ಕಾರವಾರ: ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ವಿಶೇಷ ಪೂಜೆ ಸಲ್ಲಿಸುವ ಸಲುವಾಗಿ ಗೋಕರ್ಣ ಸಮೀಪದ ಆಂದ್ಲೆಗೆ ತಲುಪಿದ್ದಾರೆ.
ರಾಜ್ಯದಲ್ಲಿ ಅಧಿಕಾರ ಹಸ್ತಾಂತರದ ಚರ್ಚೆ ನಡೆದಿರುವ ಸಂಧಿ ಕಾಲದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಗ್ರಾಮವೊಂದರ ದೇವಾಲಯಕ್ಕೆ ಪೂಜೆಗೆ ಬರುತ್ತಿರುವುದು ಸಾಕಷ್ಟು ಕುತೂಹಲ ಕೆರಳಿಸಿದೆ.
ಅವರು 2019 ರಲ್ಲಿಯೂ ಅವರು ದೇವಾಲಯಕ್ಕೆ ಬಂದಿದ್ದರು.
ಹೆಲಿಕಾಪ್ಟರ್ ಮೂಲಕ ಆಗಮನ
ಬೆಳಗಾವಿಯಿಂದ ಹೆಲಿಕಾಪ್ಟರ್ ಮೂಲಕ ಆಗಮಿಸಿದ ಅವರು, ಗೋಕರ್ಣ ಖಾಸಗಿ ರೆಸಾರ್ಟ್ ನಲ್ಲಿ ಬೆಳಗಿನ ಉಪಹಾರ ಸವಿದರು.
ನಂತರ ಅಂಕೋಲಾ ತಾಲೂಕಿನ ಮೊಗಟಾ ಗ್ರಾಪಂ ವ್ಯಾಪ್ತಿಯ ಆಂದ್ಲೆ ಕಡ್ಲೆಬೇಣ ಜಗದೀಶ್ವರಿ ದೇವಸ್ಥಾಕ್ಕೆ ತಲುಪಿದ್ದಾರೆ.
ಕಡ್ಲೆಬೇಣ ಜಗದೀಶ್ವರಿ ದೇವಸ್ಥಾನದಲ್ಲಿ ಇಂದು ಡಿ.ಕೆ.ಶಿವಕುಮಾರ್ ಕುಟುಂಬದಿಂದ ವಿಶೇಷ ಪೂಜಾ ಕಾರ್ಯ ನಡೆಯಲಿದೆ.
ಬೆಳಗ್ಗೆ ಡಿ.ಕೆ.ಶಿವಕುಮಾರ ಅವರ ಕುಟುಂಬಸ್ಥರು, ಆಪ್ತರ ಸಮ್ಮುಖದಲ್ಲಿ ಸಂಕಲ್ಪ ಮಾಡಿ ಬೆಳಗಿನ ಪೂಜೆ ಮಾಡಲಾಗಿದೆ.
ಈಗ ಡಿ.ಕೆ.ಶಿವಕುಮಾರ ಹೆಸರಲ್ಲೇ ಸಂಕಲ್ಪ ಮಾಡಿ ಪೂಜೆ ನಡೆಯುತ್ತಿದೆ.
2019 ರಲ್ಲಿ ಭೆಟಿ
ಇಡಿ ದಾಳಿ ನಡೆದಾಗ ಡಿ.ಕೆ.ಶಿವಕುಮಾರ್ ಅವರು ಇಲ್ಲಿಗೆ ಭೇಟಿ ನೀಡಿ ಹರಕೆ ಒಪ್ಪಿಸಿದ್ದರು. ನಂತರ ಈಗ ಎರಡನೇ ಬಾರಿ ಬರುತ್ತಿದ್ದಾರೆ.
ಕಳೆದ ಐದಾರು ವರ್ಷಗಳಿಂದ ಅವರ ಕುಟುಂಬದವರು ಇಲ್ಲಿಗೆ ಬರುತ್ತಿದ್ದಾರೆ. ಅವರು ಹೇಳಿದ ಪೂಜೆ ಮಾಡಿಕೊಳ್ಳುತ್ತಿದ್ದಾರೆ. ಹೇಳಿಕೆ ಏನು ಮಾಡಿಕೊಂಡರು ಎಂದು ಬಹಿರಂಗ ಮಾಡಲು ಸಾಧ್ಯವಿಲ್ಲ ಎಂದು ದೇವಸ್ಥಾನದ ಅರ್ಚಕ ಗಣೇಶ ನಾಯ್ಕ ತಿಳಿಸಿದರು.