ಇಜಿಟಲ್ ಅರೆಸ್ಟ್ ಬೆದರಿಕೆ ಒಡ್ಡಿ 1.74 ಕೋಟಿ ರೂ. ವಂಚನೆ

ಡಿಜಿಟಲ್ ಅರೆಸ್ಟ್ ಸಾಂದರ್ಭಿಕ ಚಿತ್ರ
ಡಿಜಿಟಲ್ ಅರೆಸ್ಟ್ ಸಾಂದರ್ಭಿಕ ಚಿತ್ರ
Published on
ಕಾರವಾರ: ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ಎಲ್ ಐಸಿ ಏಜೆಂಟ್ ಒಬ್ಬರಿಗೆ ಕೋಟಿಗೂ ಅಧಿಕ ಹಣ ವಂಚಿಸಿದ ಘಟನೆ ಯಲ್ಲಾಪುರದಲ್ಲಿ ನಡೆದಿದ್ದು, ಸೈಬರ್ ಅಪರಾಧಗಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯಲ್ಲಾಪುರ ಉಮ್ಮಚಗಿಯ ಎಲ್ ಐಸಿ ಏಜೆಂಟ್ ಶಿವಾನಂದ ತಿಮ್ಮಪ್ಪ‌ ಹೆಗಡೆ ಅವರಿಗೆ
917502502510 ಸಂಖ್ಯೆಯಿಂದ ಕರೆ ಮಾಡಿದ ವ್ಯಕ್ತಿಯು ತಾನು ಮುಂಬೈ ಪೊಲೀಸ ಹೆಡ್‌ಕ್ವಾರ್ಟಸ್‌ದಿಂದ ಕರೆ ಮಾಡುವುದಾಗಿ ಹೇಳಿ ಯಾರೋ
ಟೆರರಿಸ್ಟ್ ಗಳು ನಿಮ್ಮ ಹೆಸರಿನಲ್ಲಿರುವ ಆಧಾರ ಕಾರ್ಡ್ ಬಳಸಿಕೊಂಡು ಕೆನರಾ ಬ್ಯಾಂಕ್ ನಲ್ಲಿ ಬ್ಯಾಂಕ್ ಖಾತೆಯನ್ನು
ತೆರೆದು ಅದರಿಂದ ಕೋಟ್ಯಾಂತರ ರೂಪಾಯಿ ಅವ್ಯವಹಾರ ನಡೆಸಿರುತ್ತಾರೆ. ಈ ಬಗ್ಗೆ ಪಿರ್ಯಾದಿಯವರ ಹೆಸರಿನಲ್ಲಿರುವ ಬ್ಯಾಂಕ
ಖಾತೆಯ ಮೇಲೆ ಮನಿ ಲಾಂಡ್ರಿಂಗ್ ನಡೆಸಿದ ಬಗ್ಗೆ ಮುಂಬೈ ಕ್ರೈಂ ಬ್ರಾಂಚ್ ನಲ್ಲಿ ಎಫ್.ಐ.ಆರ್ ದಾಖಲಾಗಿರುವ ಬಗ್ಗೆ
ತಿಳಿಸಿದರು. ಹಾಗೂ ಪಿರ್ಯಾದಿಯವರ ಹೆಸರಿರುವ ಕೆನರಾ ಬ್ಯಾಂಕ್ ಎಟಿಎಂ ಕಾರ್ಡ್ ನ್ನು ವಾಟ್ಸ್ ಆ್ಯಪ್ ಮುಖಾಂತರ ಅವರಿಗೆ ಕಳಿಸಿ, ಬಂಧಿಸುವುದಾಗಿ ಬೆದರಿಸಿದರು. ತಾನು ಯಾವುದೇ ತರಹದ ತಪ್ಪು ಮಾಡಿಲ್ಲ. ಹಾಗೂ ಅವ್ಯವಹಾರದಲ್ಲಿ ಭಾಗಿಯಾಗಿಲ್ಲ ಎಂದು
ತಿಳಿಸಿದರೂ ಮಾತನ್ನು ಕೇಳುವ ಸ್ಥಿತಿಯಲ್ಲಿರಲಿಲ್ಲ. ನಂತರ ಅವರು ಪಿರ್ಯಾದಿಯವರಿಗೆ
ತಮ್ಮ ಹಿರಿಯ ಅಧಿಕಾರಿಯವರು ಕರೆ ಮಾಡುತ್ತಾರೆ ನೀವು ಅವರೊಂದಿಗೆ ಮಾತನಾಡಿ ಅವರು ನಿಮಗೆ ಪರಿಹಾರ
ಸೂಚಿಸಬಹುದು ಎಂದರು.

