ಅರಣ್ಯವಾಸಿಗಳಿಗೆ ಕಾನೂನು ಅರಿವು ಅಗತ್ಯ

ಸಿದ್ದಾಪುರ ತಾಲೂಕಿನ ಇಟಗಿ ರಾಮೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಏರ್ಪಡಿಸಿದ್ದ ಅರಣ್ಯವಾಸಿಗಳಿಗೆ ಕಾನೂನು ಅರಿವು ಕಾರ್ಯಕ್ರಮದಲ್ಲಿ ರಂಜಿತಾ ರವೀಂದ್ರ ಮಾತನಾಡಿದರು. ಮಹಾಬಲೇಶ್ವರ ನಾಯ್ಕ ಬೇಡ್ಕಣಿ, ಗೋವಿಂದರಾಜ ಹೆಗಡೆ, ಅಶೋಕ ನಾಯ್ಕ, ಚಂದ್ರಕಾಂತ ನಾಯ್ಕ, ಸುನೀಲ್ ನಾಯ್ಕ, ಶೇಖ್ ಸೈನ್ ಸಾಬ ಇತರರಿದ್ದರು.
ಸಿದ್ದಾಪುರ ತಾಲೂಕಿನ ಇಟಗಿ ರಾಮೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಏರ್ಪಡಿಸಿದ್ದ ಅರಣ್ಯವಾಸಿಗಳಿಗೆ ಕಾನೂನು ಅರಿವು ಕಾರ್ಯಕ್ರಮದಲ್ಲಿ ರಂಜಿತಾ ರವೀಂದ್ರ ಮಾತನಾಡಿದರು. ಮಹಾಬಲೇಶ್ವರ ನಾಯ್ಕ ಬೇಡ್ಕಣಿ, ಗೋವಿಂದರಾಜ ಹೆಗಡೆ, ಅಶೋಕ ನಾಯ್ಕ, ಚಂದ್ರಕಾಂತ ನಾಯ್ಕ, ಸುನೀಲ್ ನಾಯ್ಕ, ಶೇಖ್ ಸೈನ್ ಸಾಬ ಇತರರಿದ್ದರು.
Published on
ಸಿದ್ದಾಪುರ: ಅರಣ್ಯ ಭೂಮಿ ಹಕ್ಕಿಗೆ ಅರಣ್ಯವಾಸಿಗಳು ಕಾನೂನು ಅರಿವು ಹೊಂದುವುದು ಮೂಲಭೂತ ಕರ್ತವ್ಯವಾಗಿದೆ ಎಂದು ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಪ್ರಧಾನ ಸಂಚಾಲಕಿ ಮತ್ತು ವಕೀಲೆ ರಂಜಿತಾ ರವೀಂದ್ರ ಹೇಳಿದರು.
ತಾಲೂಕಿನ ಇಟಗಿ ರಾಮೇಶ್ವರ ದೇವಾಲಯದ ಸಭಾಂಗಣದಲ್ಲಿ ಅರಣ್ಯವಾಸಿಗಳ ಕಾನೂನು ಜಾಗೃತಿ ಜಾಥದ ಅಂಗವಾಗಿ ಭಾನುವಾರ ಜರುಗಿದ ‘ಅರಣ್ಯವಾಸಿಯ ಮನೆ ಮನೆಗೆ ಕಾನೂನು’ ಕಾರ್ಯಕ್ರಮದಲ್ಲಿ ಅವರು ಮಾತನಾಡಿರು.
ಸಾಮಾಜಿಕ ನ್ಯಾಯ ಮತ್ತು ದೇಶದ ಆಹಾರ ಉತ್ಪನ್ನ ವೃದ್ಧಿಸುವ ಉದ್ದೇಶದಿಂದ ಜಾರಿಗೆ ಬಂದಿರುವ ಅರಣ್ಯ ಹಕ್ಕು ಕಾಯಿದೆ ಕಾನೂನಿನ ಅನುಷ್ಠಾನದಲ್ಲಿ ವೈಪಲ್ಯವಾಗಿದೆ. ಅರಣ್ಯ ಭೂಮಿ ಸಾಗುವಳಿ ಅವಲಂಬಿತ ಅರಣ್ಯವಾಸಿಗಳಿಗೆ ಸಾಂದರ್ಭಿಕ ದಾಖಲೆ ಅಡಿಯಲ್ಲಿ ಸಾಗುವಳಿ ಹಕ್ಕನ್ನು ನೀಡಲು ಅವಕಾಶವಿದೆ. ಈ ಕುರಿತು ಅರಣ್ಯವಾಸಿಗಳಿಗೆ ಕಾನೂನು ಜ್ಞಾನ ವೃದ್ದಿಸುವ ಉದ್ದೇಶದಿಂದ ಅರಣ್ಯವಾಸಿಗಳ ಕಾನೂನು ಜಾಗೃತಿ ಅಂಗವಾಗಿ ಅರಣ್ಯವಾಸಿಯ ಮನೆ ಮನೆಗೆ ಕಾನೂನು ಎಂಬ ವಿನೂತನ ಕಾರ್ಯಕ್ರಮ ರಾಜ್ಯಾದ್ಯಂತ ಹಮ್ಮಿಕೊಳ್ಳಲಾಗಿದೆ ಎಂದರು.
ಜಿಲ್ಲಾಸಂಚಾಲಕ ಮಹಾಬಲೇಶ್ವರ ನಾಯ್ಕ ಬೇಡ್ಕಣಿ ಮಾತನಾಡಿ ಅರಣ್ಯವಾಸಿಗಳಿಗೆ ಸಾಗುವಳಿ ಹಕ್ಕಿನಿಂದ ವಂಚಿತರಾಗದ ರೀತಿಯಲ್ಲಿ ಕಾನೂನಿನ ಅಂಶವನ್ನು ಬಿತ್ತರಿಸಲಾಗುವುದು ಎಂದರು.
ಗೋವಿಂದರಾಜ ಹೆಗಡೆ ,ಅಶೋಕ ನಾಯ್ಕ, ಚಂದ್ರಕಾಂತ ನಾಯ್ಕ ಇಟಗಿ, ಸುನೀಲ್ ನಾಯ್ಕ ಸಂಪಖಂಡ, ಶೇಖ್ ಸೈನ್ ಸಾಬ ಇಟಗಿ, ರಾಜು ಎಂ. ನಾಯ್ಕ, ಬಿ. ಖ. ನಾಯ್ಕ, ಚಂದ್ರ ಶೇಖರ್ ನಾಯ್ಕ, ಶಿವಾನಂದ ಹೊಸೂರು, ನಾಗರಾಜ ಮರಾಠಿ ದೊಡ್ಮನೆ, ಸಿರಿ ನಾಯ್ಕ, ಆರ್.ಒ. ನಾಯ್ಕ, ಧನಂಜಯ ನಾಯ್ಕ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net