Assigned teachers ಇಬ್ಬರು ನಿಯೋಜಿತ ಶಿಕ್ಷಕರ ಬದಲಾಯಿಸಲು ಪಟ್ಟು

ಮಳವಳ್ಳಿ ಕಿ.ಪ್ರಾ. ಶಾಲೆಯಲ್ಲಿ ಶಿಕ್ಷಣಾಧಿಕಾರಿಗಳ ಸಮಕ್ಷಮ ಪಾಲಕರು ಹಾಗೂ ಊರವರು ಸಮಸ್ಯೆ ಬಗೆಹರಿಸಲು ಪಟ್ಟು ಹಿಡಿದರು. ಬಿಇಒ ಉದಯ ನಾಯ್ಕ, ಬಿಆರ್‌ಪಿ ಸಂಧ್ಯಾ ರಾಯ್ಕರ, ಸಿಆರ್‌ಪಿ ಲೋಕೇಶ ಭಟ್, ಗಣಪತಿ ಗೌಡ, ತಾರಾ ಗೌಡ, ವಿನಾಯಕ ಅಂಬಿಗ ಇತರರಿದ್ದರು.
ಮಳವಳ್ಳಿ ಕಿ.ಪ್ರಾ. ಶಾಲೆಯಲ್ಲಿ ಶಿಕ್ಷಣಾಧಿಕಾರಿಗಳ ಸಮಕ್ಷಮ ಪಾಲಕರು ಹಾಗೂ ಊರವರು ಸಮಸ್ಯೆ ಬಗೆಹರಿಸಲು ಪಟ್ಟು ಹಿಡಿದರು. ಬಿಇಒ ಉದಯ ನಾಯ್ಕ, ಬಿಆರ್‌ಪಿ ಸಂಧ್ಯಾ ರಾಯ್ಕರ, ಸಿಆರ್‌ಪಿ ಲೋಕೇಶ ಭಟ್, ಗಣಪತಿ ಗೌಡ, ತಾರಾ ಗೌಡ, ವಿನಾಯಕ ಅಂಬಿಗ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶಾಲೆಗೆ ಬೀಗ ಜಡಿಯುವ ಎಚ್ಚರಿಕೆ
  • ಎಸ್‌ಡಿಎಂಸಿ, ಪಾಲಕರು, ಗ್ರಾಮಸ್ಥರ ಆಕ್ರೋಶ
ಕುಮಟಾ: ಶಾಲೆಗೆ ನಿಯೋಜಿತ ಇಬ್ಬರು ಶಿಕ್ಷಕರಲ್ಲಿ ಒಬ್ಬರೂ ಸರಿಯಿಲ್ಲ, ಓರ್ವ ಮಾನಸಿಕ ಅಸ್ವಸ್ಥನಂತೆ ವರ್ತಿಸಿದರೆ, ಇನ್ನೋರ್ವ ವ್ಯಸನಿಯಾಗಿದ್ದು ಇದರಿಂದಾಗಿ ನಮ್ಮ ಮಕ್ಕಳ ಶಿಕ್ಷಣ ಹಳ್ಳಹಿಡಿದಿದೆ. ಕೂಡಲೇ ಇಬ್ಬರು ಶಿಕ್ಷಕರನ್ನೂ ಬದಲಾಯಿಸಬೇಕು. ಇಲ್ಲದಿದ್ದರೆ ಶಾಲೆಗೆ ಬೀಗ ಜಡಿಯುತ್ತೇವೆ ಎಂದು ಶಾಲೆಯಲ್ಲಿ ಜಮಾಯಿಸಿದ ಎಸ್‌ಡಿಎಂಸಿ, ಪಾಲಕರು ಹಾಗೂ ಗ್ರಾಮಸ್ಥರು ಪಟ್ಟು ಹಿಡಿದ ವಿದ್ಯಮಾನ ತಾಲೂಕಿನ ಅಳಕೋಡ ಪಂಚಾಯಿತಿ ವ್ಯಾಪ್ತಿಯ ಮಳವಳ್ಳಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ನಡೆದಿದೆ.
