ಪುರಾತತ್ವ ಇಲಾಖೆ ವತಿಯಿಂದ ರಾಜ್ಯದಲ್ಲಿನ ಹಳೆಯ ಹಸ್ತಪ್ರತಿಗಳು, ದಾಖಲೆಗಳನ್ನು ಸಂಗ್ರಹಿಸುವ ಮೂಲಕ ನಮ್ಮ ಪ್ರಾಚೀನ ಪರಂಪರೆ, ಇತಿಹಾಸವನ್ನು ಮುಂದಿನ ಪೀಳಿಗೆಗೆ ತಲುಪಿಸುವ ಉದ್ದೇಶದಿಂದ ಅವುಗಳನ್ನು ವೈಜ್ಞಾನಿಕವಾಗಿ ಡಿಜಟಲೈಸೇಷನ್ ಮಾಡುವ ಕಾರ್ಯ ನಡೆಯುತ್ತಿದ್ದು, ನಮ್ಮ ಜಿಲ್ಲೆಯಲ್ಲಿ ಪ್ರಸಿದ್ದ ರಾಜ ಮನೆತನಗಳ ಉಗಮ, ಆಳ್ವಿಕೆ, ಧಾರ್ಮಿಕ ಪರಂಪರೆಗಳ ಆಚರಣೆಗಳನ್ನು ಒಳಗೊಂಡ ವೈಭವದ ಇತಿಹಾಸವಿದ್ದು, ಈ ಬಗ್ಗೆ ಹಸ್ತಪ್ರತಿಗಳಲ್ಲಿ ಹೆಚ್ಚಿನ ದಾಖಲೆಗಳ ಇರುವ ಸಾಧ್ಯತೆಗಳಿದ್ದು, ಇಂತಹ ದಾಖಲೆಗಳ ಬಗ್ಗೆ ಮಾಹಿತಿಗಳನ್ನು ಸಂಗ್ರಹಿಸುವಂತೆ ತಿಳಿಸಿದರು.