ಗೋಕರ್ಣದಿಂದ ಮಹಾರಾಷ್ಟ್ರ ಕಡೆಗೆ ತೆರಳುತ್ತಿದ್ದ ಕಾರಿಗೆ ಗೋವಾದಿಂದ ಕೊಚ್ಚಿಗೆ ತೆರಳುತ್ತಿದ್ದ ಕಂಟೇನರ್ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಸಂಕ್ರುಬಾಗ ಬಳಿ ಡಿಕ್ಕಿಯಾಗಿದೆ. ನಂತರ ಪಕ್ಕದ ಗುಡ್ಡಕ್ಕೆ ಬಡಿದು ಕಾರಿನ ಮೇಲೆ ಪಲ್ಟಿಯಾಗಿದೆ. ಕಾರು ಸಂಪೂರ್ಣ ನುಜ್ಜುಗುಜ್ಜಾಗಿದೆ. ಕಾರಿನ ಹಿಂದಿನ ಸೀಟಿನಲ್ಲಿ ಪ್ರಯಾಣಿಸುತ್ತಿದ್ದ ಮಹಾರಾಷ್ಟ್ರ ರಾಜ್ಯದ ಕೃಷಿ ನಗರ ಸಂಗಮ ಚೌಕ್ ನಿವಾಸಿ ವಿಯಾನ್ ಪ್ರಕಾಶ ವಾಘ(8) ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಬಾಲಕನ ತಂದೆ ಪ್ರಕಾಶ ವಾಘ(48), ತಾಯಿ ಅಮೃತಾ ವಾಘ(38), ಅಕ್ಕ ಭೂಮಿಕಾ(16) ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಕ್ರಿಮ್ಸ್ ಆಸ್ಪತ್ರೆಗೆ ಸೇರಿಸಲಾಗಿದೆ. ಘಟನೆಯಿಂದ ರಾಷ್ಟಿçÃಯ ಹೆದ್ದಾರಿಯ ವಾಹನ ಸಂಚಾರದಲ್ಲಿ ವ್ಯತ್ಯಯವಾಗಿತ್ತು. ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.