ಉತ್ತರ ಕನ್ನಡದಲ್ಲಿ ಮೊದಲ ಬಾರಿಗೆ ಫುಟ್ಬಾಲ್‌ ಆಯ್ಕೆ ಪ್ರಕ್ರಿಯೆ

ಯದುಕೃಷ್ಣ ವಿ.
ಯದುಕೃಷ್ಣ ವಿ.
Published on

ಪ್ರಮುಖ ಮುಖ್ಯಾಂಶಗಳು

  • ಸೆಪ್ಟೆಂಬರ್‌ 6 ರಂದು ಕಾರವಾರದಲ್ಲಿ ಆಯ್ಕೆ ಪ್ರಕ್ರಿಯೆ
  • ವಿವಿಧ ವಿಭಾಗಗಳಲ್ಲಿ ಭಾಗವಹಿಸಲು ಅವಕಾಶ
ಕಾರವಾರ: ಜಿಲ್ಲೆಯಲ್ಲಿ ಫುಟ್‌ಬಾಲ್ ಆಡುವ ಪ್ರತಿಭೆಗಳನ್ನು ರಾಜ್ಯ, ರಾಷ್ಟ್ರ ಮಟ್ಟದ ಕ್ರೀಡಾ ತಂಡಗಳಿಗೆ ಆಯ್ಕೆ ಮಾಡುವ ಪ್ರಕ್ರಿಯೆ ಮೊದಲ ಬಾರಿಗೆ ಜಿಲ್ಲೆಯಲ್ಲಿ ಆಯೋಜನೆಯಾಗುತ್ತಿದೆ. 
ಇಂಡಿಯಾ ಖೇಲೋ ಫುಟ್‌ಬಾಲ್‌ನ ಸ್ಕೌಟಿಂಗ್ ಮತ್ತು ಕಾಯಾಚರಣೆಯ ಮುಖ್ಯಸ್ಥ ಯದುಕೃಷ್ಣ ವಿ. ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಕಾರವಾರ ಸೇರಿ ಕರ್ನಾಟಕದ ದಾವಣಗೆರೆ, ಬೆಂಗಳೂರು, ಉಡುಪಿ ಶಿವಮೊಗ್ಗ ಹೀಗೆ 12 ಜಿಲ್ಲೆಗಳಲ್ಲಿ ಪ್ರತಿಭಾನ್ವಿತ ಫುಟ್‌ಬಾಲ್ ಆಟಗಾರರ ಆಯ್ಕೆ ಪ್ರಕ್ರಿಯೆ ಆಯೋಜಿಸಲಾಗಿದೆ. ಕಾರವಾರದಲ್ಲಿ ಸೆಪ್ಟೆಂಬರ್ 6 ರಂದು ಮಾಲಾದೇವಿ ಮೈದಾನದಲ್ಲಿ ಈ ಪ್ರಕ್ರಿಯೆ ನಡೆಯಲಿದೆ ಎಂದರು. 
 ಟೈಗರ್ ಇಂಡಿಯಾ ಖೇಲೋ ಫುಟ್‌ಬಾಲ್(ಐಕೆಎಫ್), ಕರ್ನಾಟಕ ರಾಜ್ಯ ಫುಟ್‌ಬ್‌ಲ್ಅ ಸೋಸಿಯೇಷನ್(ಕೆಎಸ್‌ಎಫ್‌ಎ)ನೊಂದಿಗೆ `ನಮ್ಮ ಕರ್ನಾಟಕ ಫುಟ್‌ಬಾಲ್ ಟ್ರಯಲ್ಸ್ ' ಹೆಸರಿನಲ್ಲಿ ಆಯ್ಕೆ ಪ್ರಕ್ರಿಯೆ ನಡೆಸುತ್ತಿವೆ. ಐಕೆಎಫ್ ಕಳೆದ ಬಾರಿ ದೇಶದ 135 ಜಿಲ್ಲೆಗಳಲ್ಲಿ ಟ್ರಯಲ್ಸ್ ನಡೆಸಿದ್ದು, 20 ಸಾವಿರಕ್ಕೂ ಅಧಿಕ ಕ್ರೀಡಾಪಟುಗಳು ಪಾಲ್ಗೊಂಡಿದ್ದರು. ಕರ್ನಾಟಕದಲ್ಲಿ ಮೊದಲ ಬಾರಿಗೆ ನಡೆಯುತ್ತಿದ್ದು, ಈಗಾಗಲೇ ದಾವಣಗೆರೆಯಲ್ಲಿ ಆಯ್ಕೆ ಪ್ರಕ್ರಿಯೆ ನಡೆದಿದೆ. ಕಾರವಾರದಲ್ಲಿ ಬೋಲ್ಡ್ ಆ್ಯಂಡ್ ಡೈನಮಿಕ್ ಸ್ಪೋಟ್ಸ್ ಕ್ಲಬ್ ಸಹಕಾರದೊಂದಿಗೆ ಈ ಸೆಲೆಕ್ಷನ್ ಪ್ರೊಗ್ರಾಂ ನಡೆಸಲಾಗುವುದು ಎಂದು ತಿಳಿಸಿದರು. 
12 ರಿಂದ 18 ವರ್ಷಳ ಪ್ರತ್ಯೇಕ ವಯೋಮಾನದವರಿಗಾಗಿ ಬಾಲಕಿಯರು ಹಾಗೂ ಬಾಲಕರಿಗೆ ವಿಭಾಗಗಳಲ್ಲಿ ಆಯ್ಕೆ ಪ್ರಕ್ರಿಯೆ ಹಮ್ಮಿಕೊಳ್ಳಲಾಗಿದೆ. ಅಽಕೃತ ಫುಟ್‌ಬಾಲ್ ಸ್ಕೌಟಿಂಗ್ ಕೋಚ್‌ಗಳು ಸೆಲೆಕ್ಷನ್ ನಡೆಸುವರು. ಆಯ್ಕೆಯಾದವರಿಗೆ ಕರ್ನಾಟಕ ರಾಜ್ಯ ಮತ್ತು ರಾಷ್ಟ್ರೀಯ ತಂಡಗಳಲ್ಲೂ ಆಡುವ ಅವಕಾಶ ದೊರೆಯಲಿದೆ. ಭಾಗವಹಿಸುವುದು ಸಂಪೂರ್ಣ ಉಚಿತವಾಗಿದೆ ಎಂದರು. 
ಕಾರವಾರ ಬೋಲ್ಡ್ ಆ್ಯಂಡ್ ಡೈನಮಿಕ್ ಸ್ಪೋಟ್ಸ್ ಕ್ಲಬ್ ಅಧ್ಯಕ್ಷ ಪಿ.ವಿ.ಪ್ರಜಿತ್, ಉಪಾಧ್ಯಕ್ಷ ಲಿಯೋ ಲೂಯೀಸ್, ಸಂಯೋಜಕ ಸ್ಯಾಮ್ಸನ್ ಡಿಸೋಜಾ, ಕಾರ್ಯದರ್ಶಿ ಅಕ್ವಿಲ್ ಫರ್ನಾಂಡಿಸ್, ಜಂಟಿ ಕಾರ್ಯದರ್ಶಿ ಕ್ರಿಸ್ಟೋಪರ್ ಡಿಸಿಲ್ವಾ, ಖಜಾಂಚಿ ಅಲಾನ್ಸೋ ಫರ್ನಾಂಡಿಸ್, ನೋಯಲ್ ಸೆಲ್ಹೋ ಸುದ್ದಿಗೋಷ್ಠಿಯಲ್ಲಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net