ಕೆಪಿಎಸ್ಸಿ ಹಗರಣದಲ್ಲಿ ಅಂಕೋಲಾ ಮುಖ್ಯ ಶಿಕ್ಷಕನ ಕರಾಳ ಮುಖ ದರ್ಶನ

ಇಡಿ ಲೋಗೋ
ಇಡಿ ಲೋಗೋ
Published on

ಪ್ರಮುಖ ಮುಖ್ಯಾಂಶಗಳು

  • ಸಿಐಡಿಯಿಂದ ಬಂಧಿತ ಶಿಕ್ಷಕನ ಮೇಲೆ ಮರು ಬಂಧನ
  • ಅಂಕೋಲಾ ತಾಲೂಕಿನ ಬೇಲೆಕೇರಿ ಸರ್ಕಾರಿ ಹೈಸ್ಕೂಲ್‌ ಮುಖ್ಯ ಶಿಕ್ಷಕನ ಮನೆಯ ಮೇಲೆ ದಾಳಿ
  • ಕೆಪಿಎಸ್‌ಸಿ ಹಗರಣದಲ್ಲಿ ಅಕ್ರಮ ಎಸಗಿದ ಆರೋಪ ಇಡಿಯಿಂದ ಪರಿಶೀಲನೆ
ಕಾರವಾರ/ಅಂಕೋಲಾ:

ಕೆಪಿಎಸ್‌ಸಿ ನೇಮಕಾತಿ ಹಗರಣದ ಕಳಂಕ ಉತ್ತರ ಕನ್ನಡಕ್ಕೂ ವಿಸ್ತರಿಸಿದೆ. ಪಶು ವೈದ್ಯಾಽಕಾರಿಯಾಗಲು ಕೆಪಿಎಸ್‌ಸಿ ಪರೀಕ್ಷೆ ಬರೆದ ಅಭ್ಯರ್ಥಿಗಳಿಗೆ ಹಣದ ಆಮಿಷ ತೋರಿದ ಆರೋಪದ ಮೇಲೆ ಅಂಕೋಲಾ ಬೇಲೆಕೇರಿ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಸಿಕಂದರ್ ಚೌಧರಿ ಎಂಬಾತನ ಮನೆಯ ಮೇಲೆ ಜಾರಿ ನಿರ್ದೇಶನಾಲಯ(ಇಡಿ) ದಾಳಿ ನಡೆಸಿದೆ.

