ಶಿರಸಿ, ಭಟ್ಕಳ, ಕುಮಟಾ ಹಾಗೂ ಹಳಿಯಾಳದಲ್ಲಿ ಸದ್ಯ ಇಂದಿಗೆ ಸಮಸ್ಯೆ ಉಂಟಾಗಿಲ್ಲ. ಇನ್ನೊಂದು ದಿನ ವಾಣಿಜ್ಯ ಸಿಲಿಂಡರ್ ಪೂರೈಕೆ ಸ್ಥಗಿತವಾದಲ್ಲಿ ಅದು ಊಟದ ಮೆನುವಿನಲ್ಲಿ ಪರಿಣಾಮ ಬೀರುವ ಸಾಧ್ಯತೆ ಇದೆ. ಮತ್ತೆ ವಾಣಿಜ್ಯ ಸಿಲಿಂಡರ್ ಪೂರೈಕೆಯಾಗದೇ ಇದ್ದರೆ ಊಟ, ತಿಂಡಿಯ ಮೆನುವಿನಲ್ಲಿ ಕೆಲವು ಉತ್ಪನ್ನ ಕಡಿಮೆ ಮಾಡುವುದು ಅನಿವಾರ್ಯ ಎನ್ನುತ್ತಾರೆ ಕುಮಟಾ ಪಾಂಡುರಂಗ ಹೋಟೆಲ್‌ನ ಮಾಲೀಕ ಆನಂದ ಪೈ.