ಯಲ್ಲಾಪುರ ತಾಲೂಕಿನ ಸೂಳಗಾರಿನಲ್ಲಿ ನಡೆದ ಸಂಸ್ಮರಣಾ ಕಾರ್ಯಕ್ರಮದಲ್ಲಿ ದಿ. ಮಹಾಬಲೇಶ್ವರ ಭಟ್ಟ ಹಾಗೂ ದಿ.ಚಿದಂಬರ ಭಟ್ಟ ಅವರ ಕುಟುಂಬದವರನ್ನು ಗೌರವಿಸಲಾಯಿತು. ಹರಿಪ್ರಕಾಶ ಕೋಣೆಮನೆ, ಗೋಪಾಲಕೃಷ್ಣ ಭಟ್ಟ, ನಾರಾಯಣ ಭಟ್ಟ, ವಿ.ಟಿ. ಹೆಗಡೆ, ವಿಶಾಲ ನಾಯಕ, ಆರ್.ಎಸ್. ಭಟ್ಟ, ಗಣಪತಿ ಭಟ್ಟ ಇತರರಿದ್ದರು.
ಸ್ಥಳೀಯ ಕಲಾವಿದರಿಂದ ರಕ್ತರಾತ್ರಿ ಪೌರಾಣಿಕ ನಾಟಕ ಪ್ರದರ್ಶನ
ಯಲ್ಲಾಪುರ: ಪುರೋಹಿತ, ಕಲಾವಿದ ದಿ.ಮಹಾಬಲೇಶ್ವರ ಭಟ್ಟ ನೇರಲಮನೆ ಹಾಗೂ ಕಲಾವಿದ ದಿ. ಚಿದಂಬರ ಭಟ್ಟ ಸೂಳಗಾರ ಅವರ ಸಂಸ್ಮರಣೆ ಕಾರ್ಯಕ್ರಮ ತಾಲೂಕಿನ ಸೂಳಗಾರ ಶಾಲೆಯ ಆವಾರದಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ಶನಿವಾರ ನಡೆಯಿತು.
ಸಂಸ್ಮರಣಾ ಕಾರ್ಯಕ್ರಮವನ್ನು ವೇ. ವೆಂಕಟ್ರಮಣ ಭಟ್ಟ ಗುರ್ತೆಗದ್ದೆ ಉದ್ಘಾಟಿಸಿದರು. ಶಿರಸಿಯ ನರೇಬೈಲ್ ಚಂದನ ಆಂಗ್ಲ ಮಾಧ್ಯಮ ಶಾಲೆಯ ಮಕ್ಕಳಿಂದ ಚಕ್ರವ್ಯೆಹ ತಾಳಮದ್ದಲೆ ನಡೆಯಿತು. ಉಪನ್ಯಾಸ ಕಾರ್ಯಕ್ರಮದಲ್ಲಿ ವೈದಿಕರ ಕರ್ತವ್ಯಗಳು ಕುರಿತು ರಾಮಕೃಷ್ಣ ಭಟ್ಟ ಮಾಗೋಡ ಹಾಗೂ ಹವ್ಯಕರಲ್ಲಿರಬೇಕಾದ ಆಚಾರಗಳ ಕುರಿತಾಗಿ ಡಾ. ಮಹೇಶ ಭಟ್ಟ ಇಡಗುಂದಿ ಉಪನ್ಯಾಸ ನೀಡಿದರು. ಡಾ. ಶಂಕರ ಭಟ್ಟ ಬಾಲಿಗದ್ದೆ ಅಧ್ಯಕ್ಷತೆ ವಹಿಸಿದ್ದರು. ಗಣೇಶ ಹೆಗಡೆ ನೆರ್ಲೆಮನೆ ತಂಡದಿಂದ ಸಂಗೀತ ಸಂಜೆ, ಅರ್ಪಿತಾ ಭಟ್ಟ ಅಂಕೋಲಾ ಅವರಿಂದ ಯಕ್ಷನೃತ್ಯ, ವಿದುಷಿ ಸುಮಾ ಹೆಗಡೆ ತೊಂಡೆಕೆರೆ ತಂಡದಿಂದ ಭರತನಾಟ್ಯ ಕಾರ್ಯಕ್ರಮ ನಡೆಯಿತು.
ನುಡಿನಮನ ಕಾರ್ಯಕ್ರಮವನ್ನು ವಿಶ್ವದರ್ಶನ ಶಿಕ್ಷಣ ಸಮೂಹದ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ ಉದ್ಘಾಟಿಸಿದರು. ಪ್ರಣವ ಪ್ರತಿಷ್ಠಾನದ ಅಧ್ಯಕ್ಷ ಗೋಪಾಲಕೃಷ್ಣ ಭಟ್ಟ ಹಂಡ್ರಮನೆ ಅಧ್ಯಕ್ಷತೆ ವಹಿಸಿದ್ದರು. ದಿ. ಮಹಾಬಲೇಶ್ವರ ಭಟ್ಟ ಅವರ ಕುರಿತು ವೇ. ಗಣಪತಿ ಭಟ್ಟ ಮಾಗೋಡ ಹಾಗೂ ದಿ. ಚಿದಂಬರ ಭಟ್ಟ ಅವರ ಕುರಿತು ವಿದ್ವಾನ್ ನಾರಾಯಣ ಭಟ್ಟ ಸೂಳಗಾರ ನುಡಿನಮನ ಸಲ್ಲಿಸಿದರು. ದಿ. ಮಹಾಬಲೇಶ್ವರ ಭಟ್ಟ ಹಾಗೂ ದಿ.ಚಿದಂಬರ ಭಟ್ಟ ಅವರ ಕುಟುಂಬದವರನ್ನು ಗೌರವಿಸಲಾಯಿತು.
ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಆರ್.ಎಸ್. ಭಟ್ಟ, ಸೀಮಾ ಪರಿಷತ್ ಅಧ್ಯಕ್ಷ ನಾಗೇಶ ಹೆಗಡೆ ಪಣತಗೇರಿ, ಚಂದಗುಳಿ ದೇವಸ್ಥಾನದ ಅಧ್ಯಕ್ಷ ಲಕ್ಷ್ಮೀನಾರಾಯಣ ಭಟ್ಟ ತಾರೀಮಕ್ಕಿ, ಅನಂತ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ವಿ.ಟಿ. ಹೆಗಡೆ ಇತರರಿದ್ದರು. ಸಿರಿ ಕಲಾ ಬಳಗದ ಅಧ್ಯಕ್ಷ ರವೀಂದ್ರ ಭಟ್ಟ, ಶಿಕ್ಷಕ ವಿಶಾಲ ನಾಯಕ ಕಾರ್ಯಕ್ರಮ ನಿರ್ವಹಿಸಿದರು. ನಂತರ ಸ್ಥಳೀಯ ಕಲಾವಿದರಿಂದ ರಕ್ತರಾತ್ರಿ ಪೌರಾಣಿಕ ನಾಟಕ ಪ್ರದರ್ಶನ ನಡೆಯಿತು.