school : ವಸತಿ ಶಾಲೆ ಆರಂಭೋತ್ಸವಕ್ಕೆ ನಿರಾಸಕ್ತಿ

ಮುಂಡಗೋಡ  ಕರಗಿನಕೊಪ್ಪ ಮುರಾಜಿರ್ ದೇಸಾಯಿ ವಸತಿ ಶಾಲೆ.
ಮುಂಡಗೋಡ ಕರಗಿನಕೊಪ್ಪ ಮುರಾಜಿರ್ ದೇಸಾಯಿ ವಸತಿ ಶಾಲೆ.
Published on

ಪ್ರಮುಖ ಮುಖ್ಯಾಂಶಗಳು

  • ಬೆರಳೆಣಿಕೆಯ ವಿದ್ಯಾಥಿರ್ಗಳು ಮಾತ್ರ ಹಾಜರು
  • ಮಾಹಿತಿ ನೀಡದ್ದಕ್ಕೆ ಪಾಲಕರ ಆಕ್ರೋಶ
ಮುಂಡಗೋಡ: ತಾಲೂಕಿನ ಕರಗಿನಕೊಪ್ಪ ಮೊರಾರ್ಜಿ ದೇಸಾಯಿ ಹಾಗೂ ಪಾಳಾ ಇಂದಿರಾಗಾಂಧಿ ವಸತಿ ಶಾಲೆಯ ಪ್ರಾಂಶುಪಾಲರ ಹಾಗೂ ವಾರ್ಡನ್​ಗಳ ನಿರ್ಲದಿಂದ ವಸತಿ ಶಾಲೆಗಳಿಗೆ ಬೆರಳೆಣಿಕೆಯಷ್ಟು ವಿದ್ಯಾಥಿರ್ಗಳು ಆಗಮಿಸಿದ್ದಾರೆ.
ತಾಲೂಕಿನ ಕರಗಿನಕೊಪ್ಪ ಮುರಾಜಿರ್ ದೇಸಾಯಿ ವಸತಿ ಶಾಲೆಯಲ್ಲಿ 6ರಿಂದ 12ನೇ ತರಗತಿವರೆಗೆ ಮುನ್ನೂರಕ್ಕೂ ಹೆಚ್ಚು ವಿದ್ಯಾಥಿರ್ಗಳು ಇದ್ದರೆ, ಪಾಳಾ ಇಂದಿರಾ ಗಾಂಧಿ ವಸತಿ ಶಾಲೆಯಲ್ಲಿ 6ರಿಂದ 10ನೇ ತರಗತಿವರೆಗೆ ಎರಡುನೂರಕ್ಕೂ ಹೆಚ್ಚು ವಿದ್ಯಾಥಿರ್ಗಳು ಓದುತ್ತಿದ್ದಾರೆ. ಬೇರೆಡೆಗಳಲ್ಲಿ ಶಾಲಾ ಆರಂಭೋತ್ಸವವನ್ನು ಅದ್ದೂರಿಯಾಗಿ ಮಾಡಿ ಮಕ್ಕಳಿಗೆ ಹೂ ಹಾಗೂ ಸಿಹಿ ನೀಡಿ ಶಾಲೆಗಳಿಗೆ ಬರಮಾಡಿಕೊಂಡರೆ, ತಾಲೂಕಿನಲ್ಲಿನ ಎರಡು ವಸತಿ ಶಾಲೆಗಳ ಪ್ರಾಂಶುಪಾಲರು ಹಾಗೂ ವಾರ್ಡನ್​ಗಳು ಶಾಲಾ ಆರಂಭೋತ್ಸವ ತಮಗೆ ಸಂಬಂಧವಿಲ್ಲ ಎನ್ನುವ ಹಾಗೆ ಉಳಿದುಕೊಂಡಿದ್ದು ಪಾಲಕರ ಆಕ್ರೋಶಕ್ಕೆ ಕಾರಣವಾಗಿದೆ.
