ಗೋಪಾಲಕೃಷ್ಣ ನಾಯಕ ಕೊಲೆ ಯತ್ನ ಪ್ರಕರಣ: ಬಂಧಿನ ನಾಲ್ವರು ನ್ಯಾಯಾಲಯಕ್ಕೆ ಹಾಜರು

ಬಂಧಿತ ಆರೋಪಿಗಳು
ಬಂಧಿತ ಆರೋಪಿಗಳು
Published on
ಕಾರವಾರ: ಅಂಕೋಲಾ ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ ನಾಯಕ ಅಡ್ಲೂರು ಅವರ ಹತ್ಯೆಗೆ ಯತ್ನಿಸಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಂಧಿತ ನಾಲ್ವರನ್ನು ಅಂಕೋಲಾ ಪೊಲೀಸರು ಶುಕ್ರವಾರ ನ್ಯಾಯಾಲಯದ ಎದುರು ಹಾಜರುಪಡಿಸಿ, ಹೆಚ್ಚುವರಿ ತನಿಖೆಗಾಗಿ ಮರಳಿ ಪೊಲೀಸ್ ವಶಕ್ಕೆ ಪಡೆದರು.
ಗೋವಾ ಮೂಲದ ಜಾಕಿರ್, ನೈಜಲ್, ಸದ್ದಾಂ ಮತ್ತು ಇರ್ಫಾನ್ ಬಂಽತರಾಗಿದ್ದು, ಅವರು ಘಟನೆ ನಡೆದ ಸ್ಥಳದಲ್ಲಿ ಬಿಟ್ಟು ಹೋದ ಒಂದು ಕಾರು ಹಾಗೂ ಎರಡು ಪಲ್ಸರ್ ಬೈಕ್‌ಗಳನ್ನು ಒಂದಿಷ್ಟು ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ.
ಹಲ್ಲೆ ಮಾಡುವ ಸಂದರ್ಭದಲ್ಲಿ ಒಟ್ಟು 6 ಜನ ದುಷ್ಕರ್ಮಿಗಳು ಇದ್ದರು ಎಂದು ಅಂದಾಜಿಸಲಾಗಿದೆ. ಅವರಲ್ಲಿ ಇಬ್ಬರು ಮಾತ್ರ ಗೋಪಾಲಕೃಷ್ಣ ನಾಯಕ ಅವರ ಮೇಲೆ ಹಲ್ಲೆ ಮಾಡಿದ್ದರು. ನಾಲ್ವರು ಬಂಧಿತರಾಗಿದ್ದು, ಇನ್ನಿಬ್ಬರಿಗಾಗಿ ನಾಲ್ಕು ತಂಡಗಳನ್ನು ರಚಿಸಿ, ವಿವಿಧೆಡೆ ಕಳಿಸಲಾಗಿದೆ. ಎಲ್ಲ ಆಯಾಮಗಳಲ್ಲಿ ತನಿಖೆ ನಡೆದಿದೆ ಎಂದು ಎಸ್‌ಪಿ ದೀಪನ್ ಎಂ.ಎನ್. ತಿಳಿಸಿದ್ದಾರೆ.
ಬಂಧಿತರಲ್ಲಿ ಒಬ್ಬ ರಿಯಲ್ ಎಸ್ಟೇಟ್ ವ್ಯವಹಾರಸ್ಥನಾಗಿದ್ದು, ಇನ್ನೊಬ್ಬ ಸೆಂಟ್ರಿಂಗ್ ಕೆಲಸ, ಇನ್ನೊಬ್ಬ ಚಾಲಕ ಹಾಗೂ ಮತ್ತೊಬ್ಬ ಬೌನ್ಸರ್ ಆಗಿದ್ದ. ಇದುವರೆಗೆ ಅವರ ಮೇಲೆ ಯಾವುದೇ ಕ್ರಿಮಿನಲ್ ಮೊಕದ್ದಮೆ ಇರುವುದು ಕಂಡುಬಂದಿಲ್ಲ. ಇನ್ನಷ್ಟು ತನಿಖೆ ನಡೆಬೇಕಿದೆ. ಯಾವ ಕಾರಣಕ್ಕೆ ಹಲ್ಲೆ ನಡೆಯಿತು. ಹಲ್ಲೆಯ ಹಿಂದೆ ಯಾರಿದ್ದಾರೆ ಎಂಬುದು ತನಿಖೆಯ ನಂತರವೇ ಬಹಿರಂಗವಾಗಬೇಕಿದೆ ಎಂದು ಎಸ್‌ಪಿ ದೀಪ್‌ನ್ ತಿಳಿಸಿದ್ದಾರೆ.

