ಗೊಬ್ಬರ ವಿತರಣೆಯಲ್ಲಿ ತಾಲೂಕಿನವರಿಗೆ ಆದ್ಯತೆ ನೀಡಿ

ಮುಂಡಗೋಡ ತಹಸೀಲ್ದಾರ್ ಕಚೇರಿಯ ಸಭಾಂಗಣದಲ್ಲಿ ರಸಗೊಬ್ಬರ ಮಾರಾಟಗಾರರ ಸಭೆ ನಡೆಯಿತು. ಪಾಂಡು ಕೆ.ಎಚ್., ರಂಗನಾಥ ನೀಲಮ್ಮನವರ, ಶಿವಾನಂದ ಹಾವೇರಿ ಮತ್ತಿತರರಿದ್ದರು.
ಮುಂಡಗೋಡ ತಹಸೀಲ್ದಾರ್ ಕಚೇರಿಯ ಸಭಾಂಗಣದಲ್ಲಿ ರಸಗೊಬ್ಬರ ಮಾರಾಟಗಾರರ ಸಭೆ ನಡೆಯಿತು. ಪಾಂಡು ಕೆ.ಎಚ್., ರಂಗನಾಥ ನೀಲಮ್ಮನವರ, ಶಿವಾನಂದ ಹಾವೇರಿ ಮತ್ತಿತರರಿದ್ದರು.
Published on
ಮುಂಡಗೋಡ: ಸರ್ಕಾರದ ನಿರ್ದೇಶನದಂತೆ ಯೂರಿಯಾ ಗೊಬ್ಬರವನ್ನು ಆ್ಯಪ್ ಮುಖಾಂತರ ಎಫ್‌ಐಡಿ ಹೊಂದಿಸಿ ತಾಲೂಕಿನ ರೈತರಿಗೆ ಪ್ರತಿ ಎಕರೆಗೆ ಒಂದು ಚೀಲದಂತೆ ವಿತರಣೆ ಮಾಡಬೇಕು. ತಾಲೂಕಿನ ರೈತರಿಗೆ ಮೊದಲ ಆದ್ಯತೆ ನೀಡಿ ಕಡ್ಡಾಯವಾಗಿ ಬಿಲ್ ನೀಡುವಂತೆ ಕೃಷಿ ಉಪ ನಿರ್ದೇಶಕ ಪಾಂಡು ಕೆ.ಎಚ್. ಹೇಳಿದರು.
ಪಟ್ಟಣದ ತಹಸೀಲ್ದಾರ್ ಕಚೇರಿಯ ಸಭಾಂಗಣದಲ್ಲಿ ತಾಲೂಕಿನ ರಸಗೊಬ್ಬರ ಮಾರಾಟಗಾರರ ಸಭೆಯಲ್ಲಿ ಅವರು ಮಾತನಾಡಿದರು.
ಸಿಪಿಐ ರಂಗನಾಥ ನೀಲಮ್ಮನವರ ಮಾತನಾಡಿ, ಸರ್ಕಾರ ನಿಗದಿಪಡಿಸಿದ ಬೆಲೆಗೆ ತಾಲೂಕಿನ ರೈತರಿಗೆ ಮಾತ್ರ ರಸಗೊಬ್ಬರ ವಿತರಣೆ ಮಾಡಬೇಕು. ತಾಲೂಕಿನಲ್ಲಿ ಯೂರಿಯಾ ಹಾಗೂ ಇತರ ರಸಗೊಬ್ಬರಕ್ಕೆ ಹೆಚ್ಚಿನ ಬೇಡಿಕೆ ಇದ್ದು, ಯಾವುದೇ ರೀತಿಯ ತೊಂದರೆ ಉಂಟಾಗದಂತೆ ಕ್ರಮ ಕೈಗೊಳ್ಳಬೇಕು ಎಂದರು.
ವಿಕ್ಷಣಾದಳದ ಸಹಾಯಕ ಕೃಷಿ ನಿರ್ದೇಶಕ ಶಿವಾನಂದ ಹಾವೇರಿ ಮಾತನಾಡಿ, ಯೂರಿಯಾ ಕುರಿತಂತೆ ವೀಕ್ಷಣಾ ಸಮಿತಿ ಅಸ್ತಿತ್ವದಲ್ಲಿದ್ದು, ಪ್ರತಿಯೊಂದು ಹಂತದಲ್ಲಿ ಚಟುವಟಿಕೆ ಪರಿಶೀಲನೆ ಮಾಡಿ ಅಕ್ರಮ ಕಂಡು ಬಂದರೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.
ಸಹಾಯಕ ಕೃಷಿ ನಿರ್ದೇಶಕ ಕೆ.ಎನ್. ಮಹಾರೆಡ್ಡಿ, ಈರಣ್ಣ ಯಕ್ಕುಂಡಿ , ಆತ್ಮಾ ಸಿಬ್ಬಂದಿ ಹಾಗೂ ರಸಗೊಬ್ಬರ ಮಾರಾಟಗಾರರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net