ದಾಂಡೇಲಿ ಸಮಗ್ರ ಹೋರಾಟ ಸಮಿತಿಯ ಉಪಾಧ್ಯಕ್ಷ ಅಶೋಕ ಪಾಟೀಲ ಮಾತನಾಡಿ, ಉತ್ತರ ಕನ್ನಡ ಜಿಲ್ಲೆಯಲ್ಲಿ ಕೆಎಚ್‌ಬಿ 2000 ದಿಂದ 2015 ರವರೆಗೂ ವಿವಿಧೆಡೆ ನಿವೇಶನಗಳ ಬೇಡಿಕೆ ಸಮೀಕ್ಷೆ ಮಾಡಿತ್ತು. ಜನರಿಂದ ಅರ್ಜಿ ಸ್ವೀಕರಿಸಲಾಗಿತ್ತು. ಕಾರವಾರ ಹಣಕೋಣದಲ್ಲಿ ಕಾಲನಿ ನಿರ್ಮಾಣಕ್ಕಾಗಿ 3126, ಸದಾಶಿವಗಡದಲ್ಲಿ 2075 ಅರ್ಜಿಗಳು ಬಂದಿದ್ದವು. ಅಂಕೋಲಾ 794, ಜೊಯಿಡಾ ಹಳಿಯಾಳ 1527, ಹೊನ್ನಾವರ 2438, ಹಳಿಯಾಳ 1769, ಶಿರಸಿ 4560, ಸಿದ್ದಾಪುರ 947, ದಾಂಡೇಲಿ 3353, ಭಟ್ಕಳ 446, ಯಲ್ಲಾಪುರ 182, ಮುರ್ಡೇಶ್ವರ-1328 ಸೇರಿ ಒಟ್ಟು 22545 ನಿವೇಶನಗಳಿಗಾಗಿ ಅರ್ಜಿ ಸ್ವೀಕರಿಸಲಾಗಿತ್ತು. ಆದರೆ ಯಾವುದೇ ಹೊಸ ಕಾಲನಿಗಳನ್ನು ಇದುವರೆಗೂ ನಿರ್ಮಿಸಿಲ್ಲ. ಮೇಲಾಗಿ ಅರ್ಜಿ ಸಲ್ಲಿಸುವ ವೇಳೆ 2.22 ಕೋಟಿ ರೂ. ಹಾಣ ಸಂಗ್ರಹಿಸಿದ್ದು, ಅದನ್ನೂ ಜನರಿಗೆ ವಾಪಸ್ ನೀಡಿಲ್ಲ ಎಂದರು.