ತೆಂಗು, ಸಿಹಿ ಉಳ್ಳಾಗಡ್ಡಿಗೆ (GI tag recognition) ಜಿಐ ಟ್ಯಾಗ್ ಮಾನ್ಯತೆಗೆ ಪ್ರಯತ್ನ
ತೆಂಗು ಬೆಳೆ ಕುರಿತು ಕುಮಟಾದ ಎವಿಪಿ ರೈತ ಉತ್ಪಾದಕ ಸಂಸ್ಥೆಯಲ್ಲಿ ಭಾನುವಾರ ಕರೆದಿದ್ದ (GI tag recognition )ಸಮಾಲೋಚನಾ ಸಭೆಯಲ್ಲಿ ಗಣಪತಿ ನಾಯ್ಕ ಮಾತನಾಡಿದರು. ಡಾ. ನಾಗೇಶ ನಾಯ್ಕ, ಜಿ.ವಿ. ನಾಯಕ, ಡಾ. ರೂಪಾ ಪಾಟೀಲ, ಚೇತನ ನಾಯ್ಕ, ಸುಮಂಗಲಾ ಮುರುಳಿ, ಡಾ. ಸುಭಾಷ ಚಂದ್ರನ, ಲಿಂಗರಾಜ ಇಟ್ನಾಳ ಇತರರಿದ್ದರು.
ಕುಮಟಾ: ಇಲ್ಲಿನ ಕೃಷಿ ಇಲಾಖೆ ಆವರಣದಲ್ಲಿರುವ ಎವಿಪಿ ರೈತ ಉತ್ಪಾದಕ ಸಂಸ್ಥೆಯ ಕಾರ್ಯಾಲಯದಲ್ಲಿ ಕುಮಟಾ ತೆಂಗಿನಕಾಯಿಯ ಗುಣಮಟ್ಟ ಹಾಗೂ ವಿಶೇಷತೆ ಕುರಿತು ವಿಶೇಷ ಸಮಾಲೋಚನಾ ಸಭೆಯಲ್ಲಿ ಚರ್ಚಿಸಲಾಗಿದ್ದು, ಕುಮಟಾದ ತೆಂಗು ಹಾಗೂ ಸಿಹಿ ಉಳ್ಳಾಗಡ್ಡಿಗೆ (GI tag recognition) ಜಿಐ ಟ್ಯಾಗ್‌ಗಾಗಿ ಪ್ರಯತ್ನಿಸಲು ನಿರ್ಧರಿಸಲಾಯಿತು.
ಸಭೆಯಲ್ಲಿ ಎವಿಪಿ ಸಂಸ್ಥೆ ಅಧ್ಯಕ್ಷ ಗಣಪತಿ ಎಸ್. ನಾಯ್ಕ ಮಾತನಾಡಿ, ಗುಣಮಟ್ಟ ಹಾಗೂ ತನ್ನ ವಿಶಿಷ್ಟತೆಯಿಂದ ಹೆಸರಾದ ಕುಮಟಾ ತೆಂಗಿನಕಾಯಿಗೆ ರಾಷ್ಟ್ರೀಯ ಮಾನ್ಯತೆ ಪಡೆಯುವುದಕ್ಕಾಗಿ ಸಂಸ್ಥೆಯಿಂದ ಕೈಗೊಂಡ ಕ್ರಮದ ವರದಿ ಮಂಡಿಸಿದರು.
ಬೆಂಗಳೂರು ರಾಮಯ್ಯ ಇಂಟೆಲೆಕ್ಚ್ಯೂವಲ್ ಸೆಂಟರ್ ಫಾರ್ ಪ್ರಾಪರ್ಟಿ ರೈಟ್ಸ್‌ನ ಸಂಯೋಜಕಿ ಸುಮಂಗಲಾ ಮುರುಳಿ ಮಾಹಿತಿ ನೀಡಿ, ಕುಮಟಾ ತೆಂಗಿನ ಕಾಯಿಯು ಸ್ವಾದಿಷ್ಟಕರ ರುಚಿ, ಗಾತ್ರ, ಹೆಚ್ಚಿನ ಎಣ್ಣೆಯ ಪ್ರಮಾಣ, ದೀರ್ಘಕಾಲ ಬಾಳಿಕೆಯ ವಿಶೇಷ ಗುಣದೊಂದಿಗೆ ಪ್ರಾದೇಶಿಕ ಮಾರುಕಟ್ಟೆ, ಹೆಚ್ಚಿನ ಬೆಲೆ ಮತ್ತು ಬೇಡಿಕೆ ಹೊಂದಿದೆ. ಅಘನಾಶಿನಿ ನದಿ ತಟದ ಭೌಗೋಳಿಕ ಲಕ್ಷಣದ ಪ್ರಭಾವಳಿಯಿಂದ ಕೂಡಿದ ಇಲ್ಲಿನ ಹಲವಾರು ಬೆಳೆಗಳು ವಿಶೇಷ ಗುಣಗಳಿಂದ ಕೂಡಿವೆ. ಹೀಗಾಗಿ ಜಿಐ ಟ್ಯಾಗ್ ಮಾನ್ಯತೆ ಪಡೆಯಬಹುದಾಗಿದೆ ಎಂದು ತಿಳಿಸಿದರು.
ಶಿರಸಿ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥೆ ಡಾ. ರೂಪಾ ಪಾಟೀಲ, ಎವಿಪಿ ಸಲಹಾ ಮಂಡಳಿ ಮುಖ್ಯಸ್ಥ ಡಾ. ಜಿ.ವಿ. ನಾಯಕ, ಬಾಗಲಕೋಟೆ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ನಿವೃತ್ತ ಡೀನ್ ಡಾ. ನಾಗೇಶ ನಾಯ್ಕ ಕಾಗಾಲ, ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿ ಡಾ. ಸುಭಾಷ ಚಂದ್ರನ್, ತೋಟಗಾರಿಕೆ ಸಹಾಯಕ ನಿರ್ದೇಶಕ ಚೇತನ ನಾಯ್ಕ, ತೋಟಗಾರಿಕೆ ಸಹಾಯಕ ನಿರ್ದೇಶಕ ಲಿಂಗರಾಜ ಇಟ್ನಾಳ್ ಇತರರು ಪಾಲ್ಗೊಂಡು ಚರ್ಚಿಸಿದರು.
ಕೃಷ್ಣ ನಾಯ್ಕ, ಜಗದೀಶ ಪಿ., ಪ್ರಭಾಕರ ಪಟಗಾರ, ಶಂಕರ ಗೌಡ, ವೆಂಕಟೇಶ ಅಳ್ವೆಕೋಡಿ, ಕರುಣಾಕರ ಕೂಜಳ್ಳಿ, ಗಣಪತಿ ಪಟಗಾರ, ರಾಧಾಕೃಷ್ಣ ಗೌಡ, ಗೋಪಾಲಕೃಷ್ಣ ಹೆಗಡೆ, ಚಂದ್ರು ಪಟಗಾರ, ಈಶ್ವರ ಕೊಡಿಯಾ ಇತರರಿದ್ದರು. ಎವಿಪಿ ಸಂಸ್ಥೆಯ ನಿರ್ದೇಶಕ ತಿಮ್ಮಣ್ಣ ಭಟ್ ಕಾರ್ಯಕ್ರಮ ನಿರ್ವಹಿಸಿದರು.