ಕಪ್ಪೆ ಚಿಪ್ಪು ದುರಂತ 8 ದೇಹಗಳ ಸಾಮೂಹಿಕ ಅಂತ್ಯ ಸಂಸ್ಕಾರ

ಮೃತರಿಗೆ ಸಚಿವ ಮಂಕಾಳ ವೈದ್ಯ ಅಂತಿಮ ನಮನ ಸಲ್ಲಿಸಿದರು.
ಮೃತರಿಗೆ ಸಚಿವ ಮಂಕಾಳ ವೈದ್ಯ ಅಂತಿಮ ನಮನ ಸಲ್ಲಿಸಿದರು.
Published on
ಭಟ್ಕಳ: ಕಪ್ಪೆಚಿಪು÷್ಪ (ಚಿಪ್ಪಿಕಲ್ಲು) ಸಂಗ್ರಹಿಸಲು ತಾಲೂಕಿನ ಪಳ್ಳಿ ಹೊಳೆಗೆ ಹೋಗಿದ್ದಾಗ ಸಂಭವಿಸಿದ ದುರಂತರದಲ್ಲಿ ನಾಪತ್ತೆಯಾಗಿದ್ದ ಮಾದೇವ ನಾಯ್ಕ ಅವರ ಮೃತ ದೇಹ ಸೋಮವಾರ ಪತ್ತೆಯಾಗಿದೆ. ದುರ್ಘಟನೆಯಲ್ಲಿ ಮೃತರ ಸಂಖ್ಯೆ 11 ಕ್ಕೆ ಏರಿಕೆಯಾಗಿದೆ. ಸೋಮವಾರ ಪಡು ಶಿರಾಲಿಯಲ್ಲಿ ಮೃತರ ಸಾಮೂಹಿಕ ಅಂತ್ಯಸಂಸ್ಕಾರ ನಡೆಸಲಾಯಿತು.
ಇದೇ ದುರ್ಘಟನೆಯಲ್ಲಿ ಮೂವರು ಮಹಿಳೆಯರು ಅಸ್ವಸ್ಥರಾಗಿದ್ದು, ಅವರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದು, ಚೇತರಿಸಿಕೊಳ್ಳುತ್ತಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ, ಮಾಜಿ ಶಾಸಕ ಸುನೀಲ ನಾಯ್ಕ, ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ, ಎಸ್‌ಪಿ ದೀಪನ್ ಸೇರಿ ಹಲವು ಗಣ್ಯರು, ಅಽಕಾರಿಗಳಿದ್ದರು. ಇಡೀ ಊರು ದುಖಃದಲ್ಲಿ ಮುಳುಗಿದ್ದು, ಕುಟುಂಬಸ್ಥರ ರೋದನ ಮುಗಿಲು ಮುಟ್ಟಿತ್ತು.
ಹಿನ್ನೆಲೆ:
ಸಾರದ ಹೊಳೆ ಪಡು ಶಿರಾಲಿಯ ಇಬ್ಬರು ಪುರುಷರು, 12 ಜನ ಮಹಿಳೆಯರು ಸೇರಿ 14 ಜನ ಚಿಪ್ಪಿಕಲ್ಲು ಸಂಗ್ರಹಿಸಲು ಭಾನುವಾರ ಬೆಳಗ್ಗೆ ಸಮೀಪದ ಪಳ್ಳಿ ಹೊಳೆಗೆ ತೆರಳಿದ್ದರು. ಸಮುದ್ರದ ಉಬ್ಬರದ ಪರಿಣಾಮ ನದಿಯಲ್ಲಿ ನೀರಿನ ಪ್ರಮಾಣ ಮಧ್ಯಾಹ್ನದ ಹೊತ್ತಿಗೆ ಹೆಚ್ಚಿತ್ತು. 9 ಮಹಿಳೆಯರು ಇಬ್ಬರು ಪುರುಷರು ನೀರಿನಲ್ಲಿ ಮುಳುಗಿದ್ದರು. ಅದರಲ್ಲಿ ಒಬ್ಬ ಯುವಕ ಹಾಗೂ 9 ಮಹಿಳೆಯ ಮೃತ ದೇಹಗಳು ಭಾನುವಾರವೇ ಪತ್ತೆಯಾಗಿತ್ತು. ಸೋಮವಾರ ಒಂದು ಮೃತ ದೇಹ ಪತ್ತೆಯಾಯಿತು.
.......
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net