ಕಾರವಾರದಲ್ಲಿ ಸಿಲಿಂಡರ್‌ ಬ್ಲಾಸ್ಟ್‌: ಮನೆ ಧ್ವಂಸ

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
ಕಾರವಾರ: ಸಿಲಿಂಡರ್ ಬ್ಲಾಸ್ಟ್ ಆಗಿ ಮನೆಯ ಸಾಮಗ್ರಿಗಳು ಸುಟ್ಟ ಘಟನೆ ಶುಕ್ರವಾರ ನಗರದ ಬ್ರಹ್ಮಕಟ್ಟಾ ವಾಗ್ಳೇವಾಡದಲ್ಲಿ ನಡೆದಿದೆ.
ಲತಾ ದಯಾನಂದ ನಾಯ್ಕ ಅವರಿಗೆ ಸೇರಿದ ಮನೆಯಲ್ಲಿ ಅಡುಗೆ ಸಿಲಿಂಡರ್ ಮೇಲಿನ ಸೇಫ್ಟಿ ವಾಲ್ ತೆರೆದು ಕಿತ್ತು ಮೇಲೆ ಹಾರಿದೆ. ಇದರಿಂದ ಗ್ಯಾಸ್ ಹೊರ ಬಂದು ಬೆಂಕಿ ಹೊತ್ತಿಕೊಂಡಿದೆ. ಹಂಚಿನ ಮನೆಯಾಗಿದ್ದು, ಮೇಲ್ಛಾವಣಿ ಕಿತ್ತು ಹೋಗಿದೆ.
ಭಾರಿ ಸದ್ದು ಕೇಳಿ ಮನೆಯಲ್ಲಿದ್ದ ವೃದ್ಧೆಯೋರ್ವರು ಹೊರಗೆ ಓಡಿ ಬಂದರು. ಇತರ‍್ಯಾರೂ ಇಲ್ಲದ ಕಾರಣ ಹೆಚ್ಚಿನ ಅನಾಹುತ ಸಂಭವಿಸಿಲ್ಲ. ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ತೆರಳಿ ಬೆಂಕಿ ನಂದಿಸುವ ಕಾರ್ಯ ಮಾಡುತ್ತಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net