ದೇವಸ್ಥಾನ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಸಮೀರ ನಾಯ್ಕ ಮಾತನಾಡಿ, 22 ಕೋಟಿ ರೂ. ವೆಚ್ಚದಲ್ಲಿ ಶಿಲಾಮಯ ಹಾಗೂ ತಾಮ್ರದ ತಗಡಿನ ದೇವಾಲಯ ನಿರ್ಮಾಣಕ್ಕೆ ಯೋಜಿಸಲಾಗಿದೆ. ಜೀರ್ಣೋದ್ಧಾರ ಸಮಿತಿಯ ಗೌರವ ಅಧ್ಯಕ್ಷ, ಶಾಸಕ ಸತೀಶ ಸೈಲ್ ಅವರ ಪ್ರಯತ್ನದಿಂದ ಸರ್ಕಾರದಿಂದ 17 ಕೋಟಿ ರೂ. ಇದುವರೆಗೆ ಬಿಡುಗಡೆ ಮಾಡಲಾಗಿದೆ. 2 ಕೋಟಿ ರೂ. ವೆಚ್ಚದಲ್ಲಿ ನಗರಾಭಿವೃದ್ಧಿ ಪ್ರಾಽಕಾರದಿಂದ ಕೆರೆ ಅಭಿವೃದ್ಧಿ ಮಾಡಲಾಗುತ್ತಿದೆ. ಶೇಜವಾಡ ಗ್ರಾಮಸ್ಥರು ಪ್ರತಿ ಮನೆಗೆ 11 ಸಾವಿರ ರೂ. ದೇಣಿಗೆ ನೀಡಿದ್ದಾರೆ ಎಂದು ಯೋಜನೆ ವಿವರಿಸಿದರು. ವಾಸ್ತು ತಜ್ಞ ಗುಂಡಿಬೈಲ್ ಸುಬ್ರಹ್ಮಣ್ಯ ಭಟ್ಟರು ವಾಸ್ತು ಪ್ರಕಾರ ನಾಗರ ಶೈಲಿ ಹಾಗೂ ಕೇರಳ ಶೈಲಿಯಲ್ಲಿ ದೇವಾಲಯದ ಸ್ವರೂಪ ಯೋಜಿಸಿದ್ದಾರೆ. ಕೇಶವ ನಾಯ್ಕ ಎಂಬ ಶಿಲ್ಪಿ ಈ ಕಾರ್ಯದ ಜವಾಬ್ದಾರಿ ವಹಿಸಿದ್ದಾರೆ. 2 ವರ್ಷದಲ್ಲಿ ಕಾಮಗಾರಿ ಮುಗಿಸುವ ಗುರಿ ಹೊಂದಿದ್ದೇವೆ ಎಂದರು.