ಪ್ರಶಾಂತ ತಾಂಡೇಲ ಫೆಡರೇಶನ್‌ ಅಧ್ಯಕ್ಷ

ಪ್ರಶಾಂತ ತಾಂಡೇಲ
ಪ್ರಶಾಂತ ತಾಂಡೇಲ
Published on

ಕಾರವಾರ:ಉತ್ತರ ಕನ್ನಡ ಜಿಲ್ಲಾ ಸಹಕಾರ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷರಾಗಿ ಬಿಣಗಾದ ಪ್ರಶಾಂತ ತಾಂಡೇಲ, ಉಪಾಧ್ಯಕ್ಷರಾಗಿ ಅಂಕೋಲಾದ ಪ್ರಮೋದ ಬಾನಾವಳಿ ಅವಿರೋಧವಾಗಿ ಆಯ್ಕೆಯಾದರು.
ಸೋಮವಾರ ನೂತನ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ನಡೆಯಿತು. ಸಹಕಾರ ಸಂಘಗಳ ಇಲಾಖೆ ಉಪ ನಿಬಂಧಕರ ಕಚೇರಿಯ ಅಭಿವೃದ್ಧಿ ಅಽಕಾರಿ ಶ್ರೀದೇವಿ ಕಟ್ಟಿಮನಿ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು.
ಮಾ.29 ರಂದು ಫೆಡರೇಶನ್ ನಿರ್ದೇಶಕ ಸ್ಥಾನಗಳಿಗೆ ಚುನಾವಣೆ ನಡೆದಿದ್ದರೂ ನ್ಯಾಯಾಲಯದ ವಿಚಾರಣೆ ಬಾಕಿ ಇರುವುದರಿಂದ ಮತ ಎಣಿಗೆ ನಡೆದಿರಲಿಲ್ಲ. ಹೈಕೋರ್ಟ್ ಅನುಮತಿಯಂತೆ ಏ 7 ರಂದು ಮತ ಎಣಿಕೆ ನಡೆದಿತ್ತು. 14 ನಿರ್ದೇಶಕ ಸ್ಥಾನಗಳ ಪೈಕಿ 10 ಸ್ಥಾನಗಳು ದಿವಂಗತ ರಾಜು ತಾಂಡೇಲ ಅಭಿಮಾನಿ ಬಳಗದ ಪಾಲಾಗಿತ್ತು. ಈಗಲೂ ಅದೇ ಬಳಗದ ಇಬ್ಬರು ಅವಿರೋಧವಾಗಿ ಆಯ್ಕೆಯಾದರು.
ಉತ್ತರ ಕನ್ನಡ ಜಿಲ್ಲಾ ಸಹಕಾರ ಮೀನು ಮಾರಾಟ ಫೆಡರೇಶನ್ ಕಾರವಾರದಿಂದ ಭಟ್ಕಳದವರೆಗೆ ವ್ಯಾಪ್ತಿಯನ್ನು ಹೊಂದಿದ್ದು, ಜಿಲ್ಲೆಯ ಕರಾವಳಿಯ ವಿವಿಧ ಮೀನುಗಾರ ಸಂಘಟನೆಗಳ ಒಕ್ಕೂಟವಾಗಿದೆ. ಸಹಕಾರ ಸಂಘಗಳಿಗೆ ಸಾಲ ಸೌಲಭ್ಯ ಒದಗಿಸುವ ಜೊತೆಗೆ ಮೀನುಗಾರರ ಒಂದು ಪ್ರಾತಿನಿಽಕ ಸಂಸ್ಥೆಯಾಗಿ ಕಾರ್ಯ ನಿರ್ವಹಿಸುತ್ತಿದೆ.


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net