ಪಿಯು ಕಾಲೇಜು ಆರಂಭಗೊಂಡ 13 ದಿನಗಳಾಗಿವೆ. ಆದರೂ ಸಹ ಕರಗಿನಕೊಪ್ಪ ಮುರಾಜಿರ್ ದೇಸಾಯಿ ವಸತಿ ಕಾಲೇಜಿಗೆ ದ್ವೀತಿಯ ಪಿಯುಸಿ ವಿದ್ಯಾಥಿರ್ಗಳು ಬಂದಿಲ್ಲ. ಇನ್ನೂ ಪ್ರೌಢ ಶಾಲೆ ಆರಂಭಗೊಂಡು ಐದು ದಿನಗಳು ಕಳೆದಿವೆ. ಕರಗಿನಕೊಪ್ಪದಲ್ಲಿ ಆರು ಜನ ವಿದ್ಯಾಥಿರ್ಗಳು ಮಾತ್ರ ಆಗಮಿಸಿದ್ದು, ಪಾಳಾ ಇಂದಿರಾಗಾಂಧಿ ವಸತಿ ಶಾಲೆಯಲ್ಲಿ ಏಳು ಜನ ವಿದ್ಯಾಥಿರ್ಗಳು ಮಾತ್ರ ಆಗಮಿಸುವುದು ಕಂಡು ಬಂದಿದೆ. ಶಾಲೆಗಳು ಆರಂಭವಾದರೂ ಮಕ್ಕಳು ಬಾರದಿರುವುದು ಏಕೆ? ಎಂಬ ಪ್ರಶ್ನೆ ಶಿಕ್ಷಣ ಪ್ರೇಮಿಗಳನ್ನು ಕಾಡುತ್ತಿದೆ.
ಪ್ರಾಂಶುಪಾಲರ ನಿರ್ಲಕ್ಷ
ಎರಡು ವಸತಿ ಶಾಲೆಗಳ ಪ್ರಾಂಶುಪಾಲರು ಶಾಲಾ ಆರಂಭೋತ್ಸವದ ಕುರಿತು ವಿದ್ಯಾಥಿಗಳಿಗೆ ಸಮರ್ಪಕವಾಗಿ ಮಾಹಿತಿ ನೀಡುವಲ್ಲಿ ನಿರ್ಲಕ್ಷ ವಹಿಸಿರುವುದು ಕಂಡು ಬಂದಿದೆ. ಕೇವಲ ವಾಟ್ಸಪ್​ ಗ್ರೂಪ್​ನಲ್ಲಿ ಮಕ್ಕಳು ಜೂನ್​ ಒಂದರಿಂದ ಶಾಲೆಗೆ ಬನ್ನಿ ಅಂತಾ ಒಂದು ಮೆಸೇಜ್​ ಹಾಕಿ ಸುಮ್ಮನೆ ಕುಳಿತಿರುವುದು ಕಂಡು ಬಂದಿದೆ. ಮಕ್ಕಳ ಪಾಲಕರಿಗೆ ಸಂಬಂಧ ಪಟ್ಟ ತರಗತಿಯ ಶಿಕರಾಗಲಿ ಅಥವಾ ಸಿಬ್ಬಂದಿಯಾಗಲಿ ಪೋನ್​ ಕರೆ ಮಾಡಿ ಮಕ್ಕಳನ್ನು ಶಾಲೆಗೆ ಕರೆಯಿಸುವಲ್ಲಿ ನಿರ್ಲಕ್ಷ ವಹಿಸಿರುವುದು ಕಂಡು ಬಂದಿದೆ.

