ದೇವಾಲಯಗಳಿಗೆ ವ್ಯವಸ್ಥಾಪನಾ ಸಮಿತಿ ರಚಿಸಬೇಡಿ

ದೇವಾಲಯಗಳ ಮಹಾಮಂಡಳದ ಸದಸ್ಯರು ಮನವಿ ಸಲ್ಲಿಸಿದರು.
ದೇವಾಲಯಗಳ ಮಹಾಮಂಡಳದ ಸದಸ್ಯರು ಮನವಿ ಸಲ್ಲಿಸಿದರು.
Published on
ಕಾರವಾರ: ಹಿಂದೂ ದೇವಾಲಯಗಳಿಗೆ ವ್ಯವಸ್ಥಾಪನಾ ಸಮಿತಿ ರಚಿಸುವ ವಿಚಾರ ಸುಪ್ರೀಂ ಕೋರ್ಟ್ನಲ್ಲಿ ವಿಚಾರಣೆ ಹಂತದಲ್ಲಿದ್ದು, ಅಲ್ಲಿಯವರೆಗೆ ಯಾವುದೇ ವ್ಯವಸ್ಥಾಪನಾ ಸಮಿತಿಗಳನ್ನು ರಚಿಸದಂತೆ ಉತ್ತರ ಕನ್ನಡ ಜಿಲ್ಲಾ ಹಿಂದು ಧಾರ್ಮಿಕ ದೇವಾಲಯಗಳ ಮಹಾಮಂಡಳ ಒತ್ತಾಯಿಸಿದೆ.
ಜಿಲ್ಲಾಽಕಾರಿ ಕೆ.ಲಕ್ಷ್ಮೀಪ್ರಿಯಾ ಅವರನ್ನು ಭೇಟಿ ಮಾಡಿದ ಮಂಡಳದ ಪದಾಽಕಾರಿಗಳು, ಮನವಿ ಸಲ್ಲಿಸಿದರು. 2003 ರಲ್ಲಿ ಜಾರಿಯಾದ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಹಾಗೂ ಧರ್ಮಾದಾಯ ಅಧಿನಿಯಮದ ಅಡಿ ದೇವಾಲಯಗಳಿಗೆ ವ್ಯವಸ್ಥಾಪನಾ ಸಮಿತಿ ನೇಮಿಸಲಾಗುತ್ತದೆ.

ಆದರೆ, ಇದೇ ವಿಷಯವಾಗಿ ಸುಪ್ರೀಂ ಕೋರ್ಟ್ನಲ್ಲಿ ದಾವೆ ಇದ್ದು, ಅದರ ಅಂತಿಮ ತೀರ್ಪು ಬಂದಲ್ಲಿ ಕಾನೂನಿನ ತೊಡಕು ಉಂಟಾಗುವ ಸಾಧ್ಯತೆ ಇದೆ. ಹಾಗಾಗಿ ತೀರ್ಪು ಬರುವವರೆಗೂ ಇಂಥ ಪ್ರಕ್ರಿಯೆಗಳನ್ನು ಸ್ಥಗಿತ ಮಾಡುವಂತೆ ನಾವು ಈ ಹಿಂದೆಯೂ ಮನವಿ ಮಾಡಿದ್ದೆವು. ಆದರೆ, ಜಾರಿಯಾಗದ ಕಾರಣ ಮತ್ತೊಮ್ಮೆ ನೆನಪಿಸುತ್ತಿರುವುದಾಗಿ ತಿಳಿಸಿದರು. ಸಂಘಟನೆಯ ಅಧ್ಯಕ್ಷ ರವಿ ಬೆಳ್ಳೆಮನೆ, ಉಪಾಧ್ಯಕ್ಷ ರವೀಂದ್ರ ಪವಾರ ಹಾಗೂ ಪದಾಽಕಾರಿಗಳು ಈ ಸಂದರ್ಭದಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net