ಅಂಕೋಲಾದ ವಂದಿಗೆಯಲ್ಲಿರುವ ಸಿಕಂದರ್ ಚೌಧರಿಯ ಬಾಡಿಗೆ ಮನೆಗೆ ಬೆಳ್ಳಬೆಳಗ್ಗೆ ದಾಳಿ ನಡೆಸಿದ ಬೆಂಗಳೂರು ಇಡಿ ಅಽಕಾರಿಗಳ ತಂಡ ಮಧ್ಯಾಹ್ನದವರೆಗೂ ವಿಚಾರಣೆಗೆ ಒಳಪಡಿಸಿದರು. ದಾಖಲೆಗಳನ್ನು ಪರಿಶೀಲನೆ ನಡೆಸಿತು. ಆತನನ್ನು ಬಂಧನ ಮಾಡಿದ ಬಗ್ಗೆ ಯಾವುದೇ ಮಾಹಿತಿಯನ್ನು ಖಚಿತಪಡಿಸಿಲ್ಲ.
ಪಶು ವೈದ್ಯಾಧಿಕಾರಿ ಹುದ್ದೆಗೆ ನೇಮಕವಾಗಲು ಆಕಾಂಕ್ಷಿಯೊಬ್ಬರಿಗೆ 80 ಲಕ್ಷ ರೂ. ಬೇಡಿಕೆ ಇಟ್ಟಿದ್ದ ಆಡಿಯೋವೊಂದು ಕೆಲ ತಿಂಗಳ ಹಿಂದೆ ವೈರಲ್ ಆಗಿತ್ತು. ಆ ಸಂಬಂಧ ಕೆಪಿಎಸ್‌ಸಿ ಸಹಾಯಕ ಕಾರ್ಯದರ್ಶಿ ಅವರು ವಿಧಾನಸೌಧ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಅದನ್ನು ಆಧರಿಸಿ ತನಿಖೆ ನಡೆಸಿದ ಪೊಲೀಸರು ಅಕ್ರಮ ವ್ಯವಹಾರದಲ್ಲಿ ಮಧ್ಯವರ್ತಿಗಳಾಗಿ ಕೆಲಸ ಮಾಡಿದ ಸಿಕಂದರ್ ಚೌಧರಿ ಹಾಗೂ ಆರೀಫ್ ಮೊಹಮದ್ ಎಂಬ ಇಬ್ಬರನ್ನು ಜುಲೈ 19 ರಂದು ಬಂಽಸಿದ್ದರು. ಇಬ್ಬರಿಗೂ ಜುಲೈ 27 ರವರೆಗೂ ನ್ಯಾಯಾಂಗ ಬಂಧನ ವಿಽಸಲಾಗಿತ್ತು. ಈ ನಡುವೆ ಜುಲೈ ಅಂತ್ಯಕ್ಕೆ ಪ್ರಕರಣ ಸಿಐಡಿಗೆ ಹಸ್ತಾಂತರವಾಗಿದ್ದು, ತನಿಖೆ ಮುಂದುವರಿದಿದೆ. ಈಗ ಇಡಿ ಕೂಡ ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಕೈಗೊಂಡಿದೆ.
ಸಿಕಂದರ್ ಚೌಧರಿ ವಿಜಯಪುರ ಜಿಲ್ಲೆಯ ಇಂಡಿ ನಗರದವನಾಗಿದ್ದು, ಮೊದಲು ವಿಜಯಪುರ ಜಿಲ್ಲೆಯ ಇಟ್ಟಂಗಿಹಾಳ ಪ್ರೌಢಶಾಲೆಯಲ್ಲಿ ಮುಖ್ಯಾಧ್ಯಾಪಕನಾಗಿ ಕಾರ್ಯ ನಿರ್ವಹಿಸುತ್ತಿದ್ದ ಎನ್ನಲಾಗಿದೆ. ಅಲ್ಲಿಯೂ ಅಕ್ರಮ ನಡೆಸಿ ಕರ್ತವ್ಯದಿಂದ ಅಮಾನತಾಗಿದ್ದ. ಆತನ ಅಮಾನತು ರದ್ದು ಮಾಡಿ, 8 ತಿಂಗಳ ಹಿಂದೆ ಅಂಕೋಲಾ ಬೇಲೆಕೇರಿ ಸರ್ಕಾರಿ ಪ್ರೌಢಶಾಲೆಗೆ ವರ್ಗಾಯಿಸಲಾಗಿತ್ತು. ಕೆಪಿಎಸ್‌ಸಿ ಹಗರಣದಲ್ಲಿ ಜುಲೈನಲ್ಲಿ ಬಂಽತನಾಗಿದ್ದ ಸಿಕಂದರ್ ಚೌಧರಿಆತ ಕೆಲ ದಿನಗಳ ಹಿಂದೆ ನ್ಯಾಯಾಲಯದಿಂದ ಜಾಮೀನು ಪಡೆದುಕೊಂಡಿದ್ದ. ಆದರೆ, ಕರ್ತವ್ಯಕ್ಕೆ ಹಾಜರಾಗಿರಲಿಲ್ಲ.

2025 ರಿಂದ ಅಂಕೋಲಾದಲ್ಲಿ

`2025 ರ ಡಿಸೆಂಬರ್ 23 ರಂದು ಚೌಧರಿ ಬೇಲೆಕೇರಿ ಪ್ರೌಢಶಾಲೆಗೆ ಮುಖ್ಯಾಧ್ಯಾಪಕರಾಗಿ ಹಾಜರಾಗಿದ್ದರು. ಅವರ ಮೇಲೆ ಎಫ್‌ಐಆರ್ ದಾಖಲಾದ ಬಗ್ಗೆ ವಿಧಾನಸೌಧ ಪೊಲೀಸ್ ಠಾಣೆಯಿಂದ ವರದಿಯೊಂದು ಬಂದ ನಂತರ ನಾನು ಕ್ರಮಕ್ಕಾಗಿ ಹಿರಿಯ ಅಧಿಕಾರಿಗಳಿಗೆ ಪತ್ರ ಬರೆದಿದ್ದೇನೆ' ಎಂದು ಅಂಕೋಲಾ ಬಿಇಒ ಮಂಗಳಲಕ್ಷ್ಮೀ ಪಾಟೀಲ ತಿಳಿಸಿದ್ದಾರೆ.
..........
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net