ಪಾರಂಪರಿಕ ಜೀವವೈವಿಧ್ಯ ತಾಣ ಘೋಷಿಸಲಿ

ಅಪ್ಪೆಮಿಡಿ ಸಂರಕ್ಷಕರನ್ನು ಬಾಳೂರಿನಲ್ಲಿ ನಡೆದ ಕಾರ್ಯಾಗಾರದಲ್ಲಿ ಸನ್ಮಾನಿಸಲಾಯಿತು. ಜೀವವೈವಿಧ್ಯ ಮಂಡಳಿ ಅಧ್ಯಕ್ಷ ವಡ್ನಾಳ್ ಜಗದೀಶ,  ಪ್ರಸನ್ನ ತುಮರಿ, ಉಷಾ ಕಬ್ಬೇರ, ಅರುಣ್, ಅನಂತ ಹೆಗಡೆ ಅಶೀಸರ ಇದ್ದರು.
ಅಪ್ಪೆಮಿಡಿ ಸಂರಕ್ಷಕರನ್ನು ಬಾಳೂರಿನಲ್ಲಿ ನಡೆದ ಕಾರ್ಯಾಗಾರದಲ್ಲಿ ಸನ್ಮಾನಿಸಲಾಯಿತು. ಜೀವವೈವಿಧ್ಯ ಮಂಡಳಿ ಅಧ್ಯಕ್ಷ ವಡ್ನಾಳ್ ಜಗದೀಶ, ಪ್ರಸನ್ನ ತುಮರಿ, ಉಷಾ ಕಬ್ಬೇರ, ಅರುಣ್, ಅನಂತ ಹೆಗಡೆ ಅಶೀಸರ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಅಪ್ಪೆಮಿಡಿ ವಕ್ಷ ಸಮೂಹ ಪ್ರದೇಶದಲ್ಲಿ ಪಾದಯಾತ್ರೆ
  • ಸಮಾರೋಪದಲ್ಲಿ ನಿರ್ಣಯ
ಶಿರಸಿ: ಈಗಾಗಲೇ ಅಘನಾಶಿನಿ ಅಪ್ಪೆಮಿಡಿ ವಕ್ಷ ಸಮೂಹ ಪ್ರದೇಶಕ್ಕೆ ಪಾರಂಪರಿಕ ಜೀವವೈವಿಧ್ಯ ತಾಣ ಎಂದು ಘೋಷಣೆ ಮಾಡುವ ನಿರ್ಣಯ ಕೈಗೊಂಡಿದ್ದೇವೆ ಎಂದು ಕರ್ನಾಟಕ ಸರ್ಕಾರದ ಜೀವವೈವಿಧ್ಯ ಮಂಡಳಿ ಅಧ್ಯಕ್ಷ ವಡ್ನಾಳ್ ಜಗದೀಶ ಅವರು ತಿಳಿಸಿದರು.
ಅಘನಾಶಿನಿ ಕಣಿವೆಯಲ್ಲಿ ಮಾರ್ಚ್ 30ರಿಂದ ಆರಂಭವಾದ ಅಪ್ಪೆಮಿಡಿ ಮಾವು ವಕ್ಷ ವೈವಿಧ್ಯ ಸಮೀಕ್ಷೆ ಏಪ್ರೀಲ್ 1 ರ ಸಾಯಂಕಾಲ ಬಾಳೂರು ಸಮೀಪ ನಾಗರಕೋಡಿ ಎಂಬಲ್ಲಿ ಮುಕ್ತಾಯಗೊಂಡಿತು.
ಕಾರ್ಯಾಗಾರ- ಸಮಾರೋಪದಲ್ಲಿ ಮುಖ್ಯ ಅತಿಥಿಗಳಾಗಿ, ಅಪ್ಪೇಮಿಡಿ ತಳಿ ವೈವಿಧ್ಯ ಸಂರಕ್ಷಕರನ್ನು ಸನ್ಮಾನಿಸಿ, ಮಾತನಾಡಿದ ಅವರು, ಅಘನಾಶಿನಿ ಜೀವ ವೈವಿಧ್ಯದ ಗಣಿಯಾಗಿದ್ದು, ಅದನ್ನು ರಕ್ಷಿಸಿಕೊಳ್ಳುವ ಅಗತ್ಯವಿದೆ ಎಂದರು.
