372 ಕೆಪಿಎಸ್‌ ಶಾಲೆ ಸ್ಥಾಪನೆಗೆ ಡಿಪಿಆರ್‌

ಕರ್ನಾಟಕ ಪಬ್ಲಿಕ್‌ ಸ್ಕೂಲ್‌
ಕರ್ನಾಟಕ ಪಬ್ಲಿಕ್‌ ಸ್ಕೂಲ್‌
Published on
ಸುಭಾಸ ಧೂಪದಹೊಂಡ ಕಾರವಾರ: ಕಳೆದ ಬಜೆಟ್‌ನಲ್ಲಿ ಘೋಷಣೆ ಮಾಡಿದಂತೆ ಉತ್ತರ ಕನ್ನಡದ 372 ಸೇರಿದಂತೆ ರಾಜ್ಯದಲ್ಲಿ 800 ಶಾಲೆಗಳನ್ನು ಕೆಪಿಎಸ್‌ಗಳಾಗಿ ಮೇಲ್ದರ್ಜೆಗೇರಿಸಲು ವಿಸ್ತ್ರತ ಯೋಜನಾ ವರದಿ (ಡಿಪಿಆರ್) ತಯಾರಿಕೆಗೆ ಸಿದ್ಧತೆ ನಡೆಸಿದೆ. ಈ ಸಂಬಂಧ ಡಿಸೆಂಬರ್ 30 ರಂದು ಶಾಲಾ ಶಿಕ್ಷಣ ಇಲಾಖೆ ಅಧೀನ ಕಾರ್ಯದರ್ಶಿ ಅಽಕೃತ ಆದೇಶವೊಂದನ್ನು ಹೊರಡಿಸಿದ್ದಾರೆ.
ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್(ಎಡಿಬಿ)ನೆರವಿನಲ್ಲಿ 2500 ಕೋಟಿ ರೂ. ವೆಚ್ಚದಲ್ಲಿ 500 ಶಾಲೆಗಳು, ಕಲ್ಯಾಣ ಕರ್ನಾಟಕ ಭಾಗದ ಅಕ್ಷರ ಆವಿಷ್ಕಾರ ಯೋಜನೆಯಲ್ಲಿ 200 ಶಾಲೆಗಳು, ಅತಿ ಹಿಂದುಳಿದ ತಾಲೂಕುಗಳಲ್ಲಿ ಶಾಲೆಗಳನ್ನು ಕೆಎಂಇಆರ್‌ಸಿ ನೆರವಿನಲ್ಲಿ 100 ಶಾಲೆಗಳನ್ನು ಕೆಪಿಎಸ್‌ಗಳಾಗಿ ಮೇಲ್ದರ್ಜೆಗೇರಿಸಲು ಆದೇಶಿಸಲಾಗಿದೆ. ಅದರಲ್ಲಿ ಉತ್ತರ ಕನ್ನಡ ಶೈಕ್ಷಣಿಕ ಜಿಲ್ಲೆಯ 148 ಹಾಗೂ ಶಿರಸಿ ಶೈಕ್ಷಣಿಕ ಜಿಲ್ಲೆಯ 224 ಶಾಲೆಗಳು ಸೇರಿವೆ.
ರಾಜ್ಯದಲ್ಲಿ 18 ಕೋಟಿ ರೂ. ವೆಚ್ಚದಲ್ಲಿ ಪ್ರತಿ ಶಾಲೆಗೆ ಪ್ರತ್ಯೇಕವಾಗಿ ಡಿಪಿಆರ್ ತಯಾರಿಕೆ ಮಾಡಬೇಕಿದೆ. ಕೆಪಿಎಸ್ ಶಾಲೆಗಳಲ್ಲಿ ಕನಿಷ್ಠ 12 ಕೊಠಡಿಗಳಿರಬೇಕು. 