ಭರದಿಂದ ಸಾಗಿದೆ ಜಿಲ್ಲಾಭಿವೃದ್ಧಿ

ಶಿರಸಿ ತಾಪಂ ನೂತನ ಕಟ್ಟಡವನ್ನು ಸಚಿವ ಮಂಕಾಳ ವೈದ್ಯ ಉದ್ಘಾಟಿಸಿದರು. ಶಾಸಕ ಭೀಮಣ್ಣ ನಾಯ್ಕ, ಡಾ. ದಿಲಿಷ್ ಶಶಿ, ಸತೀಶ ನಾಯ್ಕ,  ಸುಮಾ ಉಗ್ರಾಣಕರ್,  ಜಗದೀಶ ಗೌಡ ಇತರರಿದ್ದರು.
ಶಿರಸಿ ತಾಪಂ ನೂತನ ಕಟ್ಟಡವನ್ನು ಸಚಿವ ಮಂಕಾಳ ವೈದ್ಯ ಉದ್ಘಾಟಿಸಿದರು. ಶಾಸಕ ಭೀಮಣ್ಣ ನಾಯ್ಕ, ಡಾ. ದಿಲಿಷ್ ಶಶಿ, ಸತೀಶ ನಾಯ್ಕ, ಸುಮಾ ಉಗ್ರಾಣಕರ್, ಜಗದೀಶ ಗೌಡ ಇತರರಿದ್ದರು.
Published on
ಶಿರಸಿ: ಮಂಗನ ಕಾಯಿಲೆ ಮತ್ತು ಹಾವು ಕಚ್ಚಿದ ಪ್ರಕರಣಗಳಲ್ಲಿ ಬಾಧಿತರಾದವರಿಗೆ ಅರಣ್ಯ ಇಲಾಖೆಯೇ ಪರಿಹಾರ ನೀಡುವಂತೆ ಅರಣ್ಯ ಸಚಿವ ಈಶ್ವರ ಖಂಡ್ರೆ ಹಾಗೂ ಮುಖ್ಯಮಂತ್ರಿ ಅವರಲ್ಲಿ ಒತ್ತಾಯಿಸಿದ್ದೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಹೇಳಿದರು.
ನಗರದ ಪಂಡಿತ ಸರ್ಕಾರಿ ಆಸ್ಪತ್ರೆಯಲ್ಲಿ ಸೋಮವಾರ ಕೆಎಫ್‌ಡಿ ರೋಗಿಗಳ ಪರೀಕ್ಷಾ ಘಟಕ ಹಾಗೂ ಆಸ್ಪತ್ರೆ ಸಿಬ್ಬಂದಿಯ ವಸತಿ ನಿಲಯ ಉದ್ಘಾಟಿಸಿ ಮಾತನಾಡಿದರು.
ಮಂಗನ ಕಾಯಿಲೆ ಹಾಗೂ ಹಾವು ಕಡಿತದಿಂದ ಮೃತಪಟ್ಟವರ ಕುಟುಂಬಕ್ಕೆ 15 ಲಕ್ಷ ರೂ. ಪರಿಹಾರ ನೀಡುವಂತೆ ವಿನಂತಿಸಿದ್ದೇವೆ. ಮಂಗನ ಕಾಯಿಲೆ ಸಮಸ್ಯೆ ಶಿರಸಿ, ಸಿದ್ದಾಪುರ ಹಾಗೂ ಹೊನ್ನಾವರ ತಾಲೂಕಿನ ಗ್ರಾಮೀಣ ಭಾಗದಲ್ಲಿದೆ. ಶಾಸಕ ಭೀಮಣ್ಣ ನಾಯ್ಕ ಅವರು ಆರೋಗ್ಯ ಸಚಿವಲ್ಲಿ ಬೇಡಿಕೆ ಸಲ್ಲಿಸಿದ ತಕ್ಷಣವೇ 40 ಲಕ್ಷ ರೂ. ಮೌಲ್ಯದ ಲ್ಯಾಬ್ ಮಂಜೂರು ಮಾಡಿದ್ದು, ಈಗ ಉದ್ಘಾಟಿಸಿದ್ದೇವೆ. ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯಗಳು ನಡೆದಿವೆ. ರೈತರಿಗೆ ಅಗತ್ಯ ಔಷಧಗಳ ಕೊರತೆ ಆಗದಂತೆ ಕೃಷಿ ಇಲಾಖೆ ನೋಡಿಕೊಳ್ಳಬೇಕು ಎಂದರು.
ಶಾಸಕ ಭೀಮಣ್ಣ ನಾಯ್ಕ ಮಾತನಾಡಿ, ರಾಜ್ಯ ಸರ್ಕಾರ ಐದೂ ಯೋಜನೆಗಳ ಮೂಲಕ ಶಿರಸಿ ತಾಲೂಕಿಗೆ ಪ್ರತಿ ತಿಂಗಳು 184 ಕೋಟಿ ರೂ. ಬರುತ್ತಿದೆ. ಜನರ ಆದ್ಯತೆ, ಅಗತ್ಯತೆಗೆ ತಕ್ಕಂತೆ ಅಭಿವೃದ್ಧಿಗೆ ಹಣ ತಂದಿದ್ದೇನೆ ಎಂದರು.
ಇದಕ್ಕೂ ಮುನ್ನ ತಾಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿ ನೂತನ ಕಟ್ಟಡ, ತಾಪಂ ಕಟ್ಟಡ, ನಮ್ಮ ಕ್ಲಿನಿಕ್ ಅನ್ನು ಮಂಕಾಳ ವೈದ್ಯ ಉದ್ಘಾಟಿಸಿದರು. ಸಿಇಒ ಡಾ. ದಿಲಿಷ್ ಶಶಿ, ಗ್ಯಾರಂಟಿ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಸತೀಶ ನಾಯ್ಕ, ತಾಲೂಕು ಅಧ್ಯಕ್ಷೆ ಸುಮಾ ಉಗ್ರಾಣಕರ್, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಜಗದೀಶ ಗೌಡ ಇತರರಿದ್ದರು.
ಸುಳ್ಳು ಹೇಳುವ ರಾಜಕಾರಣಿಗಳು...
ಜಿಲ್ಲೆಯಲ್ಲಿ ಸುಳ್ಳು ಹೇಳುವ ಮತ್ತು ಅಡ್ಜಸ್ಟಮೆಂಟ್ ರಾಜಕಾರಣಿಗಳು ಇದುವರೆಗೂ ಆಡಳಿತ ನಡೆಸಿದ್ದಾರೆ. ಮಂಗನ ಕಾಯಿಲೆ ಶಿರಸಿ ಸಿದ್ದಾಪುರದಲ್ಲಿ ತೀವ್ರವಾಗಿದ್ದರೂ ಅವರಿಂದ ಪರೀಕ್ಷಾ ಕೇಂದ್ರ ಮಂಜೂರು ಮಾಡಿಸಲಾಗಿಲ್ಲ ಎಂದು ಮಂಕಾಳ ವೈದ್ಯ ಮಾರ್ಮಿಕವಾಗಿ ಹೇಳಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net