ರಾಷ್ಟ್ರೀಯ ಸಾಂಬಾರು ಮಂಡಳಿ ನಿರ್ದೇಶಕ ಪ್ರಸನ್ನ ತುಮರಿ ಮಾತನಾಡಿ, ಭಾರತ ಸರ್ಕಾರದ ರಾಷ್ಟ್ರೀಯ ಸಾಂಬಾರು ಮಂಡಳಿ ಕೇರಳದಲ್ಲಿ ಕೇಂದ್ರ ಕಚೇರಿ ಹೊಂದಿದೆ. ಮಂಡಳಿಯಲ್ಲಿ 53 ಸಾಂಬಾರು ಹುಟ್ಟುವಳಿಗಳಿವೆ. 54ನೇ ಸಾಂಬಾರು ವಕ್ಷವಾಗಿ ಅಪ್ಪೆಮಿಡಿ ಸೇರ್ಪಡೆ ಮಾಡಲು ಇಂದಿನ ಪಾದಯಾತ್ರೆ ಶಿಾರಸು ಮಾಡಿದೆ. ಈ ಬಗ್ಗೆ ತುರ್ತಾಗಿ ಅಗತ್ಯ ನಿರ್ಧಾರವನ್ನು ಮಂಡಳಿ ಕೈಗೊಳ್ಳುವಂತೆ ವಿಶೇಷ ಪ್ರಯತ್ನ ನಡೆಸುತ್ತೇನೆ ಎಂದರು.
ಜಾನ್ಮನೆ ವಲಯ ಅರಣ್ಯ ಅಧಿಕಾರಿ ಉಷಾ ಕಬ್ಬೇರ, ಅಪ್ಪೆಮಿಡಿ ಸಂರಕ್ಷಿತ ಪ್ರದೇಶ ಮಾನ್ಯತೆ ನೀಡಲು ಇಂದಿನ ಸಮಾವೇಶ ಶಿಾರಸು ಮಾಡಿದೆ. ಶಿರಸಿಯ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಸಂಘಟನಾ ಪ್ರಮುಖರು ಪ್ರಸ್ತಾವನಾ ಮನವಿ ಸಲ್ಲಿಸಬೇಕು. ಅಘನಾಶಿನಿಯ ವಿಶಿಷ್ಠ ತಳಿಗಳಿಗೆ ರಕ್ಷಣೆ ಬೇಕು ಎಂದರು.
ತೋಟಗಾರಿಕಾ ಇಲಾಖೆ ಅಧಿಕಾರಿ ಅರುಣ್, ಶಿವಮೊಗ್ಗ, ಶಿರಸಿ ಪ್ರದೇಶದ ಅಪ್ಪೆಮಿಡಿ ಮಾವಿಗೆ ಜಿಯಾಲಾಜಿಕಲ್ ಇಂಡಿಕೇಟರ್ ಎಂಬ ಭಾರತ ಸರ್ಕಾರದ ಮಾನ್ಯತೆ ನೀಡಲಾಗಿದೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಪಶ್ಚಿಮ ಘಟ್ಟ ಕಾರ್ಯಪಡೆ ಮಾಜಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ, ಜೀವವೈವಿಧ್ಯ ಅಧ್ಯಯನ ಹಲವು ಮುಖಗಳಲ್ಲಿ ತಜ್ಞರ ಮಾರ್ಗದರ್ಶನದಲ್ಲಿ ನಡೆದಿದೆ. ಅಪ್ಪೆಮಿಡಿ ವಕ್ಷನಾಶ ತಡೆಗೆ ಗ್ರಾಮ ಕಾವಲು ಸಮಿತಿ ರಚಿಸಲು ಅರಣ್ಯ ಇಲಾಖೆ ಮುಂದಾಗಲೇಬೇಕು ಎಂದು ಒತ್ತಾಯಿಸಿದರು.
