ನದಿ ತಿರುವು ತಡೆಗೆ ಶಾಸಕರ ನಿಯೋಗದಿಂದ ಸಿಎಂ ಭೇಟಿ

ವಿಧಾನಸಭಾ ಉಪಾಧ್ಯಕ್ಷ ಮಂಕಾಳ ವೈದ್ಯ ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಅವರ ಆಶೀರ್ವಾದ ಪಡೆದರು. ಅನಂತ ಅಶೀಸರ, ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ ಇತರರಿದ್ದರು.
ವಿಧಾನಸಭಾ ಉಪಾಧ್ಯಕ್ಷ ಮಂಕಾಳ ವೈದ್ಯ ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಅವರ ಆಶೀರ್ವಾದ ಪಡೆದರು. ಅನಂತ ಅಶೀಸರ, ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ ಇತರರಿದ್ದರು.
Published on
ಶಿರಸಿ:

ನೀರೇ ಇಲ್ಲದ ಬೇಡ್ತಿ-ಅಘನಾಶಿನಿ ನದಿ ತಿರುವು ಯೋಜನೆಯನ್ನು ಕೈಬಿಡುವಂತೆ ಒತ್ತಾಯಿಸಿ ಮುಖ್ಯಮಂತ್ರಿ ಅವರನ್ನು ಶಿರಸಿ, ಯಲ್ಲಾಪುರ ಹಾಗೂ ಕುಮಟಾ ಶಾಸಕರೊಂದಿಗೆ ಭೇಟಿ ಮಾಡಿ ಮನವಿ ಸಲ್ಲಿಸಲಾಗುವುದು ಎಂದು ವಿಧಾನಸಭಾ ಉಪಸಭಾಧ್ಯಕ್ಷ ಮಂಕಾಳ ವೈದ್ಯ ಹೇಳಿದರು.


ಸ್ವರ್ಣವಲ್ಲೀ ಮಠಕ್ಕೆ ಶನಿವಾರ ಭೇಟಿ ನೀಡಿದ ಅವರು ಶ್ರೀಗಳ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ಬೇಡ್ತಿ-ವರದಾ ನದಿ ತಿರುವು ಯೋಜನೆ ಸರ್ವೆ ಹಂತ ತಲುಪಿರುವ ಕುರಿತು ಚರ್ಚೆ ನಡೆಯಿತು.
ಅಘನಾಶಿನಿ ನದಿ ಉಳಿಸುವ ವಿಚಾರದಲ್ಲಿ ರಾಜ್ಯ, ಕೇಂದ್ರ ಎಂದು ಹೊಣೆಗಾರಿಕೆಯನ್ನು ಪರಸ್ಪರ ಬೊಟ್ಟು ಮಾಡುವುದನ್ನು ಬಿಟ್ಟು, ಶಾಸಕರು ಹಾಗೂ ಸಂಸದರು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕು.
ಶ್ರೀ ಮುಖ್ಯಮಂತ್ರಿಯನ್ನು ಭೇಟಿ ಮಾಡಿ ಯೋಜನೆಗೆ ತಡೆ ನೀಡುವಂತೆ ಒತ್ತಾಯಿಸಬೇಕು ಎಂಬ ಜನತೆಯ ಆಗ್ರಹವನ್ನು ಸ್ವರ್ಣವಲ್ಲೀ ಮಠದ ಶ್ರೀಗಳು ಮಂಕಾಳು ವೈದ್ಯ ಅವರ ಮುಂದಿಟ್ಟರು.
ಇದಕ್ಕೆ ಪ್ರತಿಕ್ರಿಯಿಸಿದ ಮಂಕಾಳು ವೈದ್ಯ, ಯೋಜನೆಯನ್ನು ಕೈಬಿಡುವಂತೆ ಜಿಲ್ಲಾ ಕೆಡಿಪಿ ಸಭೆಯಲ್ಲಿಯೂ ನಿರ್ಣಯ ಕೈಗೊಳ್ಳಲಾಗಿದೆ. ಈ ಹೋರಾಟಕ್ಕೆ ತಮ್ಮ ಸಂಪೂರ್ಣ ಬೆಂಬಲವಿದೆ. ಶಿರಸಿ, ಯಲ್ಲಾಪುರ ಹಾಗೂ ಕುಮಟಾ ಶಾಸಕರೊಂದಿಗೆ ಮುಖ್ಯಮಂತ್ರಿಯನ್ನು ಭೇಟಿ ಮಾಡಲಾಗುವುದು. ನೀರಿಲ್ಲದ ಬೇಡ್ತಿ ಯೋಜನೆ ವ್ಯರ್ಥವಾಗಿದ್ದು, ಯೋಜನೆ ಕೆಬಿಡುವ ನಿಟ್ಟಿನಲ್ಲಿ ಪೂಜ್ಯರ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡುತ್ತೇವೆ ಎಂದರು.
ಬೇಡ್ತಿ-ಅನಾಶಿನಿ ಸಮಿತಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಮಾತನಾಡಿ, ನದಿ ತಿರುವು ಯೋಜನೆಯ ಸರ್ವೇ ಟೆಂಡರ್​ ಪ್ರಕ್ರಿಯೆಯನ್ನು ಕೂಡಲೇ ನಿಲ್ಲಿಸಬೇಕು ಎಂದು ಆಗ್ರಹಿಸಿದರು.
ಸೆ. 3ರಂದು ಕಾರವಾರ ಚಲೋ ಹೋರಾಟ ಹಮ್ಮಿಕೊಳ್ಳಲಾಗಿದೆ. ಆ. 26ರಂದು ನಡೆಯುವ ಬೇಡ್ತಿ ಸಭೆಯಲ್ಲಿ ಮುಂದಿನ ಹೋರಾಟದ ರೂಪುರೇಷೆಗಳನ್ನು ಸಿದ್ಧಪಡಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಮಿತಿಯ ಮುಖಂಡರಾದ ಸುರೇಶ್ಚಂದ್ರ ಕೆಶಿನ್ಮನೆ, ಅನಂತ ಹುಳಗೋಳ, ನಿರಂಜನ, ವಿವೇಕ ಭಟ್ಟ, ಭುವನ್​ ಭಾಗವತ್​ ಸೇರಿದಂತೆ ಹಲವು ಯುವ ಮುಖಂಡರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net