1200 ಮಕ್ಕಳು ಕಲಿಯಲು ಅನುಕೂಲಕರವಾಗಿರಬೇಕು ಎಂದು ಸಿದ್ಧತೆ ನಡೆಸಲಾಗಿದೆ. ಒಂದು ಶಾಲೆಗೆ 2 ರಿಂದ 4 ಕೋಟಿ ರೂ. ವೆಚ್ಚದಲ್ಲಿ ಹೊಸ ಕಟ್ಟಡ ಹಾಗೂ ಇತರ ಮೂಲ ಸೌಕರ್ಯ ಒದಗಿಸಲು ಅವಕಾಶವಿದೆ. ಹಾಲಿ ಇರುವ ಯಾವುದೇ ಕಟ್ಟಡ ಒಡೆಯಲು ಅಥವಾ ದುರಸ್ತಿಗೆ ಅವಕಾಶವಿಲ್ಲ. ಹೊಸ ಕಟ್ಟಡ ನಿರ್ಮಾಣ ವೆಚ್ಚವನ್ನು ಡಿಪಿಆರ್‌ನಲ್ಲಿ ಸೇರಿಸುವಂತೆ ಸೂಚಿಸಲಾಗಿದೆ.
ಸಮೀಪದ ಶಾಲೆಗಳ ಪಟ್ಟಿ ಸಿದ್ಧ
ಕೆಪಿಎಸ್ ಶಾಲೆ ಮಾಡಲು ಅರ್ಹವಾಗಿರುವ ಪ್ರತಿ ತಾಲೂಕಿನ ಅತಿ ಹೆಚ್ಚು ಮಕ್ಕಳಿರುವ ಶಾಲೆಗಳ ಪಟ್ಟಿಯನ್ನು ಈಗಾಗಲೇ ಸಿದ್ಧ ಮಾಡಲಾಗಿದೆ. ಅದರ ಸಮೀಪದ 3 ಕಿಮೀ ವ್ಯಾಪ್ತಿಯಲ್ಲಿರುವ ಸರ್ಕಾರಿ ಹಿರಿಯ, ಕಿರಿಯ ಪ್ರಾಥಮಿಕ ಶಾಲೆಗಳ ಪಟ್ಟಿಯನ್ನೂ ಪಟ್ಟಿ ರಚಿಸಲಾಗಿದೆ. ವಿದ್ಯಾರ್ಥಿಗಳನ್ನು ಸಮೀಪದ ಶಾಲೆಗಳಿಂದ ಸೆಳೆಯಬೇಕು ಎಂಬುದು ಶಿಕ್ಷಣ ಇಲಾಖೆಯ ಯೋಜನೆ. ಉತ್ತರ ಕನ್ನಡ ಹಾಗೂ ಶಿರಸಿ ಶೈಕ್ಷಣಿಕ ಜಿಲ್ಲೆಯಲ್ಲಿ ಒಟ್ಟಾರೆ 372 ಕೆಪಿಎಸ್ ಮ್ಯಾಗ್ನೆಟ್ ಶಾಲೆಗಳ ಪಟ್ಟಿ ರಚಿಸಲಾಗಿದ್ದು, ಅದಕ್ಕೆ ಸಂಬಂಸಿದಂತೆ 1528 ಶಾಲೆಗಳ ಪಟ್ಟಿಯನ್ನೂ ರಚಿಸಲಾಗಿದೆ.
ಒಂದೇ ವಿದ್ಯಾರ್ಥಿಗಳಿರುವವರೆಗೂ ಯಾವುದೇ ಸರ್ಕಾರಿ ಶಾಲೆಯನ್ನು ಮುಚ್ಚುವುದಿಲ್ಲ ಎಂದು ಶಿಕ್ಷಣ ಸಚಿವರು ಅಽವೇಶನದಲ್ಲಿ ಭರವಸೆ ಕೊಟ್ಟ ಕೆಲವೇ ದಿನಗಳಲ್ಲಿ ಕೆಪಿಎಸ್ ಶಾಲೆಗಳ ಡಿಪಿಆರ್ ಹಾಗೂ ಹಾಗೂ ಮ್ಯಾಗ್ನೆಟ್ ಶಾಲೆಗಳ ಪಟ್ಟಿ ಸಿದ್ಧ ಮಾಡಿ ಸರ್ಕಾರ ಆದೇಶ ಹೊರಡಿಸಿರುವ ಬಗ್ಗೆ ವಿವಿಧ ಶೈಕ್ಷಣಿಕ ಹಾಗೂ ವಿದ್ಯಾರ್ಥಿ ಸಂಘಟನೆಗಳಿಂದ ಆಕ್ಷೇಪ ವ್ಯಕ್ತವಾಗಿದೆ.