ಸನ್ಮಾನಿತರಾದ ಶ್ರೀಪಾದ ಬಕ್ಕೇಮನೆ ಭಾರ್ಗವ ಶೀಗೆಹಳ್ಳಿ, ತ್ಯಾಗಲಿ ಸುಬ್ರಾಯ ಅವರು ತಳಿ ಉಳಿಸಿದ ಅನುಭವ ಹಂಚಿಕೊಂಡರು. ಸಾವಯುವ ಒಕ್ಕೂಟದ ಅಧ್ಯಕ್ಷ ವಿಶ್ವೇಶ್ವರ ಭಟ್ ಕೋಟೆಮನೆ ಪಾದಯಾತ್ರಿಗಳ ಒಟ್ಟಾಭಿಪ್ರಾಯ ಮಂಡಿಸಿದರು. ಗೋಪಾಲಕಷ್ಣ ತಂಗಾರ‌್ಮನೆ ಸ್ವಾಗತಿಸಿದರು. ಮಹೇಶ ಮುಕ್ರಮನೆ ವಂದಿಸಿದರು.

ನದಿ ತೀರದಲ್ಲಿ ಯಾತ್ರೆ

ಸಾಗರದಿಂದ ವಕ್ಷ ಆಂದೋಲನದ ಪ್ರಮುಖರಾದ ಕೆ.ವೆಂಕಟೇಶ, ಆನೆಗೊಳಿ ಸುಬ್ಬರಾವ್, ನಟೇಶ್ ಸೊರಬದ ಶ್ರೀಪಾದ ಬಿಚ್ಚುಗತ್ತಿ, ಮಾಜಿ ಪಂಚಾಯಿತಿ ಅಧ್ಯಕ್ಷೆ ಮಮತಾ ಶಮೆಮನೆ, ಅಘನಾಶಿನಿ ಸಾಕ್ಷ್ಯಚಿತ್ರ ನಿರ್ದೇಶಕ ಅಶ್ವಿನ ಕುಮಾರ, ಡಾ. ಪ್ರೀತಮ್, ವಿಜ್ಞಾನಿಗಳು, ಚಂದ್ರಶೇಖರ ಶಮೇಮನೆ ಮುಂತಾದವರು ಪಾಲ್ಗೊಂಡರು. ಅಪ್ಪೆಮಿಡಿ ಪಾದಯಾತ್ರೆಯಲ್ಲಿ ಶಿರಸಿ, ಸಿದ್ದಾಪುರ, ಯಲ್ಲಾಪುರ, ಕುಮಟಾ, ಬೆಂಗಳೂರು ಮುಂತಾದ ಸ್ಥಳಗಳಿಂದ 46 ಅಧ್ಯಯನಕಾರರು ಇದ್ದರು. ನದಿಯಲ್ಲಿ, ನದೀ ತೀರದಲ್ಲಿ ದಟ್ಟಾರಣ್ಯದ ಇಳಿಜಾರಿನಲ್ಲಿ ದುರ್ಗಮ ಅಘನಾಶಿನಿ ಕಣಿವೆಯಲ್ಲಿ ಸಾಗಿದ ಪಾದಯಾತ್ರೆ ಹಲವು ವಾಸ್ತವ, ಅಧ್ಯಯನಪೂರ್ಣ ಸಂಗತಿಗಳನ್ನು ಕಂಡುಹಿಡಿದಿದೆ. ಅಪ್ಪೆಮಿಡಿ ತಳಿ, ಗಣತಿ ಜತೆ, ಅಘನಾಶಿನಿ ನದಿಯ ಪ್ರಚಲಿತ ವಿದ್ಯಮಾನಗಳ ಮೇಲೆ ಬೆಳಕು ಚೆಲ್ಲಲು ಸಾಧ್ಯವಾಗಿದೆ. ಎಂದು ಸಂಚಾಲಕ ಡಾ. ಬಾಲಚಂದ್ರ ಸಾಯಿಮನೆ ಮಾಹಿತಿ ನೀಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net