ಕುಡಿಯುವ ನೀರಿನ ಕೊರತೆ ಕಂಡು ಬರುವ ಸಂದರ್ಭಗಳಲ್ಲಿ ಟ್ಯಾಂಕರ್ ನೀರು ಅಥವಾ ಖಾಸಗಿ ಬೋರ್‌ವೆಲ್ ಮೂಲಗಳಿಂದ, ಪೈಪ್‌ಲೈನ್ ಮೂಲಕ ನೀರು ಪೂರೈಸಲು ಮುಂಜಾಗ್ರತಾ ಯೋಜನೆ ಸಿದ್ಧಡಿಸುವಂತೆ ಸೂಚಿಸಿದ ಅವರು, ಬೇಸಿಗೆಯಲ್ಲಿ ಹಳಿಯಾಳ, ಮುಂಡಗೋಡು ಮತ್ತು ಕರಾವಳಿ ಭಾಗಗಳಲ್ಲಿ ಕುಡಿಯುವ ನೀರಿನ ಅಭಾವ ಹೆಚ್ಚಾಗುವ ಸಾಧ್ಯತೆಯಿದೆ. ಕರಾವಳಿ ಭಾಗಗಳಲ್ಲಿ ಉಪ್ಪು ನೀರು ಬರುವ ಸಮಸ್ಯೆಯಿರುತ್ತದೆ. ಸ್ಥಳೀಯವಾಗಿ ನೀರು ಲಭ್ಯವಿಲ್ಲದಿದ್ದರೆ, ದೂರದ ಮೂಲಗಳಿಂದ ಹೊಸ ಪೈಪ್‌ಲೈನ್ ವಿಸ್ತರಣೆ ಮಾಡಲು ಯೋಜನೆ ರೂಪಿಸಬೇಕು ಎಂದರು.