ಸಮವಸ್ತ್ರ ಧರಿಸಿ ವಿಡಿಯೋ ಕಾಲ್

ಕೆಲ ಹೊತ್ತಿನಲ್ಲಿ ಇನ್ನೊಬ್ಬ ವ್ಯಕ್ತಿಯು ಅದೇ ಮೊಬೈಲ್ ನಂ: 917502502510 ರಿಂದ ವಿಡಿಯೋ ಕಾಲ್ ಮಾಡಿದ್ದ. ಆತ ಮುಂಬೈ ಪೊಲೀಸ್ ಅಧಿಕಾರಿಯ ಸಮವಸ್ತ್ರ
ಧರಿಸಿಕೊಂಡಿದ್ದ. ನಿಮ್ಮನ್ನು ಡಿಜಿಟಲ್ ಅರೆಸ್ಟ್ ಮಾಡಿರುವುದಾಗಿ ಹೇಳಿದ್ದ. ನಿಮ್ಮ ಖಾತೆಯಲ್ಲಿರುವ ಹಣವನ್ನು ರಿಸರ್ವ ಬ್ಯಾಂಕ್ ಗೆ ಜಮಾ
ಮಾಡಬೇಕಾಗುತ್ತದೆ. ನಾವು ತನಿಖೆ ಮಾಡಿ ನೀವು ಯಾವುದೇ ಅವ್ಯವಹಾರದಲ್ಲಿ ಭಾಗಿಯಾಗಿಲ್ಲ ಎಂದು ಕಂಡು ಬಂದರೆ ನಿಮ್ಮ
ಹಣವನ್ನು ಮರಳಿ ನಿಮ್ಮ ಖಾತೆಗೆ ಜಮಾ ಮಾಡುವುದಾಗಿ ತಿಳಿಸಿದರು. ಹಾಗೂ ನಾವು ಹೇಳುವ ವರೆಗೂ ಈ ವಿಷಯದ ಬಗ್ಗೆ
ನೀವು ಯಾರಲ್ಲಿಯೂ ಚರ್ಚಿಸಬಾರದು ಇಲ್ಲದಿದ್ದರೆ ನಿಮ್ಮನ್ನು ಅರೆಸ್ಟ್ ಮಾಡಿಕೊಂಡು ಹೋಗುವುದಾಗಿ ಬೆದರಿಸಿದರು. ನಂತರ
ಇನ್ನೊಬ್ಬ ವ್ಯಕ್ತಿಯು ಅದೇ ಮೊಬೈಲ್ ನಂಬರ್ ನಂಬರ್ ನಿಂದ ವಿಡಿಯೋ ಕರೆ ಮಾಡಿ ತಾನು ಮುಂಬೈ ಪೊಲೀಸ್ ಡಿಐಜಿ ದರ್ಜೆಯ ಅಧಿಕಾರಿಯಾಗಿದ್ದು, ಪಿರ್ಯಾದಿಯ ಪ್ರಕರಣದ
ತನಿಖೆಯನ್ನು ತಾನೇ ನಡೆಸುತ್ತಿರುವುದಾಗಿ ತಿಳಿಸಿದನು. ಹಾಗೂ ಪಿರ್ಯಾದಿಯವರಿಗೆ ಕೂಡಲೇ ಹಣವನ್ನು ವರ್ಗಾವಣೆ
ಮಾಡುವಂತೆ ತಿಳಿಸಿದರು. ಆಗ ಪಿರ್ಯಾದಿಯವರು ಅವರಿಗೆ ತನ್ನ ಹಣ ಪಿಕ್ಸಡ್ ಡಿಪಾಸಿಟ್‌ದಲ್ಲಿದ್ದು, ಅದನ್ನು ತೆಗೆದು
ವರ್ಗಾವಣೆ ಮಾಡಲು ಸಮಯಾವಕಾಶ ಬೇಕಾಗುತ್ತದೆ ಅಂತಾ ತಿಳಿಸಿದಾಗ ಅವರು ಪಿರ್ಯಾದಿಯವರಿಗೆ ನೀವು ಹಣ
ವರ್ಗಾವಣೆ ಮಾಡುವವರೆಗೆ ನಿಮ್ಮ ಪ್ರತಿದಿನದ ಲೊಕೇಶನ್ ಹಾಗೂ ಪೊಟೋವನ್ನು ತಮ್ಮ ಮೊಬೈಲ್ ಫೋನ್ ಗೆ ವಾಟ್ಸ್ಆ್ಯಪ್ ಕಾಲ್ ಮಾಡಬೇಕು ಎಂದು ಸೂಚನೆ ನೀಡಿದ್ದ‌. ಅದರಂತೆ 1.74 ಕೋಟಿ ರೂ.ಗಳನ್ನು ವಂಚಕರ ಬ್ಯಾಂಕ್ ಖಾತೆಗಳಿಗೆ ಶಿವಾನಂದ ಹೆಗಡೆ ಅವರು ವರ್ಗಾಯಿಸಿದ್ದಾರೆ ಎನ್ನಲಾಗಿದೆ. ಕಾರವಾರದ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net