ನಡೆದಿದ್ದೇನು?: 1ರಿಂದ 5ನೇ ತರಗತಿಯವರೆಗೆ ಕಲಿಕೆ ಮಳವಳ್ಳಿ ಸಕಿಪ್ರಾ ಶಾಲೆಯಲ್ಲಿದೆ. ಶಾಲೆಯಲ್ಲಿ ಕಳೆದ 22 ವರ್ಷಗಳಿಂದ ಶಿಕ್ಷಕರಾಗಿರುವ ಅನಂತ ವಾಸುದೇವ ದೇಶಭಂಡಾರಿ ಶಾಲೆಯ ಶಿಕ್ಷಣ ಗುಣಮಟ್ಟ ಕೆಡಲು ಮೂಲ ಕಾರಣ. ಸರಿಯಾದ ಸಮಯಕ್ಕೆ ಶಾಲೆಗೆ ಬರುವುದಿಲ್ಲ, ತರಗತಿಯನ್ನೂ ಸರಿಯಾಗಿ ನಡೆಸುವುದಿಲ್ಲ. ಪಾಲಕರು ಪ್ರಶ್ನಿಸಿದರೆ ಉದಟಛಿಟತನದ ಉತ್ತರ ಸಿದಟಛಿವಿರುತ್ತದೆ. ಶಿಕ್ಷಕ ಅನಂತ ದೇಶಭಂಡಾರಿ ಅವರ ವರ್ತನೆ ಮಾನಸಿಕ ಸಮಸ್ಯೆ ಉಳ್ಳವರಂತೆ ಗಳಿಗೆಗೊಮ್ಮೆ ಬದಲಾಗುತ್ತಿರುತ್ತದೆ. ಹಿಂದೆ ಈ ವಿಷಯವನ್ನು ಖುದ್ದು ಪರಿಶೀಲಿಸಿದ ಬಳಿಕ ಶಿಕ್ಷಣಾಧಿಕಾರಿಗಳು ಮಾನವೀಯತೆಯಿಂದ ಶಾಲೆಗೆ ಅನಂತ ದೇಶಭಂಡಾರಿ ಸಹೋದರ ನಾಗರಾಜ ದೇಶಭಂಡಾರಿ ಅವರನ್ನು ಅತಿಥಿ ಶಿಕ್ಷಕರಾಗಿ ನಿಯೋಜಿಸಿದ್ದು ಇದಕ್ಕೆಲ್ಲ ಸಾಕ್ಷಿಯಾಗಿದೆ ಎಂದು ಗ್ರಾಮಸ್ಥರು ದೂರಿದರು.
ಹಾಗೆಯೇ ಶಿಕ್ಷಕ ಪ್ರಕಾಶ ನಾಯ್ಕ ಅವರ ವರ್ತನೆಯಂತೂ ಅನಂತ ದೇಶಭಂಡಾರಿ ಅವರಿಗಿಂತ ಅಸಮಂಜಸವಾಗಿದ್ದು ಶಾಲೆಯಲ್ಲಿ ಪಾನ, ಗುಟ್ಖಾ, ಮದ್ಯ ಸೇವನೆ ಮಾಡುವುದು, ಅತಿಥಿ ಶಿಕ್ಷಕರು ಮತ್ತು ಮಕ್ಕಳೊಂದಿಗೆ ಅಸಹ್ಯ ವರ್ತನೆ, ನಿಂದನೆ ಮಾಡುತ್ತ ಬಂದಿದ್ದಾರೆ. ಶಾಲೆಯ ಶಿಕ್ಷಕರೇ ಹೀಗಾದರೆ ಮಕ್ಕಳ ಪಾಠದ ಗತಿಯೇನು? ಶಾಲೆಯಲ್ಲಿ ಮಕ್ಕಳಿಗೆ ಭಯದ ವಾತಾವರಣ ಸೃಷ್ಟಿಯಾಗಿದೆ. ಈ ಶಾಲೆಗೆ ಮಕ್ಕಳನ್ನು ಕಳಿಸಲು ಧೈರ್ಯ ಸಾಲದೇ ಬೇರೆ ಶಾಲೆಗೆ ಕಳಿಸುತ್ತಿದ್ದಾರೆ. ಇದೇ ರೀತಿಯಾದರೆ ಊರಿನ ಶಾಲೆಯನ್ನು ಮುಚ್ಚಬೇಕಾಗಬಹುದು. ಡಿಡಿಪಿಐವರೆಗೆ ಯಾವ ಅಧಿಕಾರಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಹೀಗಾಗಿ ಈ ಬಗ್ಗೆ ಶಾಲಾಡಳಿತ, ಪಾಲಕರು ಹಾಗೂ ಗ್ರಾಮಸ್ಥರೆಲ್ಲ ಸೇರಿ ಪ್ರತಿಭಟನೆ ನಡೆಸುವುದಾಗಿ ಶಿಕ್ಷಣ ಇಲಾಖೆಗೆ ಮಾಹಿತಿ ನೀಡಿದ್ದರು.
