ಗೋಡೆ ನಾರಾಯಣಗೆ ಯಕ್ಷನಾಟ್ಯ ಅನುಗ್ರಹ ಪ್ರಶಸ್ತಿ

ಸಿದ್ದಾಪುರ ತಾಲೂಕಿನ ಕಲಗದ್ದೆಯಲ್ಲಿ ಗೋಡೆನಾರಾಯಣ ಹೆಗಡೆ ಅವರಿಗೆ ಯಕ್ಷನಾಟ್ಯ ಅನುಗ್ರಹ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಆರ್.ಎಂ. ಹೆಗಡೆ, ಮೋಹನ ಹೆಗಡೆ, ವಿನಾಯಕ ಹೆಗಡೆ, ಸುರೇಶ್ಚಂದ್ರ ಹೆಗಡೆ, ಕೇಶವ ಹೆಗಡೆ, ವಿ. ಶೇಷಗಿರಿ ಭಟ್ಟ ಇತರರಿದ್ದರು.
ಸಿದ್ದಾಪುರ ತಾಲೂಕಿನ ಕಲಗದ್ದೆಯಲ್ಲಿ ಗೋಡೆನಾರಾಯಣ ಹೆಗಡೆ ಅವರಿಗೆ ಯಕ್ಷನಾಟ್ಯ ಅನುಗ್ರಹ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಆರ್.ಎಂ. ಹೆಗಡೆ, ಮೋಹನ ಹೆಗಡೆ, ವಿನಾಯಕ ಹೆಗಡೆ, ಸುರೇಶ್ಚಂದ್ರ ಹೆಗಡೆ, ಕೇಶವ ಹೆಗಡೆ, ವಿ. ಶೇಷಗಿರಿ ಭಟ್ಟ ಇತರರಿದ್ದರು.
Published on
ಸಿದ್ದಾಪುರ: ತಾಲೂಕಿನ ಕಲಗದ್ದೆಯ ಶ್ರೀ ನಾಟ್ಯವಿನಾಯಕ ದೇವಸ್ಥಾನದಲ್ಲಿ ನಡೆದ ಮೋದಕ ಸೇವಾ ಸಂವತ್ಸರದ ಮಹಾ ಸಮಾರೋಪದಲ್ಲಿ ಮಂಗಳೂರಿನ ಅರೆಹೊಳೆ ನಂದಗೋಕುಲ ತಂಡದಿಂದ ನೃತ್ಯವೈಭವ ಸಮರ್ಪಣೆ, ಗೋಡೆನಾರಾಯಣ ಹೆಗಡೆ ಅವರಿಗೆ ಯಕ್ಷನಾಟ್ಯ ಅನುಗ್ರಹ ಪ್ರಶಸ್ತಿ ಗೌರವ ಹಾಗೂ ಶಂಭುಶಿಷ್ಯ ಯಕ್ಷಗಾನ ಪ್ರತಿಷ್ಠಾನದವರಿಂದ ಗದಾಯುದ್ಧ ಯಕ್ಷಗಾನ ಪ್ರದರ್ಶನಗೊಂಡಿತು.
ಅರೆಹೊಳೆ ಶ್ವೇತಾ ನಿರ್ದೇಶನದ ನೃತ್ಯಗಳು ಕಲಾಸಕ್ತರ ಮನಸೆಳೆಯಿತು. ಇದೇ ಸಂದರ್ಭದಲ್ಲಿ ಹಿರಿಯ ಯಕ್ಷಗಾನ ಕಲಾವಿದ ಗೋಡೆ ನಾರಾಯಣ ಹೆಗಡೆ ಅವರಿಗೆ ಯಕ್ಷನಾಟ್ಯ ಅನುಗ್ರಹ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಹಕಾರಿ ರತ್ನ ಪುರಸ್ಕೃತ ಆರ್.ಎಂ. ಹೆಗಡೆ ಬಾಳೇಸರ, ಶಾಸನ ತಂತ್ರದ ಅಧ್ಯಕ್ಷ ಮೋಹನ ಭಾಸ್ಕರ ಹೆಗಡೆ ಹೆರವಟ್ಟ, ಧಾರವಾಡ ಹಾಲು ಒಕ್ಕೂಟದ ಉಪಾಧ್ಯಕ್ಷ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ, ವಿ. ಶೇಷಗಿರಿ ಭಟ್ಟ ಗುಂಜಗೋಡ, ವಿನಾಯಕ ಹೆಗಡೆ ಕಲಗದ್ದೆ, ಕೇಶವ ಹೆಗಡೆ ಕೊಳಗಿ ಇತರರಿದ್ದರು. ಗಣಪತಿ ಹೆಗಡೆ ಗುಂಜಗೋಡ ನಿರ್ವಹಿಸಿದರು.
ನಂತರ ಪ್ರದರ್ಶಗೊಂಡ ಗದಾಯುದ್ಧ ಯಕ್ಷಗಾನದ ಹಿಮ್ಮೇಳದಲ್ಲಿ ಕೇಶವ ಹೆಗಡೆ ಕೊಳಗಿ, ಶಂಕರ ಭಾಗವತ್ ಯಲ್ಲಾಪುರ, ಗಣೇಶ ಗಾಂವಕರ್ ಸಹಕರಿಸಿದರು. ಮುಮ್ಮೇಳದಲ್ಲಿ ಹಿರಿಯ ಕಲಾವಿದರಾದ ಗೋಡೆ ನಾರಾಯಣ ಹೆಗಡೆ, ವಿನಾಯಕ ಹೆಗಡೆ ಕಲಗದ್ದೆ, ಅಶೋಕ ಭಟ್ಟ ಸಿದ್ದಾಪುರ, ವಿನಯ ಬೇರೊಳ್ಳಿ, ವೆಂಕಟೇಶ ಬೊಗರಿಮಕ್ಕಿ, ವಿನಯ ಹೊಸ್ತೋಟ, ತುಳಸಿ ಹೆಗಡೆ ವಿವಿಧ ಪಾತ್ರನಿರ್ವಹಿಸಿ ಮೆಚ್ಚುಗೆ ಗಳಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net