ರಾಕೇಶ ರಾಮಚಂದ್ರ ಅಗಸರ ಎಂಬ ರೈತ ಎರಡು ಎಕರೆ ಜಮೀನಿನಲ್ಲಿ ಅಡಿಕೆ ಗಿಡಗಳನ್ನು ನೆಟ್ಟಿದ್ದರು. ನಾಲ್ಕು ವರ್ಷ ಪ್ರಾಯದ ಈ ಗಿಡಗಳು ಇನ್ನೆರಡು ವರ್ಷಗಳಲ್ಲಿ ಫಸಲು ನೀಡುವ ಹಂತಕ್ಕೆ ತಲುಪಲಿದ್ದವು. ಆದರೆ, ನಿರಂತರ ಮಳೆ ಕೊರತೆ ಹಾಗೂ ನೀರಿನ ಅಭಾವದಿಂದ ಅವರ ಕನಸು ಭಗ್ನವಾಗಿದೆ. ಒಟ್ಟು ಆರು ಬೋರ್‌ವೆಲ್ ಕೊರೆಸಿದ್ದರಾದರೂ ಐದು ವಿಫಲವಾಗಿದ್ದವು. ನೀರು ಬಿದ್ದ ಒಂದು ಬೋರ್‌ವೆಲ್ ಮೂಲಕವೇ ಇಷ್ಟು ದಿನಗಳ ಕಾಲ ಅಡಿಕೆ ಗಿಡಕ್ಕೆ ನೀರುಣಿಸಿದ್ದರು. ಆದರೆ, ಕಳೆದ ಮೂರು ತಿಂಗಳಿನಿಂದ ಈ ಬೋರ್‌ವೆಲ್ ವಿಫಲವಾಗಿದ್ದರಿಮದ ಬೇಸತ್ತ ಅವರು, ಅಡಿಕೆ ತೋಟವನ್ನೇ ತೆಗೆದುಹಾಕುವ ನಿರ್ಧಾರ ಕೈಗೊಂಡಿದ್ದಾರೆ.