ಪ್ರತಿಭಟನೆ: ಗುರುವಾರ ಶಾಲೆಯ ಬಳಿ ಪ್ರತಿಭಟನೆ ಶುರುವಾಗಿದ್ದು, ಸ್ಥಳಕ್ಕೆ ಆಗಮಿಸಿದ ಬಿಇಒ ಉದಯ ನಾಯ್ಕ, ಬಿಆರ್‌ಪಿ ಸಂಧ್ಯಾ ರಾಯ್ಕರ ಹಾಗೂ ಸಿಆರ್‌ಪಿ ಲೋಕೇಶ ಭಟ್ ಸಭೆ ನಡೆಸಿದರು. ಪ್ರಕರಣದ ಕುರಿತು ಈವರೆಗಿನ ಇಲಾಖೆ ವರದಿ ವಿವರಿಸಿದ ಉದಯ ನಾಯ್ಕ ಸಮಸ್ಯೆ ಆಲಿಸಿದರು.
ಗ್ರಾಪಂ ಮಾಜಿ ಸದಸ್ಯ ವಿನಾಯಕ ಅಂಬಿಗ, ನಾಗರಾಜ ಗೌಡ ಇತರರು ಮಾತನಾಡಿ, ಹಲವಾರು ವರ್ಷಗಳಿಂದ ಇದೇ ಸಮಸ್ಯೆಯಾಗಿದೆ. ಕಳೆದ ವರ್ಷ ನೀವು ಇಲ್ಲಿಗೆ ಬಂದು ನೋಡಿ ವಿಆರ್‌ಎಸ್ ತೆಗೆದುಕೊಳ್ಳುವಂತೆ ಇಲ್ಲಿನ ಶಿಕ್ಷಕರಿಗೆ ಹೇಳಿದ್ದೀರಿ, ಇಲ್ಲದಿದ್ದರೆ ಸಸ್ಪೆಂಡ್ ಮಾಡುತ್ತೇನೆ ಎಂದಿದ್ದೀರಿ. ಯಾಕೆ ಮಾಡಿಲ್ಲ? ಯಾವುದೇ ಕಾರಣಕ್ಕೂ ನಾಳೆ ಈ ಇಬ್ಬರೂ ಶಿಕ್ಷಕರನ್ನು ಶಾಲೆ ಹೊಕ್ಕಲು ಬಿಡುವುದಿಲ್ಲ. ಬೀಗ ಜಡಿಯುತ್ತೇವೆ. ನಮಗೆ ಈ ಶಿಕ್ಷಕರು ಸುತಾರಾಂ ಬೇಡ, ಬೇರೆ ಶಿಕ್ಷಕರನ್ನು ನಿಯೋಜಿಸಿ ಎಂದು ಒತ್ತಾಯಿಸಿದರು.
