಿತ ಸಮಾಜ ನಿರ್ಮಾಣಕ್ಕೆ ಗುರುಕುಲ ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸುವುದೇ ಏಕೈಕ ಮಾರ್ಗವಾಗಿದ್ದು, ಆ ನಿಟ್ಟಿನಲ್ಲಿ ಹವಗಿ ಗ್ರಾಮದ ಬಳಿ ಗುರುಕುಲ ನಿರ್ಮಾಣಕ್ಕಾಗಿ ಸಕಲ ಸಿದ್ಧತೆಯನ್ನು ನಡೆಸಲಾಗುತ್ತಿದೆ ಎಂದು ಬೆಂಗಳೂರಿನ ಗೋಸಾಯಿ ಮಹಾಸಂಸ್ಥಾನ ಮಠ, ಭವಾನಿ ಪೀಠದ ಮರಾಠಾ ಜಗದ್ಗುರು, ವೇದಾಂತಾಚಾರ್ಯ ಶ್ರೀ ಮಂಜುನಾಥ ಭಾರತೀ ಸ್ವಾಮೀಜಿ ಹೇಳಿದರು.
ಪಟ್ಟಣದ ಮರಾಠಾ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ ಮರಾಠಾ ಸಮಾಜದ ಜಾಗೃತಿ ಚಿಂತನ&ಮಂಥನ ಸಭೆಯಲ್ಲಿ ಮಾತನಾಡಿದ ಅವರು, ಗುರುಕುಲ ನಿರ್ಮಾಣದ ಮೂಲಕ ಬಡ ಹಾಗೂ ಪ್ರತಿಭಾನ್ವಿತ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವುದರ ಜತೆಗೆ ಧಾಮಿರ್ಕ ಸಂಸ್ಕಾರ, ಆಚಾರ ವಿಚಾರಗಳನ್ನು ನೀಡಲು ಪ್ರಯತ್ನಿಸಲಾಗುತ್ತಿದೆ ಎಂದರು.
ಧರ್ಮ, ದೇಶ ಮತ್ತು ಸಮಾಜದ ವಿಷಯ ಬಂದಾಗ ತಮ್ಮಲ್ಲಿರುವ ಎಲ್ಲ ವೈಯಕ್ತಿಕ ಭಿನ್ನಾಭಿಪ್ರಾಯಗಳನ್ನು ಮರೆತು ಒಂದಾಗಿ ಕೆಲಸ ಮಾಡಬೇಕು. ಯಾವುದೇ ಕಾರಣಕ್ಕೂ ಇಂತಹ ವಿಷಯಗಳಲ್ಲಿ ರಾಜಕಾರಣವನ್ನು ಬೆರೆಸದಂತೆ ಕರೆ ನೀಡಿದರು.
ಸಮಾಜದ ಮುಖಂಡ ಕೃಷ್ಣ ಶಹಾಪುರಕರ ಮಾತನಾಡಿ, ಮೆಕಾಲೆ ಶಿಕ್ಷಣ ಪದ್ಧತಿಯಿಂದ ಭಾರತೀಯ ಶಿಕ್ಷಣದ ಮೌಲ್ಯ ಕುಸಿದಿದೆ. ಕ್ಷಣಿಕ ಸುಖಗಳಿಗೆ ಮಾರುಹೋಗಿ ಸಮಾಜವು ತನ್ನ ಸಂಸತಿ ಕಳೆದುಕೊಳ್ಳುತ್ತಿದೆ. ಆದ್ದರಿಂದ ಗುರುಕುಲ ಪದ್ಧತಿಯ ಪುನರುಜ್ಜೀವನ ಅನಿವಾರ್ಯ ಎಂದರು.
ಶಂಕರ ಬೆಳಗಾಂವಕರ, ಕೆಕೆ ಎಂ ಪಿ ಮುಖಂಡ ಸಂಜು ಕೋಳೂರ, ಪ್ರಾಕ್ಸಿನ್​ ಟೆಕ್​ ಪೆವೇಟ್​ ಲಿಮಿಟೆಡ್​ ಮುಖ್ಯಸ್ಥ ಡಾ. ನಾರಾಯಣ ಠೋಸೂರ ಮಾತನಾಡಿದರು. ಕಾರ್ಯಕ್ರಮದಲ್ಲಿ ಸಾಧಕಿ ಜೀಜಾಮಾತಾ ಮಹಿಳಾ ಸಂದ ಸಂಸ್ಥಾಪಕ ಅಧ್ಯೆ ಮಂಗಲಾ ಕಶೀಲ್ಕರ್​ ಅವರನ್ನು ಸನ್ಮಾನಿಸಲಾಯಿತು. ಸಮಾಜದ ಪ್ರಮುಖರಾದ ಕೃಷ್ಣ ಪಾಟೀಲ, ಬಿಡಿ ಚೌಗುಲೆ, ದೇಮಣ್ಣ ಶಿರೋಜಿ, ಆರ್​ ಎನ್​ ಪಾಟೀಲ್​, ಎಂ.ವಿ. ಘಾಡಿ , ಎಸ್​.ಕೆ. ಯೋಗರಾಜ ಸೇರಿದಂತೆ ಹಲವು ಮುಖಂಡರು, ಮಹಿಳಾ ಮಂಡಳ ಸದಸ್ಯರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net