ಕಾರವಾರ: ಇಲ್ಲಿನ ಆರ್‌ಟಿಒ ಅವರ ಛೇಂಬರ್‌ನಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡ ಘಟನೆ ಶುಕ್ರವಾರ ಮಧ್ಯಾಹ್ನ ನಡೆಯಿತು.
ಆರ್‌ಟಿಒ ಜಾನ್ ಮಸ್ಕಿನ್ ಅವರು ಕಚೇರಿಯ ತಮ್ಮ ಛೇಂಬರ್‌ನಲ್ಲಿ ಕುಳಿತಿರುವ ಸಂದರ್ಭದಲ್ಲಿಯೇ ಮಧ್ಯಾಹ್ನ 1.30 ರ ಹೊತ್ತಿಗೆ ಬೆಂಕಿ ಕಾಣಿಸಿಕೊಂಡಿತು. ತಕ್ಷಣ ಕಚೇರಿಯ ಸಿಬ್ಬಂದಿ ಕಂಪ್ಯೂಟರ್‌ನ ವೈಯರ್ ಸಂಪರ್ಕ ತಪ್ಪಿಸಿ ಹೆಚ್ಚಿನ ಅನಾಹುತ ತಪ್ಪಿಸಿದರು.