

ಎಂಡೋ ಪೀಡಿತ ಮಗನಿಗೆ ಓಡಾಡಲು ಬಾರದು, ಬಹು ಅಂಗಾಂಗ ವೈಕಲ್ಯ. ಆತನಿಗೆ ಚಿಕಿತ್ಸೆ ಕೊಡಿಸಲು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಮೊದಲು ಮಾಸಾಶನ ಪಡೆಯಲೂ ಸಾಧ್ಯವಾಗಿರಲಿಲ್ಲ. ಈಗ ತಿಂಗಳಿAದ ಸ್ಕೋಡ್‌ವೇಸ್ ಕೇಂದ್ರಕ್ಕೆ ಬರುತ್ತಿದ್ದು, ಆತನ ವರ್ತನೆಯಲ್ಲಿ ಸಾಕಷ್ಟು ಬದಲಾವಣೆಯಾಗಿದೆ.
ರತ್ನಾ ಮಂಜುನಾಥ ಮೊಗೇರ ಎಂಡೋ ಸಂತ್ರಸ್ತ ಮಗುವಿನ ಪಾಲಕಿ
ಎಂಡೋ ಪೀಡಿತರಿರುವ ಮಕ್ಕಳು ಮಾತ್ರವಲ್ಲ ಅವರನ್ನು ನೋಡಿಕೊಳ್ಳಲು ಪಾಲಕರೂ ಇಡೀ ಜೀವನವನ್ನು ಮೀಸಲಿಡುತ್ತಿದ್ದಾರೆ. ಅವರ ಇಡೀ ಕುಟುಂಬ ಸಾಮಾಜಿಕವಾಗಿ ಹಿಂದುಳಿಯುತ್ತದೆ. ಈ ಯೋಜನೆಯಲ್ಲಿ ಮಕ್ಕಳಿಗೆ ಚಿಕಿತ್ಸೆ ಕೊಡುವ ಜೊತೆಗೆ ಪಾಲಕರಿಗೆ ಅವರನ್ನು ನೋಡಿಕೊಳ್ಳುವ ತರಬೇತಿ ನೀಡುತ್ತೇವೆ. ಎರಡನೇ ಹಂತದಲ್ಲಿ ಸಂತ್ರಸ್ತರಿಗೆ ಅವರಿಗೆ ಸ್ವ ಉದ್ಯೋಗದ ತರಬೇತಿ ನೀಡುವ ಯೋಜನೆಯೂ ಇದೆ.
ಡಾ.ವೆಂಕಟೇಶ ನಾಯ್ಕ ಸ್ಕೋಡ್‌ವೇಸ್ ಸಿಇಒ