ಶುಚಿತ್ವಕ್ಕೆ ಹೆಚ್ಚಿನ ಆದ್ಯತೆ ನೀಡಲಿ

ಯಲ್ಲಾಪುರದ ರಾಮಾಪುರ ಪ್ರಾಥಮಿಕ ಶಾಲೆಗೆ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಭೇಟಿ ನೀಡಿ ವಿದ್ಯಾರ್ಥಿಗಳ ಜತೆ ಸಂವಾದ ನಡೆಸಿದರು. ದಿಲೀಷ್ ಶಶಿ, ಜುಪಿಶಾನಾ ಹಕ್, ಚಂದ್ರಶೇಖರ ಹೋಸ್ಮನಿ, ತಾಪಂ ಇಒ ರಾಜೇಶ ಧನವಾಡಕರ್ ಇತರರಿದ್ದರು.
ಯಲ್ಲಾಪುರದ ರಾಮಾಪುರ ಪ್ರಾಥಮಿಕ ಶಾಲೆಗೆ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಭೇಟಿ ನೀಡಿ ವಿದ್ಯಾರ್ಥಿಗಳ ಜತೆ ಸಂವಾದ ನಡೆಸಿದರು. ದಿಲೀಷ್ ಶಶಿ, ಜುಪಿಶಾನಾ ಹಕ್, ಚಂದ್ರಶೇಖರ ಹೋಸ್ಮನಿ, ತಾಪಂ ಇಒ ರಾಜೇಶ ಧನವಾಡಕರ್ ಇತರರಿದ್ದರು.
Published on
ಯಲ್ಲಾಪುರ: ಪಟ್ಟಣದ ರಾಮಾಪುರ ಪ್ರಾಥಮಿಕ ಶಾಲೆಗೆ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಶುಕ್ರವಾರ ಭೇಟಿ ನೀಡಿದರು.
ವಿದ್ಯಾರ್ಥಿಗಳ ಜತೆ ನೆಲದ ಮೇಲೆ ಕುಳಿತು, ಶೈಕ್ಷಣಿಕ ಚಟುವಟಿಕೆಗಳ ಕುರಿತು ಸಂವಾದ ನಡೆಸಿದರು. ಪಠ್ಯ, ಪಠ್ಯೇತರ ಚಟುವಟಿಕೆಗಳ ಬಗ್ಗೆ ವಿದ್ಯಾರ್ಥಿಗಳು ಜಿಲ್ಲಾಧಿಕಾರಿಗಳೊಂದಿಗೆ ಮುಕ್ತವಾಗಿ ಮಾತುಕತೆ ನಡೆಸಿದರು.
ಇದೇ ವೇಳೆ ಶಾಲೆಯ ಅಡುಗೆ ಕೋಣೆಯನ್ನು ಪರಿಶೀಲಿಸಿದ ಜಿಲ್ಲಾಧಿಕಾರಿ, ಶುಚಿತ್ವಕ್ಕೆ ಹೆಚ್ಚಿನ ಆದ್ಯತೆ ನೀಡುವಂತೆ ಸಿಬ್ಬಂದಿಗೆ ಹಾಗೂ ಶಿಕ್ಷಕರಿಗೆ ಸೂಚನೆ ನೀಡಿದರು.
ಕಾಳಮ್ಮನಗರದ ನ್ಯಾಯಬೆಲೆ ಅಂಗಡಿಗೆ ದಿಢೀರ್ ಭೇಟಿ ನೀಡಿದ ಅವರು, ಪಡಿತರ ವಿತರಣಾ ವ್ಯವಸ್ಥೆಯನ್ನು ಪರಿಶೀಲಿಸಿದರು. ಪಡಿತರ ದಾಸ್ತಾನು ಪರಿಶೀಲನೆ ನಡೆಸಿ, ಸಮರ್ಪಕವಾಗಿ ಪಡಿತರ ವಿತರಣೆ ನಡೆಸುವ ಕುರಿತು ನಿರ್ದೇಶನ ನೀಡಿದರು. ನಂತರ ಸಮೀಪದ ಬಿಸಿಎಂ ವಿದ್ಯಾರ್ಥಿ ನಿಲಯಕ್ಕೂ ಜಿಲ್ಲಾಧಿಕಾರಿ ಭೇಟಿ ನೀಡಿದರು. ವಿದ್ಯಾರ್ಥಿಗಳಿಗೆ ಯಾವುದೇ ಕೊರತೆಯಾಗದಂತೆ ನೋಡಿಕೊಳ್ಳುವ ಬಗ್ಗೆ ನಿಲಯದ ಮೇಲ್ವಿಚಾರಕರಿಗೆ ಕಟ್ಟುನಿಟ್ಟಾದ ಸೂಚನೆ ನೀಡಿದರು.
ಜಿಪಂ ಸಿಇಒ ದಿಲೀಷ್ ಶಶಿ, ತಹಸೀಲ್ದಾರ್ ಜುಪಿಶಾನಾ ಹಕ್, ಚಂದ್ರಶೇಖರ ಹೋಸ್ಮನಿ, ತಾಪಂ ಇಒ ರಾಜೇಶ ಧನವಾಡಕರ್, ಪಪಂ ಮುಖ್ಯಾಧಿಕಾರಿ ಕುಮಾರ ನಾಯ್ಕ, ತಾಪಂ ಲೆಕ್ಕಾಧಿಕಾರಿ ಮೋಹನ, ಆಹಾರ ಮತ್ತು ಪಡಿತರ ಇಲಾಖೆಯ ಅಧಿಕಾರಿ ರಾಘವೇಂದ್ರ ಗೌಡ, ಸಮಾಜ ಕಲ್ಯಾಣ ಇಲಾಖೆಯ ದಾಕ್ಷಾಯಣಿ ನಾಯ್ಕ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net