ಸನವಳ್ಳಿ ಜಲಾಶಯದಲ್ಲಿ ಜಿಂಕೆ ಕಳೇಬರ ಪತ್ತೆ

ಮುಂಡಗೋಡ ಸನವಳ್ಳಿ ಜಲಾಶಯದಲ್ಲಿ ತೆಲಾಡುತ್ತಿರುವ ಜಿಂಕೆ ಕಳೇಬರ.
ಮುಂಡಗೋಡ ಸನವಳ್ಳಿ ಜಲಾಶಯದಲ್ಲಿ ತೆಲಾಡುತ್ತಿರುವ ಜಿಂಕೆ ಕಳೇಬರ.
Published on
ಮುಂಡಗೋಡ: ತಾಲೂಕಿನ ಸನವಳ್ಳಿ ಜಲಾಶಯದ ನೀರಿನಲ್ಲಿ ಜಿಂಕೆಯ ಕಳೇಬರ ಪತ್ತೆಯಾಗಿದೆ. ಜಲಾಶಯಕ್ಕೆ ನೀರು ಕುಡಿಯಲು ಬಂದಾಗ ನಾಯಿಗಳ ಗುಂಪು ಅಥವಾ ಕಾಡು ಪ್ರಾಣಿಯ ದಾಳಿಯಿಂದ ತಪ್ಪಿಸಿಕೊಳ್ಳಲು ಯತ್ನಿಸಿ ನೀರಿನಲ್ಲಿ ಮುಳುಗಿ ಮೃತಪಟ್ಟಿರಬೇಕು ಎಂದು ಅಂದಾಜಿಸಲಾಗಿದೆ. ನೀರಿನಲ್ಲಿ ತೇಲುತ್ತಿದ್ದ ಜಿಂಕೆಯ ಕಳೇಬರ ಕಂಡ ರೈತರು ಕೂಡಲೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಸಿಬ್ಬಂದಿ ಜಿಂಕೆ ಕಳೇಬರವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆ ಮಾಡಿಸಿ, ನಂತರ ಅಂತ್ಯಕ್ರಿಯೆ ಮಾಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net