ಅವ್ಯವಸ್ಥೆಗೆ ಆಕ್ರೋಶ

ತಾಲೂಕಿನ ಮೊರಾರ್ಜಿ ವಸತಿ ಶಾಲೆಗೆ ಗುರುವಾರ (ಜೂ.4ರಂದು) ಭೇಟಿ ನೀಡಿದ್ದ ಜಿಲ್ಲಾ ಪಂಚಾಯಿತಿ ಆಡಳಿತ ಉಪಕಾರ್ಯದಶಿರ್ ಅಲ್ಲಾಭ ಅವರು ಅಲ್ಲಿನ ಅವ್ಯವಸ್ಥೆ ಕಂಡು ಅಸಮಾಧಾನ ವ್ಯಕ್ತಪಡಿಸಿದ್ದರು. ವಸತಿ ನಿಲಯದ ಶೌಚಾಲಯ ಬಾಗಿಲು, ಸಿಸಿ ಕ್ಯಾಮರಾಗಳು, ಹಾಗೂ ಸೋಲಾರ್​ ಹಿಟರ್​ ಒಡೆದಿದ್ದ ಬಗ್ಗೆ ಪಾಂಶುಪಾಲರನ್ನು ತರಾಟೆಗೆ ತೆಗೆದುಕೊಂಡಿದ್ದರು.
"

ಕರಗಿನಕೊಪ್ಪ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಅವ್ಯವಸ್ಥೆ ಕಂಡು ಬೇಸರವಾಗಿದೆ. ಶಾಲೆಯ ಪ್ರಾಂಶುಪಾಲರಿಗೆ ಕಾರಣ ಕೇಳಿ ನೋಟಿಸ್​ ಜಾರಿ ಮಾಡಿದ್ದೇನೆ.

— ಅಲ್ಲಾಭಕ್ಷ ಆಡಳಿತ ಉಪ ನಿರ್ದೇಶಕರು ಜಿಲ್ಲಾ ಪಂಚಾಯಿತಿ ಉತ್ತರ ಕನ್ನಡ
"

ನಮ್ಮ ಶಾಲೆಗಳಲ್ಲಿ ಅತಿಥಿ ಶಿಕರು ಇದ್ದಾರೆ. ಅವರ ನೇಮಕಾತಿ ಪ್ರಕ್ರಿಯೆ ನಡೆದಿದೆ. ಮಕ್ಕಳು ಶಾಲೆಗಳಿಗೆ ಬರಬೇಕಿತ್ತು ಬಂದಿಲ್ಲ. ಸೋಮವಾರದಿಂದ ತರಗತಿಗಳು ಆರಂಭವಾಗುತ್ತವೆ. ಶಾಲೆ ಆರಂಭೋತ್ಸವದ ಬಗ್ಗೆ ಪ್ರಾಂಶುಪಾಲರನ್ನು ವಿಚಾರಿಸುತ್ತೇನೆ.

— ಉಮೇಶ ಕೆ.ವೈ. ಉಪ ನಿರ್ದೇಶಕ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ.
"

ಜೂನ್​ 1ಕ್ಕೆ ಎಲ್ಲ ಮಕ್ಕಳಿಗೆ ಶಾಲೆಗೆ ಬರಲು ತಿಳಿಸಲಾಗಿತ್ತು. ಆದರೆ ಹೆಚ್ಚಿನ ಮಕ್ಕಳು ಬಂದಿಲ್ಲ. ಈಗ 18 ವಿದ್ಯಾಥಿರ್ಗಳು ಬಂದಿದ್ದು, ಶುಕ್ರವಾರ ಶಾಲಾ ಪ್ರಾರಂಭೋತ್ಸವ ಪೂಜೆ ಮಾಡಿದ್ದೇವೆ. ಭಾನುವಾರ ಸಂಜೆಯೊಳಗೆ ಎಲ್ಲ ವಿದ್ಯಾಥಿರ್ಗಳು ಬರಲು ತಿಳಿಸಿದ್ದು, ಸೋಮವಾರದಿಂದ ತರಗತಿಗಳು ಆರಂಭವಾಗಲಿವೆ.

— ಆನಂದ ಚಿಕ್ಕೋಡಿ, ಪ್ರಾಂಶುಪಾಲರು, ಕರಗಿನಕೊಪ್ಪ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಮುಂಡಗೋಡ


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net