ಬನವಾಸಿ ವಲಯದ ಕೆರೆ ತುಂಬಿಸಲು ಆಗ್ರಹ

ಕೆರೆಗಳಿಗೆ ನೀರು ತುಂಬುವ ಉದ್ದೇಶದಿಂದ ಶಿರಸಿ ತಾಲೂಕು ಬನವಾಸಿ ವರದಾ ನದಿ ದಡದಲ್ಲಿ ಸ್ಥಾಪಿಸಲಾದ ಪಂಪ್ ಹೌಸ್.
ಕೆರೆಗಳಿಗೆ ನೀರು ತುಂಬುವ ಉದ್ದೇಶದಿಂದ ಶಿರಸಿ ತಾಲೂಕು ಬನವಾಸಿ ವರದಾ ನದಿ ದಡದಲ್ಲಿ ಸ್ಥಾಪಿಸಲಾದ ಪಂಪ್ ಹೌಸ್.
Published on
ಶಿರಸಿ: ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಅಡಿಯಲ್ಲಿ ಬನವಾಸಿಯ ವರದಾ ನದಿಯಲ್ಲಿ ನಿರ್ಮಿಸಲಾದ ಲಿಪ್ಟ್ ಇರಿಗೇಷನ್‌ನಿಂದ ಬನವಾಸಿ ವಲಯದ ಕೆರೆಗಳನ್ನು ತುಂಬಿಸಲು ಇದೀಗ ಸಕಾಲವಾಗಿದೆ. ಕೂಡಲೇ ಕೆರೆಗಳನ್ನು ತುಂಬಿಸಿ ರೈತರಿಗೆ ಉಪಯೋಗ ಆಗುವಂತೆ ಸರ್ಕಾರ ನೆರವಿಗೆ ಬರಬೇಕು ಎಂದು ಬನವಾಸಿ ನೂತನ ತಾಲೂಕು ರಚನಾ ಹೋರಾಟ ಸಮಿತಿ ಸರ್ಕಾರವನ್ನು ಆಗ್ರಹಿಸಿದೆ.
ಈ ಕುರಿತು ತಾಲೂಕು ಹೋರಾಟ ಸಮಿತಿ ಅಧ್ಯಕ್ಷ ಉದಯಕುಮಾರ್ ಕಾನಳ್ಳಿ, ಗೌರವಾಧ್ಯಕ್ಷ ಸಿ ಏಪ್ ನಾಯಕ ಮಾಳಂಜಿ, ಕಾರ್ಯದರ್ಶಿ ವಿಶ್ವನಾಥ ಒಡೆಯರ್ ಜಂಟಿ ಹೇಳಿಕೆ ನೀಡಿ, ಶಾಸಕ ಶಿವರಾಮ ಹೆಬ್ಬಾರ ಅವರು ಈ ದಿಶೆಯಲ್ಲಿ ಸಂಪೂರ್ಣ ಪ್ರಯತ್ನ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಮಧ್ಯ ಮಳೆಗಾಲದ ಈ ಸಮಯದಲ್ಲಿ ಭಾರಿ ಮಳೆಯಿಂದ ಪ್ರವಾಹ ಸೃಷ್ಟಿಸುವ ಸಂದರ್ಭದಲ್ಲಿ ರಣ ರಣ ಬಿಸಿಲು ಬೀಳುತ್ತಿದೆ. ಅನಾವೃಷ್ಟಿ ಎದುರಾಗುವ ಮುನ್ಸೂಚನೆ ಎದ್ದು ಕಾಣುತ್ತಿದ್ದು, ಇದೀಗ ವರದಾ ನದಿಂದ ಹೆಚ್ಚುವರಿಯಾಗಿ ಹರಿದು ಹೋಗುತ್ತಿರುವ ನೀರನ್ನು ಬನವಾಸಿ ವಲಯ ವ್ಯಾಪ್ತಿಯ ಕೆರೆಗಳನ್ನು ತುಂಬಿಸಿ ರೈತರಿಗೆ ಉಪಯೋಗವಾಗುವ ನಿಟ್ಟಿನಲ್ಲಿ ಕೆಲಸ ಆಗಬೇಕಾಗಿದೆ. ಈ ರೀತಿ ಕೆರೆಗಳನ್ನು ತುಂಬಿಸುವುದರಿಂದ ಬನವಾಸಿ ವಲಯ ವ್ಯಾಪ್ತಿಯ ಪ್ರದೇಶದಲ್ಲಿ ಅಂತರ್ಜಲ ಹೆಚ್ಚಾಗುವುದಲ್ಲದೆ, ದೀರ್ಘ ಕಾಲ ನೀರಿನ ಸೆಲೆ ಇರುತ್ತದೆ. ಗುಡ್ನಾಪುರ ಕೆರೆ ಹಾಗೂ ರಾಮತೀರ್ಥ ಕೆರೆ ತುಂಬಿಸುವುದರಿಂದ ಬನವಾಸಿ ಗುಡ್ನಾಪುರ ಸೇರಿದಂತೆ ಇನ್ನೂ ಅನೇಕ ಗ್ರಾಮಗಳ ಭಾವಿಗಳಲ್ಲಿ ಅಂತರ್ಜಲ ಮತ್ತು ನೀರಿನ ಮಟ್ಟ ಹೆಚ್ಚಾಗಿ ಅನುಕೂಲ ಆಗುತ್ತದೆ. ಹೀಗೆ ಈ ಭಾಗದಲ್ಲಿ ಕೃಷಿ ಕಾರ್ಯಗಳಿಗೆ, ಕುಡಿಯುವ ನೀರಿಗೆ ಆಧಾರವಾಗುತ್ತದೆ ಎಂದಿದ್ದಾರೆ.
ೆಟೋ 16 ಶಿರಸಿ 4 ಎ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net