ಸಮುದಾಯದ ಉಳಿವಿಗೆ ಶಿಕ್ಷಣ ಅವಶ್ಯ

ಹೊನ್ನಾವರದಲ್ಲಿ ನಾಮಧಾರಿ ಅಭಿವೃದ್ಧಿ ಸಂ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ವಿದ್ಯಾಥಿರ್ಗಳನ್ನು ಸನ್ಮಾನಿಸಲಾಯಿತು. ಡಾ. ಸತೀಶ ನಾಯ್ಕ, ಶ್ರೀನಿವಾಸ ನಾಯ್ಕ, ಟಿ.ಟಿ. ನಾಯ್ಕ, ವಾಮನ ನಾಯ್ಕ ಇತರರಿದ್ದರು.
ಹೊನ್ನಾವರದಲ್ಲಿ ನಾಮಧಾರಿ ಅಭಿವೃದ್ಧಿ ಸಂ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ವಿದ್ಯಾಥಿರ್ಗಳನ್ನು ಸನ್ಮಾನಿಸಲಾಯಿತು. ಡಾ. ಸತೀಶ ನಾಯ್ಕ, ಶ್ರೀನಿವಾಸ ನಾಯ್ಕ, ಟಿ.ಟಿ. ನಾಯ್ಕ, ವಾಮನ ನಾಯ್ಕ ಇತರರಿದ್ದರು.
Published on

ಹೊನ್ನಾವರ:

ಸಮುದಾಯದ ಉಳಿವಿಗೆ ಶಿಕ್ಷಣ ಬಹುಮುಖ್ಯ ಪಾತ್ರವಹಿಸುತ್ತದೆ. ಶಿಕ್ಷಣದ ಜತೆಗೆ ಮಾನವೀಯ ಮೌಲ್ಯಗಳನ್ನು ಹೊಂದಿರಬೇಕು ಎಂದು ಉಪನ್ಯಾಸಕ ಡಾ. ಸತೀಶ ನಾಯ್ಕ ಹೇಳಿದರು.

ಪಟ್ಟಣದ ನಾಮಧಾರಿ ಸಭಾಭವನದಲ್ಲಿ ತಾಲೂಕು ನಾಮಧಾರಿ ಅಭಿವೃದ್ಧಿ ಸಂಘ ಆಯೋಜಿಸಿದ್ದ ನಾಮಧಾರಿ ಸಮಾಜದ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ವಿದ್ಯಾಥಿರ್ಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಹೆಚ್ಚು ಅಂಕ ಪಡೆದವರೆಷ್ಟೋ ಜನರು ಬದುಕಿನಲ್ಲಿ ವಿಫಲರಾಗಿದ್ದಾರೆ. ಸಂಬಂಧಗಳು ಸೋತಾಗ ಶಿಕ್ಷಣವೂ ಸೋಲುತ್ತದೆ. ಶಿಕ್ಷಣದ ಜತೆಗೆ ಆತ್ಮಸ್ಥೈರ್ಯ ಹೊಂದಿದಾಗ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯವಾಗುವುದು ಎಂದರು.
ವಸತಿ ನಿಲಯದ ಪ್ರಾಂಶುಪಾಲ ಶ್ರೀನಿವಾಸ ನಾಯ್ಕ ಮಾತನಾಡಿ, ವಿದ್ಯಾಥಿರ್ಗಳನ್ನು ಪ್ರೋತ್ಸಾಹಿಸಿದಾಗ ಅವರಲ್ಲಿರುವ ಪ್ರತಿಭೆ ಇನ್ನಷ್ಟು ಬೆಳೆಯುತ್ತದೆ. ಇಂದು ಪುರಸ್ಕಾರದಿಂದ ವಿದ್ಯಾಥಿರ್ಗಳ ಜವಾಬ್ದಾರಿ ಹೆಚ್ಚಿದೆ. ಅಡೆತಡೆಗಳನ್ನು ಮೀರಿ ಪ್ರರಿಶ್ರಮಪಟ್ಟು ಇನ್ನೂ ಹೆಚ್ಚಿನ ಸಾಧನೆ ಮಾಡಬೇಕು ಎಂದರು.
ಶಿಕರ ಸಂದ ಅಧ್ಯ ಸುಧೀಶ ನಾಯ್ಕ ವಿದ್ಯಾಥಿರ್ಗಳ ಸಾಧನೆಯಲ್ಲಿ ಪಾಲಕರ ಪಾತ್ರ ದೊಡ್ಡದು. ವಿದ್ಯಾಥಿರ್ಗಳು ಗುರುಹಿರಿಯರನ್ನು ಗೌರವಿಸಬೇಕು ಎಂದರು. ಅಧ್ಯಕ್ಷತೆ ವಹಿಸಿದ್ದ ನಾಮಧಾರಿ ಅಭಿವೃದ್ಧಿ ಸಂಘದ ಅಧ್ಯ ಟಿ.ಟಿ. ನಾಯ್ಕ, ಮುಖಂಡರಾದ ವಾಮನ ನಾಯ್ಕ, ಆರ್​.ಎಂ. ನಾಯ್ಕ, ವಿ.ಜಿ. ನಾಯ್ಕ ಮಾತನಾಡಿದರು. ಗೋಪಾಲ ಹುಲಿಯಾ ನಾಯ್ಕ ಇದ್ದರು.
ಹೆಚ್ಚು ಅಂಕ ಪಡೆದಿರುವ ನಾಮಧಾರಿ ಸಮಾಜದ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ವಿದ್ಯಾಥಿರ್ಗಳನ್ನು ಸನ್ಮಾನಿಸಲಾಯಿತು. ಗಾಯಕಿ ಮಧುರಾ ನಾಯ್ಕ ಪ್ರಾಥಿರ್ಸಿದರು. ಎಲ್​.ಎಸ್​. ನಾಯ್ಕ ಸ್ವಾಗತಿಸಿದರು. ಲಂಬೋದರ ನಾಯ್ಕ ವಂದಿಸಿದರು. ಶಿಕ ಸುರೇಶ ನಾಯ್ಕ ನಿರ್ವಹಿಸಿದರು.
ೋಟೋ: 23ಎಚ್​ಎನ್​ಆರ್​1:
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net