ಉತ್ತರ ಕನ್ನಡ ಜಿಲ್ಲೆಯ ಘಟ್ಟದ ಮೇಲಿನ ತಾಲೂಕಗಳಾದ ಜೋಯಿಡಾ, ದಾಂಡೇಲಿ, ಹಳಿಯಾಳ, ಯಲ್ಲಾಪುರ, ಮುಂಡಗೋಡ, ಸಿರಸಿ ಹಾಗೂ ಸಿದ್ದಾಪುರ ಸೇರಿವೆ. ಈ ಪ್ರದೇಶಗಳು ಮಂಗಳೂರಿನಿAದ ದೂರವಿದ್ದು, ಆಡಳಿತಾತ್ಮಕ, ಆರ್ಥಿಕ ಹಾಗೂ ಐತಿಹಾಸಿಕವಾಗಿ ಧಾರವಾಡದೊಂದಿಗೆ ಹೆಚ್ಚಿನ ಸಂಪರ್ಕ ಹೊಂದಿವೆ. ಅಲ್ಲದೆ, ಈ ಭಾಗದ ಜನರು ಹಲವು ವರ್ಷಗಳಿಂದ ನ್ಯಾಯಾಂಗ ಸಂಬಂಧತ ವಿಚಾರಗಳಿಗೆ ಧಾರವಾಡ ಪೀಠವನ್ನೇ ಅವಲಂಬಿಸಿಕೊಂಡಿದ್ದಾರೆ.