ಆರು ಜನ ಅಂತರ ಜಿಲ್ಲಾ ಗೋ ಕಳ್ಳರ ಬಂಧನ

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
ಶಿರಸಿ: ಆರು ಜನ ಅಂತರ್ ಜಿಲ್ಲಾ ದನಗಳ್ಳರನ್ನು ಗ್ರಾಮೀಣ ಪೊಲೀಸರು ಗುರುವಾರ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಗೊಲ್ಲರ ಬಿಡಾರದ ಮೋಹನ ಶೇಖಪ್ಪ ಗೊಲ್ಲರ(25), ಬಸವರಾಜ ಅಮ್ಮಣಪ್ಪ ಗೊಲ್ಲರ(35) ಅವಿನಾಶ  ರುದ್ದಪ್ಪ ಗೊಲ್ಲರ (22) ಸುರೇಶ ಫಕೀರಪ್ಪ ಕೊಪ್ಪರಶಿಕೊಪ್ಪ ಗೊಲ್ಲರ(35), ಬಸವರಾಜ ಫಕೀರಪ್ಪ ಗೊಲ್ಲರ (47), ಅಯೂಬ ಅನೀಮ್ ಸಾಬ(54) ಬಂಧಿತರು. ತಾಲೂಕಿನ ಬಿಳಗೇರಿ ಸರಗುಪ್ಪಾದಲ್ಲಿ ಜ.9 ರಂದು ಗ್ರಾಮದ ನಿವಾಸಿ ರಾಮಚಂದ್ರ ನರಸಿಂಹ ಗೌಡ ಮತ್ತು ಅವರ ಬಸಹೋದರರ ಹೊಲದಲ್ಲಿರುವ ಕೊಟ್ಟಿಗೆಗಳಲ್ಲಿ ಕಟ್ಟಿದ್ದ ನಾಲ್ಕು ಎತ್ತುಗಳು ಮತ್ತು ಮೂರು ಹೊರಿಗಳನ್ನು 
ಯಾರೋ ಆರೋಪಿತರು ಕಳ್ಳತನ ನಡೆಸಿದ ಕುರಿತು ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ದನಗಳ್ಳತನ ಪ್ರಕರಣವನ್ನು ಪೊಲೀಸ್ ಇಲಾಖೆಯು ಗಂಭೀರವಾಗಿ ಪರಿಗಣಿಸಿ, ವಿಶೇಷ ತಂಡ ರಚಿಸಲಾಗಿತ್ತು. ತನಿಖೆ ಕೈಗೊಂಡ ಪೊಲೀಸರು ಜಾನುವಾರುಗಳನ್ನು ಕಳ್ಳತನ 
ಮಾಡುವ ಗ್ಯಾಂಗ್‌ನ್ನು ತಂಡಗಳು ಪತ್ತೆ ಹಚ್ಚಿ ಗ್ಯಾಂಗಿನ ಒಟ್ಟೂ 6 ಆರೋಪಿಗಳನ್ನು ಬಂಧಿಸಿ, 3 ಜಾನುವಾರುಗಳನ್ನು ರಕ್ಷಿಸಿ, ಕೃತ್ಯಕ್ಕೆ ಬಳಸಿದ್ದ 3 ಲಕ್ಷ ರೂ. ಮೌಲ್ಯದ ಮಹಿಂದ್ರಾ ಪಿಕ್ ಅಪ್ ವಾಹನ ಮತ್ತು  ಬೈಕ್ ವಶಪಡಿಸಿಕೊಂಡಿದ್ದಾರೆ. 
ಪ್ರಕರಣದಲ್ಲಿ ಇನ್ನೂ 4 ಆರೋಪಿತರು ನಾಪತ್ತೆಯಾಗಿದ್ದು, ಅವರನ್ನು ಬಂಧಿಸಲು ಪೊಲೀಸರು ಕ್ರಮ ವಹಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net