ಭಟ್ಕಳ: ಇತ್ತೀಚೆಗೆ ತಾಲೂಕಿನ ಅಳಿವೆಕೋಡಿ ದುರಂತದಲ್ಲಿ ಮೃತಪಟ್ಟವರ ಕುಟುಂಬದ ಸದಸ್ಯರುಗಳಿಗೆ ಶ್ರೀ ಅರುಣಾನಂದ ಸ್ವಾಮೀಜಿ ಭೇಟಿ ನೀಡಿ ಸಾಂತ್ವನ ಹೇಳಿದರು.
ಮಹಾಕಾಳಿ ಸಂಸ್ಥಾನ ಸದ್ಧರ್ಮ ಪೀಠ ನಿಪ್ಪಾಣಿ ಪೀಠಾಧಿಪತಿಗಳೂ ಹಾಗೂ ಈಡಿಗ ನಾಮಧಾರಿ ಸಮಾಜದ ಗುರುಗಳೂ ಆಗಿರುವ ಶ್ರೀ ಅರುಣಾನಂದ ಸ್ವಾಮೀಜಿ ಅವರು ಮೃತರ ಮನೆಗಳಿಗೆ ಭೇಟಿ ನೀಡಿ ಕುಟುಂಬಸ್ಥರ ನೋವಿನಲ್ಲಿ ಭಾಗಿಯಾದರು. ಕುಟುಂಬ ಸದಸ್ಯರೊಂದಿಗೆ ಮಾತನಾಡಿ ಟನೆಯ ಕುರಿತು ಸಂಪೂರ್ಣ ಮಾಹಿತಿ ಪಡೆದುಕೊಂಡರು.
ಈ ದುರ್ಟನೆಯ ವಿಚಾರವನ್ನು ಬೆಂಗಳೂರಿನಲ್ಲಿ ನಡೆದ ಈಡಿಗ ಸಮಾಜದ ಎಲ್ಲಾ ಪಂಗಡಗಳ ಸಭೆಯಲ್ಲಿಯೂ ಪ್ರಸ್ತಾಪಿಸಿದ್ದಾಗಿ ಅವರು ತಿಳಿಸಿದರು. ಮೃತರ ಕುಟುಂಬಗಳ ಸಂಕಷ್ಟದ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಗಿದ್ದು, ಅವರಿಗೆ ಸರ್ಕಾರದಿಂದ ಹೆಚ್ಚಿನ ಪರಿಹಾರ ದೊರಕುವಂತೆ ಪ್ರಯತ್ನಿಸುವ ಭರವಸೆ ನೀಡಿದರು.
ಅಲ್ಲದೇ ಮಠದ ವತಿಯಿಂದಲೂ ಅಗತ್ಯ ಸಹಾಯ ಸಹಕಾರ ನೀಡಲಾಗುವುದು ಎಂದು ಸ್ವಾಮೀಜಿ ಭರವಸೆ ನೀಡಿದರು.