ಕಾರವಾರ: ಕಬ್ಬಿನ ಪ್ರೋತ್ಸಹಧನ 100 ರೂ.ಗಳು ಹಳಿಯಾಳ ಹಾಗೂ ಇತರೆಡೆಯ ರೈತರ ಖಾತೆಗೆ ಜಮಾ ಆಗಿದೆ ಎಂದು ಜಿಲ್ಲಾಽಕಾರಿ ಕೆ.ಲಕ್ಷ್ಮೀಪ್ರಿಯಾ ತಿಳಿಸಿದ್ದಾರೆ.
ರಾಜ್ಯದ ಸಕ್ಕರೆ ಕಾರ್ಖಾನೆಗೆ ಕಬ್ಬು ಸರಬರಾಜು ಮಾಡಿದ ರೈತರಿಗೆ ಸರ್ಕಾರ ಪ್ರತಿ ಟನ್‌ಗೆ 50 ರೂ. ಪ್ರೋತ್ಸಾಹಧನ ಘೋಷಿಸಿತ್ತು. ಅಲ್ಲದೇ, ಸಕ್ಕರೆ ಖಾರ್ಖಾನೆಗಳು ಟನ್‌ಗೆ 50 ರೂ. ಸೇರಿಸಿ ಪ್ರೋತ್ಸಾಹಧನವನ್ನು ರೈತರಿಗೆ ವಿತರಿಸುವಂತೆ ಸೂಚಿಸಲಾಗಿತ್ತು.
ಹಳಿಯಾಳದ ಇಐಡಿ ಪ್ಯಾರಿ ಸಕ್ಕರೆ ಕಾರ್ಖಾನೆ ಈ ಹಂಗಾಮಿನಲಲ್ಲಿ ಫೆ.15 ರವರೆಗೆ 11,15,971 ಮೆಟ್ರಿಕ್ ಟನ್ ಕಬ್ಬು ಅರೆದಿದ್ದು. ಅದಕ್ಕಾಗಿ 14,082 ರೈತರು ಕಬ್ಬು ಪೂರೈಸಿದ್ದಾರೆ.
ಸರ್ಕಾರ ಕಾರ್ಖಾನೆಗೆ ತನ್ನ ಪಾಲಿನ 5.57 ಕೋಟಿ ರೂ. ಬಿಡುಗಡೆ ಮಾಡಿದ್ದು, ಕಾರ್ಖಾನೆಯು ಸರ್ಕಾರದ ಪ್ರೋತ್ಸಹಾಧನದ ಜೊತೆ ತನ್ನ ಪಾಲಿನ 50 ರೂ. ಪ್ರೋತ್ಸಾಹಧನ ಸೇರಿಸಿ ಪ್ರತಿ ಟನ್‌ಗೆ 100 ರೂ.ನಂತೆ ಒಟ್ಟು 11.15 ಕೋಟಿ ರೂ. ಪ್ರೋತ್ಸಾಹಧನವನ್ನು ರೈತರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗಿದೆ ಎಂದು ವರದಿ ನೀಡಿದೆ ಎಂದು ಡಿಸಿ ತಿಳಿಸಿದ್ದಾರೆ.