ತಾಲ್ಲೂಕು ಯೋಜಿತ ಕೆಪಿಎಸ್ ಶಾಲೆಗಳ ಸಂಖ್ಯೆ ಸಮೀಪದ ಶಾಲೆಗಳು

ಶಿರಸಿ 58 205
ಸಿದ್ಧಾಪುರ 46 163
ಮುಂಡಗೋಡು 30 96
ಹಳಿಯಾಳ 31 113
ಯಲ್ಲಾಪುರ 30 88
ಜೋಯಿಡಾ 29 67
ಹೊನ್ನಾವರ 42 233
ಕುಮಟಾ 32 177
ಅಂಕೋಲಾ 25 111
ಕಾರವಾರ 25 119
ಭಟ್ಕಳ 24 157
"

ಕೆಪಿಎಸ್ ಶಾಲೆಗಳನ್ನು ಗುರುತಿಸುವುದು, ಸಮೀಪದ ಮ್ಯಾಗ್ನೇಟ್ ಶಾಲೆಗಳನ್ನು ಗುರುತಿಸುವ ಸಂಬAಧ ನಮ್ಮ ಹಂತದಿAದ ಯಾವುದೇ ಪಟ್ಟಿ ಹೋಗಿಲ್ಲ. ಸರ್ಕಾರದ ಹಂತದಲ್ಲೇ ಅದು ನಡೆಯುತ್ತಿದೆ.

ಲತಾ ನಾಯಕ ಡಿಡಿಪಿಐ ಕಾರವಾರ

"

ಕಲ್ಯಾಣ ಕರ್ನಾಟಕ ಭಾಗದ ಏಳಿಗೆಗೆ ಇರುವ ಕೆಕಾರ್‌ಡಿಬಿ, ಅಲ್ಪಸಂಖ್ಯಾತರ ನಿಽಯ 100 ಕೋಟಿ, ಹಾಗೂ ಹಿಂದುಳಿದ ತಾಲೂಕುಗಳ ಮೂಲ ಸೌಕರ್ಯ ಅಭಿವೃದ್ಧಿಗೆ ಇರುವ 700 ಕೋಟಿ ಹಣವನ್ನು ಈ ಕೆಪಿಎಸ್ ಶಾಲೆಗಾಗಿ ಬಳಸಿಕೊಳ್ಳಲಾಗುತ್ತಿದೆ. ಮಾತ್ರವಲ್ಲ ಎಡಿಬಿಯಿಂದ 2500 ಕೋಟಿ ರೂ. ಸಾಲ ಪಡೆಯಲಾಗುತ್ತಿದೆ. ಸಾಕಷ್ಟು ವಿರೋಧಗಳ ನಡುವೆಯೂ ಗ್ರಾಪಂಗೊದರತೆ ಮ್ಯಾಗ್ನೆಟ್ ಶಾಲೆಗಳನ್ನು ರಚಿಸಿ, ಗ್ರಾಮೀಣ ಭಾಗದ ಸಾವಿರಾರು ಶಾಲೆಗಳನ್ನು ಮುಚ್ಚುವಂತೆ ಮಾಡುವ ಯೋಜನೆಯನ್ನು ಖಂಡಿಸುತ್ತೇವೆ. ಇದರ ವಿರುದ್ಧ ಹೋರಾಟ ಮಾಡಲಿದ್ದೇವೆ.

ಶಶಿಕಲಾ ಮೇಟಿ ಎಐಡಿಎಸ್‌ಒ ಉಕ ಜಿಲ್ಲಾ ಸಂಚಾಲಕಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net