GangaRati ಗಣೇಶಪಾಲ್ ನದಿ ಸಂಗಮದಲ್ಲಿ ಗಂಗಾರತಿ

ಶಿರಸಿ ತಾಲೂಕು ಗಣೇಶಪಾಲ್‌ನಲ್ಲಿ ಗಂಗಾರತಿ gangarati ಕಾರ್ಯಕ್ರಮ ನಡೆಯಿತು.
ಶಿರಸಿ ತಾಲೂಕು ಗಣೇಶಪಾಲ್‌ನಲ್ಲಿ ಗಂಗಾರತಿ gangarati ಕಾರ್ಯಕ್ರಮ ನಡೆಯಿತು.
Published on
ಶಿರಸಿ: ಇಲ್ಲಿಯ ಗಣೇಶಪಾಲ್‌ನಲ್ಲಿ ಶಾಲ್ಮಲಾ ನದಿಗೆ ಗುರುವಾರ ಸಂಜೆ ಬೇಡ್ತಿ-ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ಆಶ್ರಯದಲ್ಲಿ ನದಿ ಪೂಜೆ ನಡೆಸಲಾಯಿತು.
ವನವಾಸಿಗಳು, ರೈತರು, ಮಹಿಳೆಯರೂ ಸೇರಿದಂತೆ ನೂರಾರು ಜನ ಪೂಜಾ ಕಾರ್ಯಕ್ರಮದಲ್ಲಿ ಭಾಗಿಯಾದ್ದರು.
ಗಂಗಾವಳಿ ಎಂದೇ ಕರೆಯುವ ಬೇಡ್ತಿ ನದಿಕಣಿವೆಯಲ್ಲಿ ನಡೆದ gangarati ಗಂಗಾರತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬೇಡ್ತಿ ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ, ನದಿ ತಿರುಗಿಸುವ ಆತಂಕ ನಮ್ಮನ್ನೆಲ್ಲ ಕಾಡುತ್ತಿದೆ.
ಪೂಜ್ಯ ಶ್ರೀಗಳ ನೇತೃತ್ವದಲ್ಲಿ ನಡೆಯುತ್ತಿರುವ ನಮ್ಮ ಜಾಗೃತಿ ಅಭಿಯಾನಕ್ಕೆ ಶಕ್ತಿ ತುಂಬುವ ಕಾರ್ಯ ಇದು. ಗಣೇಶ್‌ಪಾಲ್ ಗಣಪನ ರಕ್ಷಣೆಗೆ 13 ವರ್ಷ ಹಿಂದೇ ಅಹಿಂಸಾತ್ಮಕ ಯುದ್ಧ ನಡೆಸಿ ಜಯಗಳಿಸಿದ್ದೇವೆ. ವನವಾಸಿಗಳು ರಾತ್ರಿ ಸಂದರ್ಭದಲ್ಲೂ ಗಣೇಶಪಾಲ್‌ಗೆ ಬಂದು ನದಿ ಗಣೇಶನ ಪೂಜೆ ಸಲ್ಲಿಸುವ ಪರಂಪರೆ ಅದ್ಭುತ ಸಂಗತಿ.
ಶಾಲ್ಮಲಾ ನದಿ ಸಂರಕ್ಷಿತ ಪ್ರದೇಶದಲ್ಲಿ ನದಿ ತಿರುವು ಯೋಜನೆ ಜಾರಿಗೆ ವನ್ಯ ಜೀವಿ ಕಾಯ್ದೆ ಅಡ್ಡ ಬರಲಿದೆ. ಪೂಜ್ಯ ಸ್ವರ್ಣವಲ್ಲೀ ಸ್ವಾಮೀಜಿ ಗಂಗಾರತಿಗೆ ಕರೆ ನೀಡಿದ ಒಂದೇ ದಿನದಲ್ಲಿ ನದಿ ಪೂಜೆ ಕಾರ್ಯಕ್ರಮ ಸಂಘಟಿಸಿದ ಮೆಣಸಿ ಮತ್ತು ಭರತನಳ್ಳಿ ಸೀಮಾ ಪ್ರಮುಖರ ಕಾರ್ಯ ಶ್ಲಾಘನೀಯ ಎಂದರು.
ಬೇಡ್ತಿ ಸಮೀತಿ ಸಂಚಾಲಕ ರಮಾಕಾಂತ ಮಂಡೇಮನೆ ಸ್ವಾಗತಿಸಿದರು. ಸುಮಂಗಲಾ ಸಂಗಡಿಗರು ಪರಿಸರ ಗೀತೆ ಹಾಡಿದರು. ಮೆಣಸಿ ಸೀಮಾಧ್ಯಕ್ಷ ರಾಜಾರಾಮ ಭಟ್ ಹಾಗೂ ಭರತನಳ್ಳಿ ಸೀಮೆಯ ನಾರಾಯಣ ಭಟ್ ಪೂಜೆ ನೆರವೇರಿಸಿದರು.
ಸಾಮಾಜಿಕ ಕಾರ್ಯಕರ್ತ ಗಣಪತಿ ಹಿರೇಸರ ಘೋಷಣೆ ಮೊಳಗಿಸಿದರು. ಸಂಸ್ಕೃತ ಭಾರತಿಯ ರಾಷ್ಟ್ರೀಯ ಕಾರ್ಯದರ್ಶಿ ಸತ್ಯನಾರಾಯಣ್, ಸುಬ್ಬಣ್ಣ ಇಳೇಹಳ್ಳಿ, ಮಾತೃ ಮಂಡಳಿಯವರು ಸೇರಿದಂತೆ ಸಾವಿರಾರು ಜನರು ಗಂಗಾರತಿಯಲ್ಲಿ ಪಾಲ್ಗೊಂಡಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net