ಕಾರವಾರ: ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯು ಮಹಿಳಾ ಸಬಲೀಕರಣಕ್ಕೆ ದೊಡ್ಡ ಕೊಡುಗೆ ನೀಡಿದೆ ಎಂದು ಮಾಜಿ ಶಾಸಕಿ ರೂಪಾಲಿ ನಾಯ್ಕ ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ, ಬಿ.ಸಿ.ಟ್ರಸ್ಟ್ನಿಂದ ಕಾರವಾರ ವಲಯದಿಂದ ಬಾಡ ಮಹಾದೇವ ದೇವಸ್ಥಾನದ ಆವರಣದಲ್ಲಿ ಆಯೋಜಿಸಿದ್ದ ಸಾಮೂಹಿಕ ಸಹಸ್ರ ಬಿಲ್ವಾರ್ಚನೆ ಮೃತ್ಯುಂಜಯ ಹೋಮ ಹಾಗೂ ಸಭಾ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಅವರು ಮಾತನಾಡಿದರು.
ಗ್ರಾಮ ಗ್ರಾಮಗಳಲ್ಲಿ ಬದಲಾವಣೆ, ಜನರಲ್ಲಿ ಸಾಮಾಜಿಕ ಶಿಸ್ತು ಆರ್ಥಿಕ ಶಿಸ್ತು ಮಹಿಳೆಯ ಸ್ವಾತಂತ್ರ‍್ಯತ್ವವನ್ನು ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಎಲ್ಲಾ ಮಹಿಳೆಯರಿಗೂ ಸಂಸ್ಕಾರ ಕಲಿಸಿದೆ ಎಂದರು.
ಮಹಾದೇವ ದೇವಸ್ಥಾನದ ಪ್ರಧಾನ ಅರ್ಚಕ ಘನಶ್ಯಾಮ ಜೋಶಿ ಅವರು ಕಾರ್ಯಕ್ರಮ ಉದ್ಘಾಟಿಸಿರು.
ನಿವೃತ್ತ ಅಽಕಾರಿ ಸತೀಶ್ ಜಿ. ಗೋಸಾವಿ, ನಿವೃತ್ತ ಶಿಕ್ಷಕ ರಾಜೇಂದ್ರ, ಅರ್ಚಕ ರಾಮಕೃಷ್ಣ ಗಾಯಿತ್ರಿ ಭಟ್ ಅತಿಥಿಗಳಾಗಿದ್ದರು. ಯೋಜನೆಯ ಕಾರವಾರ ಯೋಜನಾಽಕಾರಿಗಳಾದ ಶಿವರಾಜ್ ಆಚಾರ್ಯ ಇವರು ಯೋಜನೆಯ ವಿವಿಧ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ರೋಷನಿ ರಾಜೇಶ್ ಅಧ್ಯಕ್ಷತೆ ವಹಿಸಿದ್ದರು.
ಶೇಜವಾಡದ ಗುರುಪ್ರಸಾದ್ ಸ್ವಸಹಾಯ ಸಂಘದ ಸದಸ್ಯರು ಪ್ರಾರ್ಥಿಸಿದರು. ಒಕ್ಕೂಟದ ಅಧ್ಯಕ್ಷೆ ರೋಷನಿ ರಾಜೇಶ್ ಪಾವಸ್ಕರ್ ಸ್ವಾಗತಿಸಿದರು. ಸೇವಾ ಪ್ರತಿನಿಽ ನಾಗರತ್ನ ವಲಯದ ಸಾಧನ ವರದಿಯನ್ನು ಓದಿದರು. ಜ್ಞಾನವಿಕಾಸ ಸಮನ್ವಯ ಅಽಕಾರಿ ಗಾಯತ್ರಿವರು ನಿರೂಪಿಸಿದರು.ವಲಯದ ಮೇಲ್ವಿಚಾರಕಿ ವಿಜಯ ವಂದಿಸಿದರು.