ಜಿಲ್ಲೆಯಲ್ಲಿ ಒಟ್ಟು 228 ಗ್ರಾಮ ಪಂಚಾಯಿತಿಗಳಲ್ಲಿ 2642 ಸದಸ್ಯರ ಸಂಖ್ಯೆಯನ್ನು ನಿಗದಿ ಮಾಡಲಾಗಿದೆ. ಕಾರವಾರದಲ್ಲಿ 18 ಗ್ರಾಪಂಗಳಿಗೆ -226 ಸದಸ್ಯರು, ಅಂಕೋಲಾ-21 ಗ್ರಾಪಂಗಳಿಗೆ 226 ಸದಸ್ಯರು, ಕುಮಟಾ-22 ಗ್ರಾಪಂಗಳಿಗೆ 321 ಸದಸ್ಯರು, ಹೊನ್ನಾವರ -26 ಗ್ರಾಪಂಗಳಿಗೆ 333 ಸದಸ್ಯರು, ಭಟ್ಕಳ -15 ಗ್ರಾಪಂಗಳಿಗೆ 254 ಸದಸ್ಯರು, ಶಿರಸಿ- 32 ಗ್ರಾಪಂಗಳಿಗೆ 323 ಸದಸ್ಯರು, ಸಿದ್ದಾಪುರ-23 ಗ್ರಾಪಂಗಳಿಗೆ 221, ಯಲ್ಲಾಪುರ-15 ಗ್ರಾಪಂಗಳಿಗೆ 158 ಸದಸ್ಯರು, ಮುಂಡಗೋಡ-16 ಗ್ರಾಪಂಗಳಿಗೆ 194 ಸದಸ್ಯರು, ಹಳಿಯಾಳ-20 ಗ್ರಾಪಂಗಳಿಗೆ 212, ಜೊಯಿಡಾ-16 ಗ್ರಾಪಂಗಳಿಗೆ 137, ದಾಂಡೇಲಿ-4 ಗ್ರಾಪಂ 37 ಸದಸ್ಯರನ್ನು ನಿಗದಿ ಮಾಡಿ ಆದೇಶ ಹೊರಡಿಸಲಾಗಿದೆ.