ದಿವಗಿ ಪಂಚಾಯಿತಿ ಮಾಜಿ ಅಧ್ಯಕ್ಷ ಕೃಷ್ಣ ಗೌಡ ಮಾತನಾಡಿ, ಶಿಕ್ಷಕ ಅನಂತ ದೇಶಭಂಡಾರಿ ಮಾನಸಿಕ ಸ್ಥಿತಿಯ ಬಗ್ಗೆ ಇಡೀ ಊರಿಗೆ ಮಾತ್ರವಲ್ಲದೆ, ನಿಮಗೂ ಗೊತ್ತಿದೆ. ಮೆಡಿಕಲ್ ಸರ್ಟಿ?ಕೇಟ್ ಸಿಂಧುವಲ್ಲ, ಈ ಬಗ್ಗೆ ಇಲ್ಲಿನ ಜನ ಹಲವು ವರ್ಷಗಳಿಂದ ನಿಮಗೆ ನೀಡಿದ ಮನವಿಗೆ ನೀವು ಪರಿಶೀಲನೆ ಮಾಡಿದ ಒಂದೇ ಒಂದು ವರದಿ ಮೇಲಧಿಕಾರಿಗೆ ಹೋಗಿಲ್ಲ ಯಾಕೆ? ಜನರ ಬೇಡಿಕೆಯಂತೆ ಈ ಇಬ್ಬರೂ ಶಿಕ್ಷಕರನ್ನು ಬದಲಿಸಬೇಕು ಎಂದರು. ಇದಕ್ಕೆ ಹಾಲಕ್ಕಿ ಸಮುದಾಯದ ಅಧ್ಯಕ್ಷ ಗೋವಿಂದ ಗೌಡ ದನಿಗೂಡಿಸಿದರು.
ಭರವಸೆ: ಸಾಕಷ್ಟು ಚರ್ಚೆಯ ಬಳಿಕ ಅಂತಿಮ ಪ್ರತಿಕ್ರಿಯೆ ನೀಡಿದ ಬಿಇಒ ಉದಯ ನಾಯ್ಕ, ಶಿಕ್ಷಕ ಅನಂತ ದೇಶಭಂಡಾರಿ ಹಾಗೂ ಪ್ರಕಾಶ ನಾಯ್ಕ ವಿರುದಟಛಿ ನೋಟಿಸ್ ಜಾರಿ ಮಾಡುತ್ತೇವೆ ಮತ್ತು ಸೂಕ್ತ ಕ್ರಮಕ್ಕೆ ಮೇಲಧಿಕಾರಿಗೆ ಬರೆಯುತ್ತೇವೆ ಎಂದರು. ನಿಮ್ಮೆಲ್ಲರ ಬೇಡಿಕೆಯನ್ನು ಪರಿಶೀಲಿಸಿ, ಸದ್ಯದ ಪರಿಸ್ಥಿತಿಯಲ್ಲಿ ಬದಲಿ ಶಿಕ್ಷಕರು ಬರುವವರೆಗೆ ಬಿಆರ್‌ಪಿ, ಸಿಆರ್‌ಪಿ ಅವರನ್ನು ಲಭ್ಯತೆಗೆ ತಕ್ಕಂತೆ ಶಾಲೆಗೆ ತುರ್ತು ಕಾರ್ಯನಿರ್ವಹಣೆಗೆ ನಿಯೋಜಿಸಲಾಗುವುದು. ಶೀಘ್ರವೇ ಓರ್ವ ಶಿಕ್ಷಕರನ್ನೂ ಒದಗಿಸುವುದಾಗಿ ಭರವಸೆ ನೀಡಿದರು. ಇದರೊಂದಿಗೆ ಪ್ರತಿಭಟನೆ ಮುಕ್ತಾಯಗೊಂಡಿತು. ಎಸ್‌ಡಿಎಂಸಿ ಅಧ್ಯಕ್ಷ ಗಣಪತಿ ಗೌಡ, ಉಪಾಧ್ಯಕ್ಷೆ ತಾರಾ ಗೌಡ, ಗಣಪತಿ ಗೌಡ ಗೋಕರ್ಣ, ಗಣೇಶ ಗೌಡ, ಕುಸುಮಾಕರ ಗೌಡ, ಮಂಜುನಾಥ ಗೌಡ, ನಾಗವೇಣಿ ವಿ. ಗೌಡ, ಮಂಗಲಾ ಎಂ. ಗೌಡ, ಶಂಕರ ಗೌಡ, ನವೀನ ಗೌಡ, ದತ್ತಾತ್ರೇಯ ಹರಿಕಾಂತ, ರಾಜೇಶ, ಮಾದೇವಿ, ನಿರ್ಮಲಾ, ಭವಾನಿ, ಸರಿತಾ, ಬೀರ, ಸುದೀಪ ಗೌಡ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net