ಘಟನೆ ಹಿನ್ನೋಟ:

ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ ನಾಯಕ ಗುರುವಾರ ಬೆಳಗ್ಗೆ ಕಾರವಾರ ರಸ್ತೆಯ ಎಕ್ಸಿಸ್ ಬ್ಯಾಂಕ್ ಕೆಳಗೆ ಶೇವಿಂಗ್ ಮಾಡಿಕೊಂಡು ಹೊರ ಬರುತ್ತಿದ್ದಂತೆ ಅವರ ಮೇಲೆ ಮಾರಕಾಸ್ತçಗಳಿಂದ ಹಲ್ಲೆ ಮಾಡಲಾಗಿತ್ತು. ಕೆಳಗೆ ಬಿದ್ದ ಅವರ ತಲೆ, ಭುಜ ಹಾಗೂ ಕೈಗಳಿಗೆ ಗಂಭೀರ ಗಾಯ ಮಾಡಿದ್ದರು. ಕೆಳಗೆ ಬೀಳಿಸಿ ಕೊಲೆ ಮಾಡಲು ಯತ್ನಿಸಿದಾಗ ಗೋಪಾಲಕೃಷ್ಣ ಅವರ ಜೊತೆಗೆ ಇದ್ದ ರಾಘವೇಂದ್ರ ನಾಯಕ ಬಂದು ತಪ್ಪಿಸಿದ್ದರು. ದುಷ್ಕರ್ಮಿಗಳ ಕೈಯ್ಯಿಂದ ತಪ್ಪಿಸಿಕೊಂಡ ಗೋಪಾಲಕೃಷ್ಣ ನಾಯಕ ಅವರು ಸಹಕಾರ ಸಂಘವೊಂದರೊಳಗೆ ನುಗ್ಗಿ ಶೆಟರ್ ಹಾಕಿಕೊಂಡಿದ್ದರು. ನಂತರ ದುಷ್ಕರ್ಮಿಗಳು ನಾಪತ್ತೆಯಾಗಿದ್ದರು.

ಸೈಲ್ ಖಂಡನೆ

ಗೋಪಾಲಕೃಷ್ಣ ನಾಯಕ ಮೇಲೆ ನಡೆದ ಹಲ್ಲೆಯನ್ನು ಶಾಸಕ ಸತೀಶ ಸೈಲ್ ಖಂಡಿಸಿದ್ದಾರೆ. ಪತ್ರಿಕಾ ಹೇಳಿಕೆ ನೀಡಿರುವ ಅವರು, ವಿಧಾನಸಭಾ ಅಽವೇಶನ ನಡೆಯುತ್ತಿರುವ ಸಮಯದಲ್ಲಿ ನಾನು ಬೆಂಗಳೂರಿನಲ್ಲಿದ್ದೆ. ಸುದ್ದಿ ತಿಳಿದ ತಕ್ಷಣ ಪೊಲೀಸ್ ಅಧಿಕಾರಿಗಳಿಗೆ ಕರೆ ಮಾಡಿ, ಆರೋಪಿಗಳನ್ನು ತಕ್ಷಣ ಬಂಧಿಸುವಂತೆ ಸೂಚಿಸಿದ್ದೇನೆ ಎಂದಿದ್ದಾರೆ.

ಕಳೆದ ಬಾರಿ ಟಿಕೆಟ್ ಕೇಳಿದ್ದರು

ಘಟನೆ ಬಗ್ಗೆ ಬೆಂಗಳೂರಿನಲ್ಲಿ ಮಾಧ್ಯಮ ಹೇಳಿಕೆ ನೀಡಿರುವ ಗೃಹ ಸಚಿವ ಜಿ. ಪರಮೇಶ್ವರ ಅವರು, ಗೋಪಾಲಕೃಷ್ಣ ನಾಯಕ ಅವರು ಯುವ ಕಾಂಗ್ರೆಸ್ ಜನರಲ್ ಸೆಕ್ರೇಟರಿ ಆಗಿದ್ದರು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಟಿಕೆಟ್ ಕೇಳಿದ್ದರು. ಅವರ ಮೇಲೆ ಹಲ್ಲೆಯಾಗಿದೆ. ಯಾರು ಎಂದು ಗೊತ್ತಿಲ್ಲ. ನಾಲ್ವರನ್ನು ಬಂಽಸಲಾಗಿದೆ. ತನಿಖೆ ನಡೆಯುತ್ತಿದೆ. ಗೋಪಾಲಕೃಷ್ಣ ನಾಯಕ ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net